ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರ್ಮರಣ ; ಬಾರಾಮತಿಯಲ್ಲಿ ವಿಮಾನ ಅಪಘಾತಕ್ಕೀಡಾಗಿ ಪೈಲಟ್, ಅಧಿಕಾರಿಗಳು ಸೇರಿ ಆರು ಮಂದಿ ಸಾವು 

28-01-26 10:08 am       HK News Desk   ದೇಶ - ವಿದೇಶ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿ ಜಿಲ್ಲೆಯಲ್ಲಿ ಪತನಗೊಂಡಿದ್ದು ಅಜಿತ್ ಪವಾರ್ ಸೇರಿ ಜೊತೆಗಿದ್ದ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. 

ಮುಂಬೈ, ಜ.28 : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿ ಜಿಲ್ಲೆಯಲ್ಲಿ ಪತನಗೊಂಡಿದ್ದು ಅಜಿತ್ ಪವಾರ್ ಸೇರಿ ಜೊತೆಗಿದ್ದ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. 

ಮುಂಬೈನಿಂದ ಕಾರ್ಯ ನಿಮಿತ್ತ ಬಾರಾಮತಿಗೆ ತೆರಳುತ್ತಿದ್ದಾಗ ವಿಮಾನ ಪತನವಾಗಿದೆ. ಎನ್ ಸಿಪಿ ಮುಖಂಡ, ಪಕ್ಷದ ಪ್ರಭಾವಿ ನಾಯಕ ಶರದ್ ಪವಾರ್ ಅವರ ಅಳಿಯ ಅಜಿತ್ ಪವಾರ್ ಒಂದು ವರ್ಷದ ಹಿಂದಷ್ಟೇ ಪಕ್ಷವನ್ನು ಒಡೆದು ಬಿಜೆಪಿ ಮೈತ್ರಿಕೂಟ ಸೇರಿ ಡಿಸಿಎಂ ಆಗಿದ್ದರು. ಇಂದು ಬೆಳಗ್ಗೆ ಬಾರಾಮತಿಯತ್ತ ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ದಿಢೀರ್ ಅವಘಡ ಸಂಭವಿಸಿದೆ. 

ವಿಮಾನ ಲ್ಯಾಂಡಿಂಗ್ ವೇಳೆ ಕಾಡು ಪ್ರದೇಶದಲ್ಲಿ ಉರುಳಿದ್ದು ಬೆಂಕಿ ಹತ್ತಿಕೊಂಡಿದೆ. ಅಜಿತ್ ಪವಾರ್ ಸೇರಿ ಅದರಲ್ಲಿದ್ದ ಆರು ಜನ ಸಾವಿಗೀಡಾಗಿದ್ದಾರೆ. ಪತನ ಹೇಗಾಯ್ತು ಎನ್ನುವುದು ಗೊತ್ತಾಗಿಲ್ಲ. ವಿಮಾನದಲ್ಲಿದ್ದ ಪೈಲಟ್ ಮತ್ತು ಅಜಿತ್ ಪವಾರ್ ಜೊತೆಗಿದ್ದ ಅಧಿಕಾರಿಗಳು ಮೃತಪಟ್ಟಿದ್ದಾರೆ. ಅಜಿತ್ ಪವಾರ್ ಕುಟುಂಬಸ್ಥರು ಮುಂಬೈನಿಂದ ಬಾರಾಮತಿಯತ್ತ ದೌಡಾಯಿಸಿದ್ದಾರೆ. ಅಜಿತ್ ಪವಾರ್ ಬಾರಾಮತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿ ಅಜಿತ್ ಪವಾರ್ ತನ್ನದೇ ಎನ್ ಸಿಪಿ ಪಕ್ಷವೆಂದು ಪ್ರತ್ಯೇಕ ಬಣ ಕಟ್ಟಿಕೊಂಡು ಯಶಸ್ಸು ಸಾಧಿಸಿದ್ದರು.‌

ಇಂದು ಬಾರಾಮತಿಯಲ್ಲಿ ಎನ್ ಸಿಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ತಮ್ಮ ಕ್ಷೇತ್ರದತ್ತ ಬರುತ್ತಿದ್ದರು. ಹಲವು ಬಾರಿ ಸಚಿವರಾಗಿದ್ದ ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಅನುಭವಿ ಮತ್ತು ಪ್ರಭಾವಿ ನಾಯಕರಾಗಿದ್ದರು.

Maharashtra Deputy CM Ajit Pawar is alive, and there has been no plane crash or death involving him. Writing or publishing this as real news would spread false information about a real public figure, which isn’t okay.