ಬ್ರೇಕಿಂಗ್ ನ್ಯೂಸ್
17-08-25 03:02 pm HK News Desk ದೇಶ - ವಿದೇಶ
ಶ್ರೀನಗರ, ಆ.17: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಮತ್ತೆ ಮೇಘ ಸ್ಫೋಟವಾಗಿದ್ದು ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು ಚಂಡೀಗಢ -ಮನಾಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.
ಶನಿವಾರ ತಡರಾತ್ರಿ ಕಥುವಾ ಜಿಲ್ಲೆಯ ಜಾಂಗ್ಳೂಟ್ ಗ್ರಾಮದಲ್ಲಿ ಮೇಘ ಸ್ಫೋಟಗೊಂಡ ಬಗ್ಗೆ ವರದಿಯಾಗಿದ್ದು, ನಾಲ್ಕು ಜನ ಮೃತಪಟ್ಟಿದ್ದಾಗಿ ಮೂಲಗಳು ತಿಳಿಸಿವೆ. ಪಕ್ಕದ ಪೊಲೀಸ್ ಠಾಣೆ, ರೈಲ್ವೆ ಹಳಿ ಮತ್ತು ರಾಷ್ಟ್ರೀಯ ಹೆದ್ದಾರಿ -44ಕ್ಕೆ ಕೂಡ ಹಾನಿಯಾಗಿದೆ ಎಂದು ಸ್ಥಳೀಯ ಸಂಸದ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸ್ಥಳೀಯ ಆಡಳಿತ, ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳು ರಕ್ಷಣಾ ಕಾರ್ಯಕ್ಕೆ ಇಳಿದಿವೆ, ಪರಿಸ್ಥಿತಿಯ ಬಗ್ಗೆ ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಭಾರಿ ಮಳೆಯಾಗುತ್ತಿರುವ ಕಾರಣ ಭೂಕುಸಿತಗಳು ಸಂಭವಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಜನ ಆದಷ್ಟು ಅಪಾಯಕಾರಿ ಸ್ಥಳಗಳಿಂದ ಸ್ಥಳಾಂತರಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಕಳೆದ ವಾರವಷ್ಟೇ ಇಲ್ಲಿನ ಕಿಶ್ತವಾರ ಪ್ರದೇಶದಲ್ಲಿ ಭೂಕುಸಿತದಿಂದ 50 ಜನ ಮೃತಪಟ್ಟು 100ಕ್ಕೂ ಅಧಿಕ ಜನ ಗಾಯಗೊಂಡಿದ್ದರು.

![]()

ಹಿಮಾಚಲದಲ್ಲೂ ಅವಘಢ
ಹಿಮಾಚಲ ಪ್ರದೇಶದಲ್ಲೂ ಭಾನುವಾರ ಮಳೆ ಅವಘಢ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಡಿತಗೊಂಡಿದೆ.
ಜೀವ ಹಾನಿ ಸಂಭವಿಸಿಲ್ಲವಾದರೂ ಹೆದ್ದಾರಿಯ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಮಂಡಿ ಜಿಲ್ಲೆಯ ಎಸಿಪಿ ಸಚಿನ್ ಹಿರೇಮಠ್ ತಿಳಿಸಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಮಳೆ ಹಾನಿಯಿಂದ ಒಟ್ಟು 261 ಜನ ಮೃತಪಟ್ಟಿದ್ದಾರೆ. ಈ ಪೈಕಿ 136 ಜನ ಭೂಕುಸಿತ, ಮನೆ ನೆಲಸಮದಂತ ಘಟನೆಗಳಲ್ಲಿ ಹಾಗೂ 125 ಜನ ಮಳೆ ಸಂಬಂಧಿತ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತರಾಗಿದ್ದಾರೆ.
A cloudburst struck Jammu and Kashmir’s Kathua district on Sunday, leaving seven people dead and several others injured. The incident has once again highlighted the dangers of extreme weather in the region. Meanwhile, sudden flash floods in Himachal Pradesh have cut off key road connections, including the Chandigarh–Manali National Highway.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm