ಬ್ರೇಕಿಂಗ್ ನ್ಯೂಸ್
24-09-25 01:07 pm HK News Desk ದೇಶ - ವಿದೇಶ
ಹ್ಯೂಸ್ಟನ್, ಸೆ.24 : ಅಮೆರಿಕದ ಟೆಕ್ಸಾಸ್ ರಾಜ್ಯದ ಶುಗರ್ ಲ್ಯಾಂಡ್ ಪಟ್ಟಣದಲ್ಲಿ ನಿರ್ಮಿಸಲಾಗಿರುವ 90 ಅಡಿ ಎತ್ತರದ ಕಂಚಿನ ಹನುಮಂತನ ಪ್ರತಿಮೆ ಕುರಿತು ಅಮೆರಿಕದಲ್ಲಿ ವಿವಾದ ಭುಗಿಲೆದ್ದಿದೆ. ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರವಾಗಿದ್ದು ಟೆಕ್ಸಾಸ್ ರಾಜ್ಯದಲ್ಲಿ ಹಿಂದೂ ದೇವರಾದ ಹನುಮಂತನ ನಕಲಿ ಪ್ರತಿಮ ನಿರ್ಮಿಸಲಾಗಿದೆ. ನಾವಿದಕ್ಕೆ ಏಕೆ ಅನುಮತಿಸಬೇಕು? ಎಂದು ಸ್ಥಳೀಯ ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ವಿಡಿಯೊ ಸಮೇತ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಇನ್ನೊಂದು ಪೋಸ್ಟ್ನಲ್ಲಿ ಅವರು ಬೈಬಲ್ ಉಲ್ಲೇಖಿಸಿ, ''ನನ್ನ ನಂಬಿಕೆಯ ದೇವರು ಹೊರತುಪಡಿಸಿ ನಿಮಗೆ ಬೇರೆ ದೇವರು ಇರಬಾರದು. ನೀವು ನಿಮಗಾಗಿ ಯಾವುದೇ ರೀತಿಯ ವಿಗ್ರಹವನ್ನು ಸ್ವರ್ಗದಲ್ಲಿ, ಭೂಮಿಯಲ್ಲಿ ಅಥವಾ ಸಮುದ್ರದಲ್ಲಿ ಮಾಡಿಟ್ಟುಕೊಳ್ಳಬಾರದು," ಎಂದು ಬರೆದು ಉದ್ಧಟತನ ತೋರಿದ್ದಾರೆ.
ಡಂಕನ್ ಅವರ ಈ ಮಾತಿಗೆ ಅಮೆರಿಕದಲ್ಲಿರುವ ಹಿಂದೂ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹಿಂದೂ ಅಮೆರಿಕನ್ ಫೌಂಡೇಷನ್, ಇದೊಂದು ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆಯಾಗಿದೆ. ಟೆಕ್ಸಾಸ್ ಆಡಳಿತ, ನಿಮ್ಮ ಸ್ವಂತ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮತ್ತು ಹಿಂದೂ ವಿರೋಧಿ ದ್ವೇಷ ಹರಡುತ್ತಿರುವ ನಿಮ್ಮ ಪಕ್ಷದ ಸೆನೆಟ್ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡೊನಾಲ್ಡ್ ಟ್ರಂಪ್ ಅವರನ್ನು 'ಎಕ್ಸ್'ನಲ್ಲಿ ಆಗ್ರಹಿಸಿದೆ. ಈ ಹೇಳಿಕೆಯು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುತ್ತದೆ ಮತ್ತು ಅಮೆರಿಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದೂ ಎಚ್ ಎಎಫ್ ಹೇಳಿದೆ.
'ಎಕ್ಸ್' ಬಳಕೆದಾರರೊಬ್ಬರು, "ನೀವು ಹಿಂದೂ ಅಲ್ಲದ ಕಾರಣಕ್ಕೆ ಹನುಮನನ್ನು ಸುಳ್ಳು ದೇವ ಎಂದು ಹೇಳಲು ಸಾಧ್ಯವಿಲ್ಲ. ಯೇಸು ಭೂಮಿಗೆ ಬರುವ 2 ಸಾವಿರ ವರ್ಷಗಳ ಮೊದಲೇ ವೇದಗಳನ್ನು ರಚಿಸಲಾಗಿದೆ ಎಂದು ಕುಟುಕಿದ್ದಾರೆ. ಟೆಕ್ಸಾಸ್ನ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಭಗವಾನ್ ಹನುಮಂತನ 90 ಅಡಿ ಕಂಚಿನ ಪ್ರತಿಮೆ ಇದೆ. ಈ ಪ್ರತಿಮೆಯನ್ನು 2024ರಲ್ಲಿ ಅನಾವರಣಗೊಳಿಸಲಾಗಿದ್ದು, 'ಸ್ಟಾಚ್ಯೂ ಆಫ್ ಯೂನಿಯನ್' ಎಂದು ಕರೆಯಲಾಗುತ್ತಿದೆ. ಆಗಲೂ ಇದರ ವಿರುದ್ಧ ಟ್ರಂಪ್ ಬೆಂಬಲಿಗರಿಂದ ಅಭಿಯಾನ ನಡೆದಿತ್ತು.
A 90-foot-tall bronze statue of Hindu deity Hanuman in Sugar Land, Texas, has triggered controversy after a local Republican leader questioned why such a monument was allowed in what he described as a “Christian nation.”
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am