ಬ್ರೇಕಿಂಗ್ ನ್ಯೂಸ್
06-03-26 09:50 am Giridhar Shetty, Headline Karnataka ದೇಶ - ವಿದೇಶ
ನವದೆಹಲಿ, ಮಾರ್ಚ್ 5: ಮಾರ್ಕ್ -48 ಟೊರ್ಪೆಡೋ ಹೆಸರಿನ ಈ ಜಲಾಂತರ್ಗಾಮಿ ಜಗತ್ತಿನ ಅತಿ ಬಲಿಷ್ಠ ನೌಕಾ ಶಕ್ತಿಗಳಲ್ಲಿ ಒಂದು. ಅಮೆರಿಕದ ನೌಕಾಪಡೆಯ ಪ್ರಬಲ ಅಸ್ತ್ರವಾಗಿರುವ ಈ ಜಲಾಂತರ್ಗಾಮಿ ಅಸ್ತ್ರವನ್ನು ಎರಡನೇ ಜಾಗತಿಕ ಯುದ್ಧದ ಬಳಿಕ ಮೊದಲ ಬಾರಿಗೆ ಹಿಂದು ಮಹಾಸಾಗರದಲ್ಲಿ ಸ್ಫೋಟಿಸಿ ಇರಾನಿನ ಯುದ್ಧ ಹಡಗನ್ನು ನಿರ್ನಾಮ ಮಾಡಿದೆ.
ಮಾರ್ಚ್ 4ರಂದು ಶ್ರೀಲಂಕಾ ಬಳಿಯ ಹಿಂದು ಮಹಾಸಾಗರದಲ್ಲಿ ಸಾಗುತ್ತಿದ್ದ ಇರಾನ್ ಯುದ್ಧ ನೌಕೆಯತ್ತ ಈ ಮಾರ್ಕ್ 48 ಟೊರ್ಪೆಡೋ ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿತ್ತು. 1972ರಲ್ಲಿ ತನ್ನ ಬತ್ತಳಿಕೆ ಸೇರಿಸಿಕೊಂಡಿದ್ದ ಈ ಮಾರ್ಕ್ 48 ಅನ್ನು ಆನಂತರ ಹಲವು ಆಧುನಿಕ ತಂತ್ರಜ್ಞಾನದೊಂದಿಗೆ ಮಾರ್ಪಡಿಸಲಾಗಿತ್ತು. ಸದ್ಯ ಜಗತ್ತಿನ ಹಲವು ಕಡೆಗಳಲ್ಲಿ ಅಮೆರಿಕ ಈ ಅಸ್ತ್ರವನ್ನು ಸನ್ನದ್ಧವಾಗಿರಿಸಿದೆ.




19 ಅಡಿ ಉದ್ದ ಮತ್ತು 21 ಇಂಚ್ ವ್ಯಾಸ, ಒಂದು ಬದಿ ಡೂಮ್ ಮತ್ತೊಂದು ಬದಿ ದೊಡ್ಡ ಸಿಗರೇಟ್ ಮಾದರಿಯಲ್ಲಿರುವ ಈ ಕ್ಷಿಪಣಿ ರೂಪದ ಸ್ಫೋಟಕ ಅಂದಾಜು 1700 ಕೇಜಿ ಭಾರ ಇರುತ್ತದೆ. ಇದನ್ನು ಸಮುದ್ರದಾಳದಲ್ಲಿ ಪ್ರಯೋಗಿಸಲು ಅನುವಾಗುವಂತೆ ಆವಿಷ್ಕರಿಸಲಾಗಿತ್ತು. ಜಲಾಂತರ್ಗಾಮಿ ಹಡಗಿನಲ್ಲಿ ಇದನ್ನು ಕೊಂಡೊಯ್ದು 15-20 ಕಿಮೀ ದೂರದಿಂದ ನಿಗದಿತ ಗುರಿಯೆಡೆಗೆ ಉಡಾಯಿಸಲಾಗುತ್ತದೆ. ನೀರಿನಡಿಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಈ ಅಸ್ತ್ರ ಮಿಸೈಲ್ ಮಾದರಿಯಲ್ಲೇ ಬಂದು ವಿರುದ್ಧ ದಿಕ್ಕಿನಲ್ಲಿರುವ ಹಡಗಿನೊಳಗೆ ನುಗ್ಗಿ ಅದನ್ನು ಸ್ಫೋಟಿಸುತ್ತದೆ. ಮಾರ್ಕ್ 48 ಸ್ಫೋಟದ ತೀವ್ರತೆ ಭೂಮಿಯ ಮೇಲ್ಭಾಗದಲ್ಲಿ 500 ಪೌಂಡ್ಸ್ ಟಿಎನ್ ಟಿ ಮಾದರಿಯ ಬಾಂಬ್ ಸ್ಫೋಟಕ್ಕೆ ಸಮವಾಗುತ್ತದೆ. ಎಷ್ಟೇ ಸಾಮರ್ಥ್ಯದ ಹಡಗಾಗಿದ್ದರೂ ಈ ಸ್ಫೋಟಕ್ಕೆ ಎರಡಾಗಿ ವಿಭಜನೆಗೊಂಡು ಒಮ್ಮೆಲೇ ನೀರಿನಲ್ಲಿ ಮುಳುಗುತ್ತದೆ. ಹೀಗಾಗಿ ಇದನ್ನು ಕ್ವಿಕ್ ಡೆತ್ ಎಂದು ಅಮೆರಿಕದ ರಕ್ಷಣಾ ಸಚಿವ ಹಗ್ಸೆತ್ ಬಣ್ಣಿಸಿದ್ದಾರೆ.
ಐರಿಸ್ ದೇನಾ ಹೆಸರಿನ ಇರಾನ್ ಹಡಗು ಭಾರತದ ವಿಶಾಖಪಟ್ಟಣದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿತ್ತು. ಅದರಲ್ಲಿ ಒಟ್ಟು 148 ಸಿಬಂದಿ ಇದ್ದರು. ಶ್ರೀಲಂಕಾದ ಗಾಲೆ ದ್ಪೀಪದಿಂದ 40 ಕಿಮೀ ದೂರದಲ್ಲಿ ಘಟನೆ ಸಂಭವಿಸಿದ್ದು, ಲಂಕಾ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿದ್ದ 32 ಮಂದಿಯನ್ನು ರಕ್ಷಣೆ ಮಾಡಿದೆ. 88 ಶವಗಳನ್ನು ಪತ್ತೆ ಮಾಡಿದ್ದರೆ, ಉಳಿದವರು ನಾಪತ್ತೆಯಾಗಿದ್ದರು. ಅಮೆರಿಕ ತನ್ನಿಂದ ಸಾವಿರಾರು ಕಿಮೀ ದೂರದ ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿಯ ದೌರ್ಜನ್ಯ ಎಸಗಿದ್ದು ವಿಶ್ವ ರಾಷ್ಟ್ರಗಳ ಖಂಡನೆಗೆ ಕಾರಣವಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಘಟನೆಯನ್ನು ತೀವ್ರ ಖಂಡಿಸಿದ್ದಲ್ಲದೆ, ಇದಕ್ಕಾಗಿ ಅಮೆರಿಕ ವಿಷಾದ ಪಡಬೇಕಾಗುತ್ತದೆ. ಅಂತಹ ದಿನ ಬಂದೇ ಬರುತ್ತದೆ. ಯಾಕಂದ್ರೆ, ಅಮೆರಿಕವು ಸಮುದ್ರದಲ್ಲಿ ಅಮಾನುಷ ರೀತಿಯ ದೌರ್ಜನ್ಯದ ಕೃತ್ಯ ಎಸಗಿದೆ ಎಂದಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am