ಬ್ರೇಕಿಂಗ್ ನ್ಯೂಸ್
24-03-26 04:43 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 24: ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐದು ದಿನಗಳ ವಿರಾಮ ಘೋಷಿಸಿದ್ದರೂ, ಇರಾನ್- ಇಸ್ರೇಲ್ ಪರಸ್ಪರ ಸಂಘರ್ಷದಲ್ಲಿ ತೊಡಗಿದೆ. ಇಸ್ರೇಲ್ ಲೆಬನಾನ್ ಮತ್ತು ಇರಾನ್ ಮೇಲೆ ಮಿಸೈಲ್ ದಾಳಿ ನಡೆಸಿದ್ದರೆ, ಇರಾನ್ ಕೂಡ ಪ್ರತಿ ದಾಳಿ ನಡೆಸಿದೆ.
ಇಸ್ರೇಲ್ ಉತ್ತರ ಲೆಬನಾನ್ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, ಬಹಳಷ್ಟು ನಾಶ ಸಂಭವಿಸಿದೆ. ಇದಲ್ಲದೆ, ದಕ್ಷಿಣ ಲೆಬನಾನ್ ಮೇಲೂ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದು, ಅಲ್ಲಿನ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿದೆ. ಅಲ್ಲದೆ, ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿರುವ ಐಆರ್ ಜಿಸಿ ಗುಪ್ತಚರ ವ್ಯವಸ್ಥೆಯ ಪ್ರಧಾನ ಕಚೇರಿ ಮತ್ತು ಗುಪ್ತಚರ ಸಚಿವಾಲಯದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಕಡೆಯಿಂದ ಖಡಕ್ ತಿರುಗೇಟು ಬಂದಿದ್ದು, ಲೆಬನಾನ್, ಗಾಜಾ ಮೇಲೆ ದಾಳಿ ಮುಂದುವರಿಸಿದರೆ ಪರಿಣಾಮ ಗಂಭೀರ ಆಗಿರುತ್ತದೆ, ನಾವು ಉತ್ತರ ಇಸ್ರೇಲ್ ಮೇಲೆ ದೊಡ್ಡ ಮಟ್ಟದ ಮಿಸೈಲ್ ದಾಳಿ ನಡೆಸಿ ಮೂಲಸೌಕರ್ಯಗಳನ್ನು ನಾಶ ಪಡಿಸುತ್ತೇವೆ ಎಂದು ಐಆರ್ ಜಿಸಿ ಇರಾನ್ ನ್ಯೂಸ್ ಏಜನ್ಸಿಗೆ ತಿಳಿಸಿದೆ. ಅಲ್ಲದೆ, ಇಸ್ಲಾಮಿಕ್ ರೆವೊಲ್ಯುಶನರಿ ಗಾರ್ಡ್ ಕಾರ್ಪ್ಸ್ (ಐಆರ್ ಜಿಸಿ) ಇದರ ಹಿರಿಯ ಅಧಿಕಾರಿಯೊಬ್ಬರು ಅಮೆರಿಕಕ್ಕೂ ಎಚ್ಚರಿಕೆ ನೀಡಿದ್ದು, ಈಗಾಗಲೇ ಅಮೆರಿಕದ ಸ್ಥಿತಿ ಪ್ಯಾರಾಲೈಸ್ ಆಗಿದೆ. ಕೂಡಲೇ ಜಾಗ ಖಾಲಿ ಮಾಡದಿದ್ದರೆ ಅರಬ್ಬಿ ಸಮುದ್ರದಲ್ಲಿರುವ ಅದರ ಹಡಗುಗಳನ್ನು ಅಲ್ಲಿಯೇ ಮುಳುಗಿಸುತ್ತೇವೆ ಎಂದಿದ್ದಾರೆ.
ಇರಾನ್ ವಿದ್ಯುತ್ ಮತ್ತು ಮೂಲಸೌಕರ್ಯ ಜಾಲದ ಮೇಲೆ ಅಮೆರಿಕ ದಾಳಿ ನಡೆಸುವ ಬೆದರಿಕೆಗೆ ಮೇಲಿನಂತೆ ಉತ್ತರ ನೀಡಿದ್ದಾರೆ. ಅಮೆರಿಕ ಇಲ್ಲಿಂದ ಪಾರಾಗುವುದಕ್ಕೆ ಹೆಚ್ಚು ಸಮಯ ಇಲ್ಲ. ಅಂತಿಮ ಗಡುವು ಸಮೀಪಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಹೆಜ್ಬುಲ್ಲಾ ಬಂಡುಕೋರರು ಇಸ್ರೇಲ್ ಗಡಿ ಭಾಗದಲ್ಲಿ ಐದು ಕಡೆ ಮಿಲಿಟರಿ ಮೇಲೆ ದಾಳಿ ನಡೆಸಿದ್ದಾರೆ. ರಾಡಾರ್, ಆರ್ಟಿಲ್ಲರಿ ಗುರಿಯಾಗಿಸಿ ರಾಕೆಟ್ ಮತ್ತು ಡ್ರೋಣ್ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ.
ಈವರೆಗಿನ ದಾಳಿಯಲ್ಲಿ ಇರಾನಲ್ಲಿ 208 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಐಆರ್ ಜಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಿನಾಬ್ ಸಿಟಿಯ ಹೆಣ್ಮಕ್ಕಳ ಶಾಲೆಗೆ ಬಾಂಬ್ ದಾಳಿ ನಡೆಸಿದ ಘಟನೆಯಲ್ಲಿ 168 ಮಕ್ಕಳು ಸಾವಿಗೀಡಾಗಿದ್ದಾರೆ. ಅದರಲ್ಲಿ 13 ಮಂದಿ ಐದು ವರ್ಷಕ್ಕಿಂತ ಕೆಳಗಿನವರು. ಒಟ್ಟು 1500 ಮಂದಿ ಯುದ್ಧ ಸಂದರ್ಭ ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದೆ.
ಇದೇ ಸಂದರ್ಭ ಟೆಹ್ರಾನ್ ಮೇಲಿನ ದಾಳಿಯಲ್ಲಿ ಸೈನ್ಸ್ ಯುನಿವರ್ಸಿಟಿಯ ಪ್ರೊಫೆಸರ್ ಶಯೀದ್ ಶಮಗ್ದಾರಿ ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿರುವುದಾಗಿಯೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಒಂದೆಡೆ ದಾಳಿ ನಡೆಯುತ್ತಿದ್ದರೂ, ಮಾರ್ಚ್ 24ರ ಬೆಳಗ್ಗೆ ರಾಜಧಾನಿ ಟೆಹ್ರಾನಲ್ಲಿ ದಾಳಿ ಭೀತಿಯ ನಡುವೆಯೂ ನೂರಾರು ಮಂದಿ ರಸ್ತೆಗಿಳಿದಿದ್ದು ಸರ್ಕಾರದ ಪರವಾಗಿ ಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಅಲ್ಲದೆ, ಇಸ್ರೇಲ್- ಅಮೆರಿಕ ದಾಳಿಯನ್ನು ಖಂಡಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am