ಬ್ರೇಕಿಂಗ್ ನ್ಯೂಸ್
17-11-25 06:13 pm HK News Desk ದೇಶ - ವಿದೇಶ
ನವದೆಹಲಿ, ನ.17 : ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಉಮ್ರಾ ಯಾತ್ರಿಕರಿದ್ದ ಬಸ್ಸಿಗೆ ಡಿಸೇಲ್ ಟ್ಯಾಂಕರ್ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು ಹೈದರಾಬಾದ್ ಮೂಲದ 45 ಮಂದಿ ಭಾರತೀಯರು ಸಾವನಪ್ಪಿದ್ದಾರೆ.
ಭಾರತೀಯ ಕಾಲಮಾನ ಸೋಮವಾರ ನಸುಕಿನ 1.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಬಸ್ಸಿನಲ್ಲಿ ತೆಲಂಗಾಣದಿಂದ ತೆರಳಿದ್ದ 46 ಮಂದಿ ಇದ್ದರು. ಒಬ್ಬರು ಮಾತ್ರ ಅಪಾಯದಿಂದ ಪಾರಾಗಿದ್ದಾರೆ.
![]()
ಅರೇಬಿಯಾದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮದೀನಾದಿಂದ 25 ಕಿಮೀ ದೂರದಲ್ಲಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಡೀಸೆಲ್ ಟ್ಯಾಂಕರ್ ಆಗಿದ್ದರಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಎಸಿ ಬಸ್ ಕೆಲವೇ ಹೊತ್ತಿನಲ್ಲಿ ಹೊತ್ತಿ ಉರಿದಿದೆ. ಈ ವೇಳೆ, ಪ್ರಯಾಣಿಕರು ನಿದ್ರಿಸುತ್ತಿದ್ದರು, ಹಾಗಾಗಿ ಬಸ್ ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಪಾರಾಗಲು ಆಗಿರಲಿಲ್ಲ. ಬಲಿಯಾದವರಲ್ಲಿ ಕನಿಷ್ಠ 20 ಮಹಿಳೆಯರು ಮತ್ತು 11 ಮಕ್ಕಳು ಸೇರಿದ್ದಾರೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಲಿಪಶುಗಳನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ರಕ್ಷಣಾ ತಂಡಗಳು ತಿಳಿಸಿವೆ.
ಘಟನೆ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮೃತರಲ್ಲಿ 18 ಮಂದಿ ಹೈದರಾಬಾದ್ ಬಳಿಯ ಮಲ್ಲೇಪಳ್ಳಿ ಘಾಟ್ ಏರಿಯಾದವರು ಎಂದು ತಿಳಿದುಬಂದಿದೆ.
A tragic accident near Medina claimed the lives of 45 Umrah pilgrims from Hyderabad when their bus collided with a diesel tanker and caught fire. The incident occurred around 1:30 AM IST while the pilgrims were travelling from Mecca to Medina. The AC bus went up in flames within minutes, leaving only one survivor out of 46 passengers.
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm