ಬ್ರೇಕಿಂಗ್ ನ್ಯೂಸ್
05-03-26 05:02 pm HK News Staffer ದೇಶ - ವಿದೇಶ
ಕೊಲಂಬೊ, ಮಾರ್ಚ್ 4: ಕಳೆದ ಐದು ದಿನಗಳಿಂದ ಮಧ್ಯಪ್ರಾಚ್ಯವನ್ನು ಉದ್ವಿಗ್ನಗೊಳಿಸಿದ್ದ ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಇದೀಗ ಭಾರತದ ಸಮೀಪದ ಸಮುದ್ರ ಪ್ರದೇಶಗಳಿಗೂ ವ್ಯಾಪಿಸಿರುವ ಬೆಳವಣಿಗೆ ನಡೆದಿದೆ. ಶ್ರೀಲಂಕಾ ಕರಾವಳಿ ಸಮೀಪ ಇರಾನ್‌ನ ಯುದ್ಧನೌಕೆ ಮೇಲೆ ಅಮೆರಿಕ ದಾಳಿ ನಡೆಸಿದ ಪರಿಣಾಮ ಕನಿಷ್ಠ 87 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ದಾಳಿಗೆ ಗುರಿಯಾದ ನೌಕೆಯನ್ನು ಇರಾನ್ ನೌಕಾಪಡೆಯ ಐಆರ್‌ಐಎಸ್ ಡೆನಾ ಎಂದು ಗುರುತಿಸಲಾಗಿದೆ. ಅಮೆರಿಕದ ಸಬ್‌ಮರೀನ್‌ನಿಂದ ಹಾರಿಸಲಾದ ಟಾರ್ಪೆಡೋ ಕ್ಷಿಪಣಿಯಿಂದ ಈ ನೌಕೆಯನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.
ದಾಳಿಯ ತೀವ್ರತೆಗೆ ನೌಕೆ ಸಂಪೂರ್ಣವಾಗಿ ಮುಳುಗಿದ್ದು, ಅದರಲ್ಲಿದ್ದ ಸಿಬ್ಬಂದಿಯಲ್ಲಿ 32 ಮಂದಿಯನ್ನು ಮಾತ್ರ ರಕ್ಷಿಸಲಾಗಿದೆ. ಸುಮಾರು 61 ಮಂದಿ ನಾಪತ್ತೆಯಾಗಿದ್ದು, ಅವರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 87ಕ್ಕೂ ಹೆಚ್ಚು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಶ್ರೀಲಂಕಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಎರಡನೇ ವಿಶ್ವಯುದ್ಧದ ನಂತರ ಅಮೆರಿಕ ಸಬ್‌ಮರೀನ್‌ನಿಂದ ಶತ್ರು ರಾಷ್ಟ್ರದ ನೌಕೆಯನ್ನು ಟಾರ್ಪೆಡೋ ಮೂಲಕ ಹೊಡೆದುರುಳಿಸಿದ ಅಪರೂಪದ ಘಟನೆ ಎನ್ನಲಾಗಿದೆ.
ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಭಾರತ ಮತ್ತು ಇರಾನ್ ನೌಕಾಪಡೆಗಳ ಜಂಟಿ ಸಮರಾಭ್ಯಾಸ ನಡೆದಿತ್ತು. ಫೆಬ್ರವರಿ 18ರಿಂದ 25ರವರೆಗೆ ನಡೆದ ಈ ಕಸರತ್ತಿನಲ್ಲಿ ಪಾಲ್ಗೊಳ್ಳಲು ಐಆರ್‌ಐಎಸ್ ಡೆನಾ ನೌಕೆ ಭಾರತಕ್ಕೆ ಆಗಮಿಸಿತ್ತು. ಸಮರಾಭ್ಯಾಸ ಮುಗಿದ ನಂತರ ನೌಕೆ ಸಿಂಗಾಪುರಗೆ ತೆರಳಿ ಅಲ್ಲಿ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಿ ಇರಾನ್‌ಗೆ ವಾಪಸ್ಸಾಗುತ್ತಿತ್ತು.
ಬುಧವಾರ ಬೆಳಗಿನ ಜಾವ ಶ್ರೀಲಂಕಾದ ದಕ್ಷಿಣ ಕರಾವಳಿ ನಗರ ಗಾಲೆ ಸಮೀಪ ಸುಮಾರು 40 ನಾಟಿಕಲ್ ಮೈಲು ದೂರದ ಅಂತಾರಾಷ್ಟ್ರೀಯ ಸಮುದ್ರ ವಲಯದಲ್ಲಿ ಸಾಗುತ್ತಿದ್ದ ವೇಳೆ ನೌಕೆ ಮೇಲೆ ದಾಳಿ ನಡೆದಿದೆ.
ನೌಕೆಯಿಂದ ಬಂದ ತುರ್ತು ಸಂದೇಶದ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು. ಈ ವೇಳೆ ಬದುಕುಳಿದ ಕೆಲ ಸಿಬ್ಬಂದಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೀಟ್ ಹೆಗ್ಸೆತ್ ಅವರು, “ಶ್ರೀಲಂಕಾದ ದಕ್ಷಿಣ ಕರಾವಳಿಯ ಬಳಿ ಇರಾನ್ ನೌಕೆಯನ್ನು ನಾವು ಟಾರ್ಪೆಡೋ ಮೂಲಕ ಧ್ವಂಸಗೊಳಿಸಿದ್ದೇವೆ. ಎರಡನೇ ವಿಶ್ವಯುದ್ಧದ ನಂತರ ಇಂತಹ ದಾಳಿ ಇದೇ ಮೊದಲ ಬಾರಿ” ಎಂದು ಹೇಳಿದ್ದಾರೆ.
ಈ ದಾಳಿಯಿಂದ ಮಧ್ಯಪ್ರಾಚ್ಯ ಸಂಘರ್ಷವು ಸಮುದ್ರದಲ್ಲಿಯೂ ತೀವ್ರಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಹೊಸ ಭದ್ರತಾ ಆತಂಕಗಳು ಮೂಡಿವೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am