ಬ್ರೇಕಿಂಗ್ ನ್ಯೂಸ್
06-03-26 10:58 pm HK News Desk ದೇಶ - ವಿದೇಶ
ಮುಂಬೈ, ಮಾರ್ಚ್ 6: ಮಹಾರಾಷ್ಟ್ರ ಸರ್ಕಾರವು ಲವ್ ಜಿಹಾದ್ ನಿಯಂತ್ರಣದ ಉದ್ದೇಶದಿಂದ ಉತ್ತರ ಪ್ರದೇಶ ಮಾದರಿಯಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ರಚಿಸಿದ್ದು ಕರಡು ರೂಪಕ್ಕೆ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಮತಾಂತರಗೊಳ್ಳಲು ಇಚ್ಛಿಸುವ ಯಾವುದೇ ವ್ಯಕ್ತಿ 60 ದಿನಗಳ ಮೊದಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಮತ್ತು ಅದಕ್ಕಾಗಿ ನೋಟಿಸ್ ನೀಡುವುದು ಕಡ್ಡಾಯವಾಗಿದೆ. ಮತಾಂತರದ ನಂತರ 25 ದಿನಗಳ ಒಳಗಾಗಿ ಅದನ್ನು ಅಧಿಕೃತವಾಗಿ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ, ಅಂತಹ ಮತಾಂತರವನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಮತಾಂತರಗೊಳ್ಳುವ ವ್ಯಕ್ತಿಯ ರಕ್ತ ಸಂಬಂಧಿಗಳು ಆ ಮತಾಂತರ ಕೃತ್ಯವು ಕಾನೂನುಬಾಹಿರ ಎಂದು ದೂರು ನೀಡಿದರೆ, ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು.
ಬಲವಂತದ ಮತಾಂತರಕ್ಕೆ ನಿಷೇಧ
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಂದರೆ ಬಲವಂತವಾಗಿ, ವಂಚನೆಯಿಂದ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದಲ್ಲ. ಬದಲಾಗಿ, ಇಂತಹ ಕಾನೂನುಬಾಹಿರ ಚಟುವಟಿಕೆಗಳಿಂದ ರಕ್ಷಣೆ ಪಡೆಯುವ ಹಕ್ಕನ್ನು ಇದು ಒಳಗೊಂಡಿದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರ ಸಚಿವ ಮತ್ತು ಬಿಜೆಪಿ ನಾಯಕ ನಿತೀಶ್ ರಾಣೆ ಮಾತನಾಡಿ, "ಸಚಿವ ಸಂಪುಟವು ಪ್ರಬಲವಾದ ಮತಾಂತರ ವಿರೋಧಿ ಕಾಯ್ದೆಯನ್ನು ಅನುಮೋದಿಸಿದೆ. ಈ ಮೂಲಕ ಅಸೆಂಬ್ಲಿ ಚುನಾವಣೆಯ ಮೊದಲು ಬಿಜೆಪಿ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷೆ ಮತ್ತು ದಂಡದ ವಿವರಗಳು
ಬಲವಂತ ಅಥವಾ ಆಮಿಷದ ಮೂಲಕ ಮತಾಂತರ ಮಾಡಿದರೆ 1 ರಿಂದ 5 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 25,000 ರೂ. ದಂಡ ವಿಧಿಸಲು ಅವಕಾಶವಿದೆ. ಅಪ್ರಾಪ್ತರು, ಮಹಿಳೆಯರು ಅಥವಾ ಎಸ್ಸಿ/ಎಸ್ಟಿ (SC/ST) ಸಮುದಾಯಕ್ಕೆ ಸೇರಿದವರನ್ನು ಅಕ್ರಮವಾಗಿ ಮತಾಂತರ ಮಾಡಿದರೆ ಶಿಕ್ಷೆ ಹೆಚ್ಚು ಕಠಿಣವಾಗಿರುತ್ತದೆ. ಇದರಲ್ಲಿ 3 ರಿಂದ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಬಹುದು.
ಸಮೂಹ ಮತಾಂತರ ಹೆಚ್ಚಿನ ಶಿಕ್ಷೆ
ಒಂದೇ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ಮತಾಂತರ ಮಾಡಿದರೆ, ಭಾಗಿಯಾದವರಿಗೆ 5 ರಿಂದ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ವರೆಗೆ ದಂಡ ವಿಧಿಸುವ ನಿಬಂಧನೆ ಇದೆ.
ಮದುವೆಗಾಗಿ ಮತಾಂತರ ಅಸಿಂಧು
ಕೇವಲ ಮದುವೆಯ ಉದ್ದೇಶಕ್ಕಾಗಿ ಧರ್ಮವನ್ನು ಮರೆಮಾಚಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅಂತಹ ಮದುವೆಯನ್ನು ಈ ಕಾಯ್ದೆಯಡಿ ಅಸಿಂಧು ಎಂದು ಘೋಷಿಸುವ ಅಧಿಕಾರ ನ್ಯಾಯಾಲಯಕ್ಕೆ ಇರುತ್ತದೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm