ಬ್ರೇಕಿಂಗ್ ನ್ಯೂಸ್
21-10-25 03:11 pm HK News Desk ದೇಶ - ವಿದೇಶ
ಇಸ್ಲಾಮಾಬಾದ್, ಅ.21 : ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಅವರನ್ನು ನಾಯಕ ಪಟ್ಟದಿಂದ ಕೆಳಗಿಳಿಸಲಾಗಿದೆ ಎಂದು ಪಾಕಿಸ್ತಾನ ತಂಡದ ಮಾಜಿ ಆಟಗಾರ ರಶೀದ್ ಲತೀಫ್ ಹೇಳಿಕೆ ನೀಡಿದ್ದು ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ ಚರ್ಚೆಗೆ ಕಾರಣವಾಗಿದೆ.
ರಿಜ್ವಾನ್ ಅವರ ಜಾಗಕ್ಕೆ ಶಾಹೀನ್ ಶಾ ಅಫ್ರಿದಿಯನ್ನು ನೇಮಿಸಲಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊಹಮ್ಮದ್ ರಿಜ್ವಾನ್ ಪ್ಯಾಲೆಸ್ತೀನ್ ಪರವಾಗಿ ಬಹಿರಂಗವಾಗಿ ಮಾತನಾಡಿದ್ದರು. ಈ ಕಾರಣಕ್ಕೆ ಅವರನ್ನು ನಾಯಕ ಸ್ಥಾನದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು.
ಕೋಚ್ ಮೈಕ್ ಹೆಸ್ಸನ್ ಅವರು ರಿಜ್ವಾನ್ ಅವರ ಡ್ರೆಸ್ಸಿಂಗ್ ರೂಮ್ ಸಂಸ್ಕೃತಿಯನ್ನು ಇಷ್ಟಪಡುತ್ತಿಲ್ಲ. ಇಸ್ಲಾಮಿಕ್ ದೇಶದಲ್ಲಿ ಇಸ್ಲಾಮಿಕ್ ಅಲ್ಲದ ನಾಯಕ ಬರಬೇಕು ಎಂಬ ಮನಸ್ಥಿತಿಯನ್ನು ಪಿಸಿಬಿ ಹೊಂದಿದೆ. ಪ್ಯಾಲೆಸ್ತೀನ್ ಧ್ವಜವನ್ನು ಬಹಿರಂಗವಾಗಿ ಪ್ರದರ್ಶನ ಮಾಡಿದ್ದಕ್ಕೆ ಅವರನ್ನು ತೆಗೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಕಳಪೆ ಪ್ರದರ್ಶನ ನೀಡಿದ್ದಕ್ಕೆ ರಿಜ್ವಾನ್ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ಇಳಿಸಿ ಶಾಹೀನ್ ಶಾ ಅಫ್ರಿದಿ ಅವರನ್ನು ಆಯ್ಕೆ ಮಾಡಲಾಗಿದೆ.
ಮೊಹಮ್ಮದ್ ರಿಜ್ವಾನ್ ಇಸ್ಲಾಂ ಮೌಲ್ಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟಿಗ ಇಮಾಮ್ ಉಲ್ ಹಕ್ ಈ ಹಿಂದೆ ಹೇಳಿದ್ದರು. ಯಾವುದೇ ಹೋಟೆಲ್‌ಗೆ ಹೋದಾಗ ರಿಜ್ವಾನ್ ಮೊದಲು ನಮಾಜ್ ಕೊಠಡಿಯನ್ನು ಹುಡುಕುತ್ತಾರೆ. ನಮಾಜ್ ಮಾಡಲು ಕೋಣೆಯಲ್ಲಿ ಬಿಳಿ ಬಟ್ಟೆಯನ್ನು ಹಾಸುತ್ತಾರೆ. ಮುಸ್ಲಿಮೇತರರು ಕೋಣೆ ಪ್ರವೇಶಕ್ಕೆ ನಿರ್ಬಂಧ ಹೇರುತ್ತಾರೆ. ನಮಾಜ್ ಸಮಯಕ್ಕಾಗಿ ವಾಟ್ಸಪ್ ಗ್ರೂಪ್ ರಚನೆ ಮಾಡುತ್ತಾರೆ ಎಂದು ತಿಳಿಸಿದ್ದರು.
The Pakistan Cricket Board (PCB) has appointed Shaheen Shah Afridi as the new ODI captain, replacing Mohammad Rizwan. Former cricketer Rashid Latif alleged that Rizwan was removed for promoting Islam and expressing support for Palestine, a claim that has gone viral online. However, the PCB has officially denied these allegations, stating that the leadership change was based on performance and team strategy, not religious or political reasons.
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 03:04 pm
HK News Desk
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳಿಗೆ...
02-12-25 10:25 pm
ಭೂತಾನ್, ಮ್ಯಾನ್ಮಾರ್, ಶ್ರೀಲಂಕಾದಿಂದ ಕಳಪೆ ಅಡಿಕೆ...
01-12-25 10:18 pm
ಡಿಜಿಟಲ್ ಅರೆಸ್ಟ್ ಪ್ರಕರಣ ಹೆಚ್ಚಳ ; ಗಂಭೀರ ಪರಿಗಣಿಸ...
01-12-25 09:28 pm
03-12-25 04:52 pm
Mangalore Correspondent
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
ಕ್ರಿಸ್ಮಸ್ ವೇಳೆಗೆ ಮಂಗಳೂರು- ಮುಂಬೈ ನಡುವೆ ವಾರದ ಎಲ...
01-12-25 03:08 pm
Kapu Accident, Udupi, Five Killed: ಕಾಪು ಬಳಿ...
30-11-25 06:03 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm