ಬ್ರೇಕಿಂಗ್ ನ್ಯೂಸ್
12-03-26 09:03 pm HK News Staffer ದೇಶ - ವಿದೇಶ
ವಾಷಿಂಗ್ಟನ್, ಮಾರ್ಚ್ 12: ಇರಾನ್ ಸಾಕಷ್ಟು ಹೊಡೆತ ತಿಂದರೂ, ಅಮೆರಿಕದ ಮೇಲೆ ಆರ್ಥಿಕ ನಷ್ಟ ಬಿಟ್ಟರೆ ಬೇರಾವುದೇ ನೇರ ಹೊಡೆತ ಬಿದ್ದಿಲ್ಲ. ಈ ನಡುವೆ, ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ಮಹತ್ವದ ಎಚ್ಚರಿಕೆ ನೀಡಿದೆ. ಅಮೆರಿಕದ ಪಶ್ಚಿಮ ಕರಾವಳಿಯ ನಗರಕ್ಕೆ ಇರಾನ್ ಡ್ರೋಣ್ ದಾಳಿ ನಡೆಸಬಹುದು ಎಂದು ಅದು ಹೇಳಿದೆ. ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇರಾನ್‌ನಿಂದ ಡ್ರೋನ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಮೊಳಗಿಸಿದೆ.
ಈವರೆಗೂ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೆ ಮಾತ್ರ ಇರಾನ್ ದಾಳಿ ನಡೆಸಿತ್ತು. ಅಮೆರಿಕ ಭೌಗೋಳಿಕವಾಗಿ ಬಲು ದೂರ ಇರುವುದರಿಂದ ಅಲ್ಲಿಗೆ ದಾಳಿಯಿಂದ ತೊಂದರೆ ಆಗಿಲ್ಲ. ಇತ್ತ ಇಸ್ರೇಲ್ ಮೇಲೆ ಹೊಡೆತ ಬಿದ್ದರೂ ಅಮೆರಿಕ ಚಿಂತೆ ಮಾಡಿಲ‌್ಲ. ಹೀಗಾಗಿ ಇರಾನ್ ಕಡೆಯಿಂದ ಕ್ಯಾಲಿಫೋರ್ನಿಯಾ ಅಥವಾ ಇನ್ನಾವುದೇ ನಗರಗಳಿಗೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಫ್ ಬಿಐ ಎಚ್ಚರಿಸಿದೆ. ಹಿಂದೆ ಇರಾಕ್ ಮೇಲಿನ ದಾಳಿಯ ಬಳಿಕ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಉಗ್ರ ದಾಳಿ ನಡೆದಿತ್ತು.
2026ರ ಫೆಬ್ರವರಿ ತಿಂಗಳ ಆರಂಭದಲ್ಲಿ ಕ್ಯಾಲಿಫೋರ್ನಿಯಾ ಮೇಲೆ ಇರಾನ್ ಡ್ರೋನ್ ಅಟ್ಯಾಕ್ ನಡೆಸುವುದಾಗಿ ಅಮೆರಿಕ ನಂಬಿತ್ತು. ಆದರೆ, ಯಾವುದೇ ದಾಳಿ ನಡೆದಿರಲಿಲ್ಲ. ಇದೀಗ ಗುಪ್ತಚರ ಸಂಸ್ಥೆಗಳು ಮತ್ತೊಂದು ಭದ್ರತಾ ಆತಂಕವನ್ನೂ ವ್ಯಕ್ತಪಡಿಸಿವೆ. ಮೆಕ್ಸಿಕೋದ ಡ್ರಗ್ ಕಾರ್ಟೆಲ್‌ಗಳು ಡ್ರೋನ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ಅದನ್ನು ಅಮೆರಿಕದ ಗಡಿ ಪ್ರದೇಶಗಳಲ್ಲಿ ದಾಳಿಗೆ ಬಳಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಕೆಲವು ಡ್ರಗ್ ಕಾರ್ಟೆಲ್‌ಗಳು ಸ್ಫೋಟಕ ಹೊತ್ತ ಡ್ರೋನ್‌ಗಳನ್ನು ಬಳಸಿಕೊಂಡು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳು ಹಾಗೂ ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿಗಳೂ ಈ ಹಿಂದೆ ಬಂದಿದ್ದವು.
ಇದೇ ವೇಳೆ, ಕ್ಯಾಲಿಫೋರ್ನಿಯಾ ಸರ್ಕಾರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ. ಡ್ರೋನ್ ದಾಳಿಯ ಆತಂಕವನ್ನು ಅಮೆರಿಕದ ಹೋಂಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಮಾಜಿ ಗುಪ್ತಚರ ಮುಖ್ಯಸ್ಥರಾಗಿದ್ದ ಜಾನ್ ಕೋಹೆನ್ ವ್ಯಕ್ತಪಡಿಸಿದ್ದಾರೆ. ಇರಾನ್‌ಗೆ ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕಾದಲ್ಲಿ ವ್ಯಾಪಕ ಸಂಪರ್ಕಗಳಿದ್ದು, ಸಮುದ್ರ ಮಾರ್ಗ ಅಥವಾ ಮೆಕ್ಸಿಕೋ ಗಡಿಯ ಮೂಲಕ ಡ್ರೋನ್ ದಾಳಿ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm