ಬ್ರೇಕಿಂಗ್ ನ್ಯೂಸ್
11-11-25 10:56 pm HK News Desk ದೇಶ - ವಿದೇಶ
ನವದೆಹಲಿ, ನ.12 : ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಬಾಂಬ್ ಸ್ಫೋಟದ ತನಿಖೆ ತೀವ್ರ ಗತಿಯಲ್ಲಿ ನಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಾರು ಸ್ಫೋಟವು ಆತ್ಮಾಹುತಿ ಬಾಂಬ್ ಸ್ಫೋಟವಲ್ಲ. ಬದಲಿಗೆ ಶಂಕಿತ ವ್ಯಕ್ತಿ ಭಯಭೀತನಾಗಿ ಆತುರದಲ್ಲಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಭದ್ರತಾ ಸಂಸ್ಥೆಗಳು ಭಯೋತ್ಪಾದಕ ಜಾಲಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಹಲವಾರು ಮಾಹಿತಿಗಳನ್ನು ಕಲೆಹಾಕಿದೆ. ಕಾರು ಸೋಮವಾರ ಸಂಜೆ 3.15ರಿಂದ ಮೂರು ಗಂಟೆ ಕಾಲ ಮಸೀದಿಯೊಂದರ ಪಾರ್ಕಿಂಗ್ ಏರಿಯಾದಲ್ಲಿ ನಿಂತಿದ್ದು ಆನಂತರ 6.30ರ ವೇಳೆಗೆ ಅಲ್ಲಿಂದ ಹೊರಟು ಕೆಂಪು ಕೋಟೆ ಬಳಿಗೆ ಬಂದಿದ್ದ. 6.50ರ ವೇಳೆಗೆ ಕಾರು ಸಿಗ್ನಲ್ ನಲ್ಲಿ ನಿಂತಿದ್ದಾಗಲೇ ಆಕಸ್ಮಿಕ ಎನ್ನುವಂತೆ ಭಾರೀ ಸದ್ದಿನೊಂದಿಗೆ ಬ್ಲಾಸ್ಟ್ ಆಗಿತ್ತು. ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಒತ್ತಡದಿಂದ ತಾನೇ ಸ್ಫೋಟಿಸಿಕೊಂಡಿದ್ದಾನೆಯೇ, ಸ್ಫೋಟಕ ತುಂಬಿದ್ದ ಕಾರಿಗೆ ಬೇರೆ ಕಾರು ತಾಗಿ ಸ್ಫೋಟ ಆಗಿತ್ತೇ ಎನ್ನುವ ಶಂಕೆ ಮೂಡಿದೆ.
ಶಂಕಿತ ವ್ಯಕ್ತಿ ಆತ್ಮಾಹುತಿ ಬಾಂಬ್ ದಾಳಿಯ ರೀತಿ ಸಾಮಾನ್ಯ ಮಾದರಿಯನ್ನು ಅನುಸರಿಸಿಲ್ಲ. ಮತ್ತು ಕಾರನ್ನು ಉದ್ದೇಶಪೂರ್ವಕ ಡಿಕ್ಕಿ ಹೊಡೆಸಿಲ್ಲ ಎಂದು ಪೊಲೀಸ್ ಮೂಲಗಳು ANI ಗೆ ತಿಳಿಸಿವೆ. ಕೆಂಪು ಕೋಟೆ ಬಳಿ ನಡೆದ ಸ್ಫೋಟವು ಗರಿಷ್ಠ ಹಾನಿಯನ್ನುಂಟುಮಾಡುವ ಗುರಿಯನ್ನು ಹೊಂದಿರುವ ಆತ್ಮಹತ್ಯಾ ಬಾಂಬರ್‌ಗಳ ಕಾರ್ಯಾಚರಣೆ ವಿಧಾನವನ್ನು ಅನುಸರಿಸಿಲ್ಲ ಎಂದು ಹೇಳಿವೆ.
ಬಾಂಬ್ ಅಕಾಲಿಕವಾಗಿ ಬ್ಲಾಸ್ಟ್ ಆಗಿದೆ ಮತ್ತು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಸ್ಫೋಟಗೊಳಿಸಿರಲಿಲ್ಲ ಎಂದು ಏಜೆನ್ಸಿ ಮೂಲಗಳು ಬಹಿರಂಗಪಡಿಸಿವೆ. ಸ್ಫೋಟ ಸಂಭವಿಸಿದಾಗ ವಾಹನವು ಇನ್ನೂ ಚಲಿಸುತ್ತಿತ್ತು ಮತ್ತು ಭಾರೀ ಸಾವು, ನೋವುಗಳನ್ನು ಉಂಟು ಮಾಡುವಷ್ಟು ಸ್ಫೋಟಕ ಸಜ್ಜುಗೊಂಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಗೆ ತನಿಖೆ ಹೊಣೆ ವಹಿಸಿದ್ದು ಎಲ್ಲ ಆಯಾಮಗಳಿಂದ ತನಿಖೆ ನಡೆಯಿತ್ತಿದೆ. ಅಲ್ಲದೆ, ಕಾಶ್ಮೀರಿ ವೈದ್ಯ ಮೊಹಮ್ಮದ್ ಉಮರ್ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಕಾರಿನಲ್ಲಿದ್ದ ವ್ಯಕ್ತಿ ಆತನೇ ಎಂದು ರೇಖಾಚಿತ್ರವನ್ನು ಬಿಡುಗಡೆ ಮಾಡಿದೆ. ಇದೇ ವೇಳೆ, ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್ ಬಳಕೆಯಾಗಿರುವುದನ್ನು ಎಫ್ಎಸ್ಎಲ್ ತಂಡ ಪತ್ತೆ ಮಾಡಿದೆ.
The investigation into the car explosion near Red Fort in the national capital has gained significant momentum. Preliminary findings suggest that the blast was not a suicide bombing, but rather an accidental explosion triggered when the suspect panicked and acted hastily, according to police sources.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am