ಬ್ರೇಕಿಂಗ್ ನ್ಯೂಸ್
30-11-25 03:53 pm HK News Desk ದೇಶ - ವಿದೇಶ
ನವದೆಹಲಿ, ನ.30: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರೇಡಿಯೊ ಭಾಷಣ 'ಮನ್ ಕಿ ಬಾತ್ ' ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಜೇನು ತುಪ್ಪದ ವಿಶೇಷತೆಯನ್ನು ಪ್ರಸ್ತಾಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸಸ್ಯವರ್ಗವು ಜೇನು ಉತ್ಪಾದನೆಗೆ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿನ 'ಗ್ರಾಮಜನ್ಯ' ಎಂಬ ರೈತ ಸಂಘಟನೆ ಜೇನು ಉತ್ಪಾದನೆಯ ಪ್ರಾಕೃತಿಕ ಕೊಡುಗೆಗೆ ಹೊಸ ದಿಕ್ಕನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗ್ರಾಮಜನ್ಯವೆಂಬ ಗ್ರಾಮಾಧಾರಿತ ಸಂಸ್ಥೆಯೊಂದು ಆಧುನಿಕ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದೆ. ಜೇನುತುಪ್ಪದ ಪ್ರಯೋಗಾಲಯ, ಜೇನು ತುಪ್ಪವನ್ನು ಬ್ರಾಂಡ್ ಮಾಡಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಎರಡೂವರೆ ಸಾವಿರಕ್ಕೂ ಹೆಚ್ಚು ರೈತರು ಈ ಪ್ರಯತ್ನದಿಂದ ಪ್ರಯೋಜನ ಪಡೆದಿದ್ದಾರೆ ಎಂದು ಮೋದಿ ಮನ್ ಕಿ ಬಾತ್ ನಲ್ಲಿ ಹೇಳಿದರು.
ತುಮಕೂರಿನ 'ಶಿವಗಂಗಾ ಕಲಾಂಜಿಯ'
ಇದೇ ವೇಳೆ, ಕರ್ನಾಟಕದ ತುಮಕೂರು ಜಿಲ್ಲೆಯ 'ಶಿವಗಂಗಾ ಕಲಾಂಜಿಯ' ಎಂಬ ಜೇನು ಸಾಕಣೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಸಂಘಟನೆಯ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಆರಂಭದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಎರಡು ಜೇನುಪೆಟ್ಟಿಗೆಗಳನ್ನು ನೀಡಲಾಗುತ್ತದೆ. ಇದೇ ರೀತಿ ಸಂಸ್ಥೆಯು ಅನೇಕ ರೈತರನ್ನು ತನ್ನ ಅಭಿಯಾನಕ್ಕೆ ಸಂಪರ್ಕಿಸಿದೆ. ಈಗ, ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ರೈತರು ಜಂಟಿಯಾಗಿ ಜೇನುತುಪ್ಪವನ್ನು ಪೆಟ್ಟಿಗೆಯಿಂದ ತೆಗೆದು, ಅದನ್ನು ಚೆನ್ನಾಗಿ ಪ್ಯಾಕೇಜ್ ಮಾಡಿ ಮಾರುಕಟ್ಟೆಗೆ ತಲುಪಿಸುತ್ತಾರೆ. ಇದು ಅವರಿಗೆ ಲಕ್ಷಗಟ್ಟಲೆ ಆದಾಯವನ್ನೂ ತರುತ್ತಿದೆ ಎಂದು ಹೇಳಿದರು.
ನಾಗಾಲ್ಯಾಂಡ್‌ನಲ್ಲಿ ಬಂಡೆ-ಜೇನು ಬೇಟೆಯ ಉದಾಹರಣೆಯನ್ನು ನೀಡಿದ ಪ್ರಧಾನಿ ಮೋದಿ, ನಾಗಾಲ್ಯಾಂಡ್‌ನ ಚೋಕ್ಲಂಗನ್ ಗ್ರಾಮದಲ್ಲಿರುವ ಖಿಯಾಮ್ನಿ-ಯಂಗನ್ ಬುಡಕಟ್ಟು ಜನಾಂಗದವರು ಶತಮಾನಗಳಿಂದ ಜೇನು ತೆಗೆಯುವ ಕಾಯಕ ಮಾಡುತ್ತಾ ಬಂದಿದ್ದಾರೆ. ಅಲ್ಲಿ, ಜೇನುನೊಣಗಳು ಮರಗಳ ಮೇಲೆ ಅಲ್ಲ, ಎತ್ತರದ ಬಂಡೆಗಳ ಮೇಲೆ ತಮ್ಮ ವಾಸಸ್ಥಾನಗಳನ್ನು ನಿರ್ಮಿಸುತ್ತವೆ. ಅದರಿಂದ ಜೇನುತುಪ್ಪವನ್ನು ಹೊರತೆಗೆಯುವ ಕೆಲಸವು ತುಂಬಾ ಅಪಾಯಕಾರಿ. ಅದಕ್ಕಾಗಿ ಅಲ್ಲಿನ ಜನರು ಮೊದಲು ಜೇನುನೊಣಗಳನ್ನು ಪ್ರೀತಿಯಿಂದ ಮಾತನಾಡಿಸಿ ನಾಜೂಕಿನಿಂದ ಜೇನುತುಪ್ಪ ತೆಗೆಯುತ್ತಾರೆ ಎಂದರು.
ಭಾರತ ಜೇನುತುಪ್ಪ ಉತ್ಪಾದನೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ವಿವರಿಸಿದ ಪ್ರಧಾನಿ ಮೋದಿ, 11 ವರ್ಷಗಳ ಹಿಂದೆ, ದೇಶದಲ್ಲಿ ಜೇನುತುಪ್ಪ ಉತ್ಪಾದನೆ 76,000 ಮೆಟ್ರಿಕ್ ಟನ್ ಆಗಿತ್ತು. ಅದು ಈಗ 1.5 ಲಕ್ಷ ಮೆಟ್ರಿಕ್ ಟನ್‌ಗಳಿಗೂ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಜೇನುತುಪ್ಪ ರಫ್ತು ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ಹನಿ ಮಿಷನ್ ಕಾರ್ಯಕ್ರಮದಡಿ ಖಾದಿ ಗ್ರಾಮೋದ್ಯೋಗವು 2.25 ಲಕ್ಷಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ವಿತರಿಸಿದೆ. ಇದು ಸಾವಿರಾರು ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.
ಜಮ್ಮು- ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ, ಜೇನುನೊಣಗಳು ಸುಲೈ ಎಂದು ಕರೆಯಲ್ಪಡುವ ಕಾಡು ತುಳಸಿಯಿಂದ ವಿಶಿಷ್ಟವಾದ ಜೇನುತುಪ್ಪವನ್ನು ಉತ್ಪಾದಿಸುತ್ತವೆ. ಬಿಳಿ ಬಣ್ಣದ ಈ ಜೇನು ತುಪ್ಪವನ್ನು ರಂಬನ್ ಸುಲೈ ಜೇನುತುಪ್ಪ ಎಂದು ಕರೆಯಲಾಗುತ್ತದೆ. ಕೆಲವು ವರ್ಷಗಳ ಹಿಂದೆ, ರಂಬನ್ ಸುಲೈ ಜೇನುತುಪ್ಪವು ಜಿಐ ಟ್ಯಾಗ್ ಅನ್ನು ಪಡೆದುಕೊಂಡಿತು. ಈ ಜೇನುತುಪ್ಪವು ದೇಶಾದ್ಯಂತ ಮನ್ನಣೆಯನ್ನು ಪಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Prime Minister Narendra Modi, in his radio address Mann Ki Baat, highlighted the unique quality of honey produced in Puttur taluk of Dakshina Kannada district. He said the region’s natural vegetation makes it one of the best environments for honey production, and praised the efforts of the farmer-led organisation ‘Gramajanya’, which is giving a new direction to natural honey cultivation.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm