ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತೊಡೆ ತಟ್ಟಿದ ರಷ್ಯನ್ ನೌಕಾಪಡೆ ; ತೈಲ ಟ್ಯಾಂಕರ್ ರಕ್ಷಣೆಗೆ ಅಣ್ವಸ್ತ್ರ ನೌಕೆ ನಿಯೋಜನೆ, ಸಾಗರದಲ್ಲೇ ರಂಗಕ್ಕಿಳಿದ ರಷ್ಯಾ ಸೇನೆ

08-01-26 11:21 pm       HK News Desk   ದೇಶ - ವಿದೇಶ

ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಾಗುತ್ತಿದ್ದ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ಅಮೆರಿಕ ಸೇನೆ ಜನವರಿ 7ರಂದು ವಶಪಡಿಸಿದ್ದು ಅಂತಾರಾಷ್ಟ್ರೀಯ ಸಾಗರ ಕಾನೂನನ್ನು ಉಲ್ಲಂಘಿಸಿದೆ.‌ ಈ ಬಗ್ಗೆ ಚೀನಾ, ರಷ್ಯಾ ಆಕ್ರೋಶ ತೋರಿಸಿದ್ದಲ್ಲದೆ, ತನ್ನೆಲ್ಲಾ ತೈಲ ಟ್ಯಾಂಕರ್ ಗಳಿಗೆ ಹೆಚ್ಚುವರಿ ರಕ್ಷಣಾ ವ್ಯವಸ್ಥೆ ಕಲ್ಪಿಸಿದೆ.

ನವದೆಹಲಿ, ಜ.8 ರಷ್ಯಾ ಧ್ವಜ ಹೊತ್ತು ಸಾಗುತ್ತಿದ್ದ ವೆನೆಜುವೆಲಾ ತೈಲ ಟ್ಯಾಂಕರ್ ವಶಪಡಿಸಿಕೊಂಡ ಬೆನ್ನಲ್ಲೇ ಅಮೆರಿಕಕ್ಕೆ ರಷ್ಯಾ ಹೊಸ ಸವಾಲು ಹಾಕಿದೆ. ಅಲ್ಲದೆ, ತನ್ನ ತೈಲ ಟ್ಯಾಂಕರ್ ಗಳ ರಕ್ಷಣೆಗೆ ಅತ್ಯಾಧುನಿಕ ಅಣ್ವಸ್ತ್ರ ನೌಕೆಗಳನ್ನು ನಿಯೋಜಿಸಿದ್ದು ಅಮೆರಿಕ ವಿರುದ್ಧ ತೊಡೆ ತಟ್ಟಿದೆ. 

ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಾಗುತ್ತಿದ್ದ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ಅಮೆರಿಕ ಸೇನೆ ಜನವರಿ 7ರಂದು ವಶಪಡಿಸಿದ್ದು ಅಂತಾರಾಷ್ಟ್ರೀಯ ಸಾಗರ ಕಾನೂನನ್ನು ಉಲ್ಲಂಘಿಸಿದೆ.‌ ಈ ಬಗ್ಗೆ ಚೀನಾ, ರಷ್ಯಾ ಆಕ್ರೋಶ ತೋರಿಸಿದ್ದಲ್ಲದೆ, ತನ್ನೆಲ್ಲಾ ತೈಲ ಟ್ಯಾಂಕರ್ ಗಳಿಗೆ ಹೆಚ್ಚುವರಿ ರಕ್ಷಣಾ ವ್ಯವಸ್ಥೆ ಕಲ್ಪಿಸಿದೆ. ತೈಲ ಹಡಗುಗಳ ರಕ್ಷಣೆಗೆ ರಷ್ಯಾ ತನ್ನ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳನ್ನೇ ನಿಯೋಜಿಸಿದ್ದು ನೇರವಾಗಿ ರಂಗಕ್ಕಿಳಿದು ಬಿಟ್ಟಿದೆ. 

ಉತ್ತರ ಅಟ್ಲಾಂಟಿಕ್‌ನಲ್ಲಿ ಲಂಗರು ಹಾಕಿರುವ ತೈಲ ಟ್ಯಾಂಕರ್‌ಗೆ ರಕ್ಷಣೆ ನೀಡಲು ರಷ್ಯಾ ಜಲಾಂತರ್ಗಾಮಿ ಯುದ್ಧ ನೌಕೆ ಮತ್ತು ಇತರ ನೌಕಾಪಡೆಗಳನ್ನು ನಿಯೋಜಿಸಿದೆ. ಇದು ಮಾಸ್ಕೋ ಮತ್ತು ವಾಷಿಂಗ್ಟನ್ ನಡುವಿನ ಹೊಸ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಕಾರಣವಾಗಿದೆ. ರಷ್ಯಾದ ಶಾಸಕರೊಬ್ಬರು ಅಮೆರಿಕದ ನಡೆಯ ಬಗ್ಗೆ ಆಕ್ರಮಣದ ಎಚ್ಚರಿಕೆ ನೀಡಿದ್ದು, ಅಮೆರಿಕದ ಹಡುಗಗಳ ಮೇಲೆ ದಾಳಿ ಮಾಡಿ ಮುಳುಗಿಸಿ ಎಂದು ತನ್ನ ಸೇನೆಗಳಿಗೆ ಕರೆ ನೀಡಿದ್ದಾರೆ. ತೈಲ ಟ್ಯಾಂಕರ್ ವಶಪಡಿಸಿದ್ದನ್ನು ಕಡಲ್ಗಳ್ಳತನ ಎಂದು ರಷ್ಯಾ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿ ದಾಳಿಗೆ ಒತ್ತಡ ಹೇರಿದ್ದಾರೆ. 

ಹಡಗಿನಲ್ಲಿ ಮೂವರು ಭಾರತೀಯ ಸಿಬಂದಿ 

ಅಮೆರಿಕದ ನೌಕಾಪಡೆ ವಶಪಡಿಸಿದ ರಷ್ಯಾದ ತೈಲ ಟ್ಯಾಂಕರ್ 'ಮರಿನೆರಾ'ದಲ್ಲಿ ಮೂವರು ಭಾರತೀಯ ಸಿಬ್ಬಂದಿ ಇದ್ದಾರೆಂದು ಹೇಳಲಾಗಿದೆ. ವೆನೆಜುವೆಲಾದಿಂದ ತೈಲ ಹೊತ್ತು ಬರುತ್ತಿದ್ದ ರಷ್ಯಾದ ಧ್ವಜ ಇದ್ದ ತೈಲ ಟ್ಯಾಂಕರ್‌ ಅನ್ನು ಅಮೆರಿಕ ನಿನ್ನೆ ವಶಪಡಿಸಿಕೊಂಡಿತ್ತು. ಹಡಗಿನಲ್ಲಿ 17 ಉಕ್ರೇನಿಯನ್, 6 ಜಾರ್ಜಿಯನ್, ಮೂವರು ಭಾರತೀಯ ನಾಗರಿಕರು ಹಾಗೂ ಇಬ್ಬರು ರಷ್ಯಾದ ನಾಗರಿಕರಿದ್ದಾರೆ ಎಂದು ವರದಿಗಳು ಹೇಳಿವೆ.

Russia has issued a fresh challenge to the United States by deploying advanced naval assets, including nuclear-powered vessels, to protect its oil tankers, following the seizure of a Russia-flagged tanker by the US Navy.