ಬ್ರೇಕಿಂಗ್ ನ್ಯೂಸ್
26-10-25 11:01 pm HK News Desk ದೇಶ - ವಿದೇಶ
ನವದೆಹಲಿ, ಅ.26 : ಇತ್ತೀಚೆಗೆ ಚೀನಾದ ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾಗ ಅವರನ್ನು ರಹಸ್ಯವಾಗಿ ಕೊಲ್ಲುವುದಕ್ಕೆ ಅಮೆರಿಕದ ಸಿಐಎ ಏಜೆಂಟರು ಸಂಚು ನಡೆಸಿದ್ದರೇ ಎಂಬ ಗಂಭೀರ ಅನುಮಾನ ಕೇಳಿಬಂದಿದೆ. ಇದಕ್ಕೆ ಕಾರಣವಾಗಿದ್ದು ಬಾಂಗ್ಲಾದಲ್ಲಿ ಸಿಐಎ ಏಜಂಟ್ ಆಗಿದ್ದ ಅಧಿಕಾರಿಯನ್ನು ನಿಗೂಢ ರೀತಿಯಲ್ಲಿ ಹತ್ಯೆ ಮಾಡಿರುವ ಸುದ್ದಿ.
ಅಮೆರಿಕ- ಭಾರತ ಮಧ್ಯೆ ಸಂಬಂಧ ಹಳಸಿರುವುದು, ರಷ್ಯಾದ ತೈಲ ವ್ಯಾಪಾರ ನಿಲ್ಲಿಸಬೇಕೆಂಬ ಒತ್ತಡಕ್ಕೆ ಭಾರತ ಸೊಪ್ಪು ಹಾಕದಿರುವುದು, ಡಬಲ್ ಸುಂಕ ಹೇರಿದರೂ ಪ್ರಧಾನಿ ಮೋದಿ ಬಗ್ಗದಿರುವುದು, ಇದರ ನಡುವಲ್ಲೇ ಚೀನಾ, ರಷ್ಯಾ ಜೊತೆಗೆ ಮೈತ್ರಿ ಮುಂದುವರಿಸಿರುವುದು ಅಮೆರಿಕದ ಸಿಟ್ಟಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಗುಪ್ತಚರ ಸಂಸ್ಥೆ ಸಿಐಎ ಮೂಲಕ ಭಾರತದ ಪ್ರಧಾನಿಯನ್ನು ಚೀನಾದಲ್ಲಿಯೇ ಕೊಲ್ಲಿಸಿ, ಅದರ ಹೊಣೆಯನ್ನು ಚೀನಾ ತಲೆಗೆ ಕಟ್ಟುವ ಸಂಚನ್ನು ಅಮೆರಿಕ ಹೆಣೆದಿತ್ತು ಎನ್ನುವ ಗಂಭೀರ ಅನುಮಾನ ವ್ಯಕ್ತವಾಗಿದೆ.
ಅಮೆರಿಕ- ಮ್ಯಾನ್ಮಾರ್ ಸೇನಾ ಸಮಾರಾಭ್ಯಾಸದ ನೆಪದಲ್ಲಿ ಬಾಂಗ್ಲಾದಲ್ಲಿ ನಿಯೋಜನೆ ಮಾಡಲಾಗಿದ್ದ ಸಿಐಎ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಎಂಬವರನ್ನು ಆಗಸ್ಟ್ 31ರಂದು ಢಾಕಾದಿಂದ ನೂರು ಕಿಮೀ ದೂರದ ಹೊಟೇಲ್ ಒಂದರಲ್ಲಿ ನಿಗೂಢ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಅಧಿಕಾರಿ ಹತ್ಯೆ ಸುದ್ದಿಯನ್ನು ಅಮೆರಿಕ ಗುಪ್ತವಾಗಿಟ್ಟಿದ್ದರೂ, ಇದು ಭಾರತ- ರಷ್ಯಾ ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯ ಫಲ ಎಂದೂ ಹೇಳಲಾಗುತ್ತಿದೆ.
ತಾಷ್ಕೆಂಟ್ ತೆರಳಿದ್ದ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನ ನಿಗೂಢ ರೀತಿಯಲ್ಲಿ ವಿಷಾಹಾರ ಕೊಟ್ಟು ಹತ್ಯೆ ಮಾಡಲಾಗಿತ್ತು. ಅಮೆರಿಕದ ಸಿಐಎ ಸಂಚು ಕೂಡ ತಾಷ್ಕೆಂಟ್ ರೀತಿಯಲ್ಲೇ ಇತ್ತು ಎನ್ನಲಾಗುತ್ತಿದೆ. ಮೋದಿಯನ್ನು ಚೀನಾ ನೆಲದಲ್ಲಿಯೇ ಹತ್ಯೆಗೈದು ಭಾರತ- ಚೀನಾ ಮೈತ್ರಿಯನ್ನು ಶಾಶ್ವತವಾಗಿ ಬಂದ್ ಮಾಡಿಸುವುದು ಇದರ ಹಿಂದಿದ್ದ ಹಿಡನ್ ಗುರಿ ಎಂದೂ ಹೇಳಲಾಗುತ್ತಿದೆ. ಆದರೆ ರಷ್ಯಾ – ಭಾರತದ ಲೆಕ್ಕಾಚಾರ ಅಮೆರಿಕದ ಸಂಚನ್ನು ಬುಡಮೇಲಾಗಿಸಿದೆ. ಇದಕ್ಕೆ ಶಾಂಘೈ ತೆರಳಿದ್ದಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಎಲ್ಲ ಶಿಷ್ಟಾಚಾರವನ್ನು ಬದಿಗೊತ್ತಿ ಭಾರತದ ಪ್ರಧಾನಿ ಮೋದಿಯನ್ನು ತನ್ನದೇ ಕಾರಿನಲ್ಲಿ ಕರೆದೊಯ್ದಿದ್ದು ಇಂಬು ನೀಡುತ್ತಿದೆ.
ಪುತಿನ್ ಅವರು ಮೋದಿಯನ್ನು ಹತ್ತು ನಿಮಿಷ ಕಾಲ ಕಾದು ತಮ್ಮದೇ ಕಾರಿನಲ್ಲಿ ಕರೆದೊಯ್ದಿದ್ದಲ್ಲದೆ, 45 ನಿಮಿಷ ಕಾಲ ಕಾರಿನಲ್ಲೇ ರಹಸ್ಯ ಮಾತುಕತೆ ನಡೆಸಿರುವುದು ಅಮೆರಿಕದ ಪಿತೂರಿಯ ಕುರಿತಾಗಿಯೇ ಎನ್ನುವ ಅನುಮಾನ ಮೂಡಿದೆ. ಇದರ ಬೆನ್ನಲ್ಲೇ ಢಾಕಾದಲ್ಲಿ ಅಮೆರಿಕದ ಸಿಐಎ ಏಜಂಟ್ ಹತ್ಯೆಯಾಗಿದ್ದಾನೆ. ಅಮೆರಿಕದ ಸಿಐಎ ಅಧಿಕಾರಿ ಬಾಂಗ್ಲಾದಲ್ಲಿ ಬಂದು ಉಳಿದುಕೊಂಡಿದ್ದೇ ನಿಗೂಢ ರೀತಿಯ ನಡೆ. ಯಾವುದೋ ಸಂಚಿನ ಭಾಗವಾಗಿ ಜಾಕ್ಸನ್ ಢಾಕಾಕ್ಕೆ ಬಂದಿದ್ದ ಎಂದು ಹೇಳಲಾಗುತ್ತಿದೆ. ಶಾಂಘೈನಿಂದ ಮರುದಿನ ನ.2ರಂದು ದೆಹಲಿಗೆ ಬಂದ ದಿನವೇ ಪ್ರಧಾನಿ ಮೋದಿ ಆಡಿದ್ದ ಮಾತು ಕೂಡ ನಿಗೂಢ ಅರ್ಥವನ್ನು ಕಲ್ಪಿಸಿತ್ತು.
ದೆಹಲಿಯಲ್ಲಿ ಆಯೋಜಿಸಿದ್ದ ಸೆಮಿಕಾನ್ ಸಮಿಟ್ ನಲ್ಲಿ ಪಾಲ್ಗೊಂಡಿದ್ದ ಮೋದಿ, ನೀವೆಲ್ಲ ಚಪ್ಪಾಳೆ ತಟ್ಟುತ್ತಿರುವುದು ನಾನು ಚೀನಾ ಹೋಗಿದ್ದಕ್ಕಾ ಅಥವಾ ಅಲ್ಲಿಂದ ಸುರಕ್ಷಿತವಾಗಿ ಹಿಂದೆ ಬಂದಿದ್ದಕ್ಕಾ ಎಂದು ಕೇಳುವ ಮೂಲಕ ಸಿನಿಕತನದ ಪ್ರಶ್ನೆ ಎತ್ತಿದ್ದರು. ಈ ಮಾತು ಸುಮ್ಮನೆ ಬಂದಿದ್ದಲ್ಲ, ನಿಗೂಢ ರೀತಿಯ ಅರ್ಥಗಳನ್ನು ಹೊಂದಿದ್ದರಿಂದಲೇ ಆ ರೀತಿ ಮೋದಿ ಮಾತಾಡಿದ್ದರು ಎಂದು ಕೆಲವು ವಿಶ್ಲೇಷಕರು ಅಂದಾಜಿಸಿದ್ದಾರೆ.
ಅಮೆರಿಕದ ಗುಪ್ತಚರ ಸಂಸ್ಥೆಗೆ ಈ ರೀತಿ ಇನ್ನೊಂದು ದೇಶದ ಸಾರ್ವಭೌಮತ್ವ ಅಧಿಕಾರದ ಮೇಲೆ ಸವಾರಿ ಮಾಡುವ ಇತಿಹಾಸವೇ ಇದೆ. ತನ್ನ ಮಾತು ಕೇಳದ ಇನ್ನೊಂದು ದೇಶದ ಸರ್ಕಾರವನ್ನು ಅಸ್ಥಿರಗೊಳಿಸುವುದು, ಅಲ್ಲಿನ ನಾಯಕರನ್ನು ಆಡಳಿತದಿಂದ ಕೆಳಕ್ಕಿಳಿಸುವುದನ್ನು ಇತಿಹಾಸದ ಉದ್ದಕ್ಕೂ ಮಾಡುತ್ತ ಬಂದಿದೆ. 1979ರ ಸೋವಿಯತ್- ಅಫ್ಘಾನ್ ಯುದ್ಧದಿಂದ ತೊಡಗಿ ಇತ್ತೀಚಿನ ನೇಪಾಳ, ಬಾಂಗ್ಲಾದೇಶದ ಕ್ರಾಂತಿಯಲ್ಲೂ ಸಿಐಎ ಪಾತ್ರ ಇರುವ ಶಂಕೆ ವ್ಯಕ್ತವಾಗಿತ್ತು. ಈಗ ಭಾರತದಲ್ಲೂ ತನ್ನ ಮಾತು ಕೇಳದ ಭದ್ರ ಸರಕಾರವನ್ನು ಅಸ್ಥಿರಗೊಳಿಸಲು ಸಿಐಎ ಯೋಜನೆ ಹಾಕಿದ್ದರಲ್ಲಿ ಅಚ್ಚರಿ ಇಲ್ಲ.
The mysterious death of US Special Forces officer Terrence Arvelle Jackson in a Dhaka hotel room on August 31 has sparked intense speculation about American intelligence activities in South Asia and a possible assassination plot against Prime Minister Narendra Modi.
19-11-25 02:16 pm
Bangalore Correspondent
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
19-11-25 11:10 am
HK News Desk
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
ರಾಜ್ಯದಲ್ಲಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ; ಸಿ...
15-11-25 11:12 pm
19-11-25 01:01 pm
Mangalore Correspondent
ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪ...
18-11-25 10:18 pm
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ...
17-11-25 06:16 pm
18-11-25 09:09 pm
Mangaluru Staff
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm
Ullal News, Animal Attack, Crime, Kumpala: ಕಣ...
14-11-25 11:16 am