ಬ್ರೇಕಿಂಗ್ ನ್ಯೂಸ್
25-03-26 06:15 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 25: ಅಮೆರಿಕ- ಇರಾನ್ ಶಾಂತಿ ಮಾತುಕತೆಯ ಸಲುವಾಗಿ ಪಾಕಿಸ್ತಾನ ಮಧ್ಯವರ್ತಿ ಕೆಲಸವನ್ನು ಮಾಡಲು ಮುಂದಾಗಿದ್ದು, ಅಮೆರಿಕದ ಕಡೆಯಿಂದ 15 ಅಂಶಗಳ ಶರತ್ತುಗಳೊಂದಿಗೆ ಕದನ ವಿರಾಮ ಪ್ರಸ್ತಾಪವನ್ನು ಇರಾನ್ ನಾಯಕರಿಗೆ ತಲುಪಿಸಿದೆ. ಆದರೆ ಈ ಪ್ರಸ್ತಾಪಗಳಿಗೆ ಇರಾನ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಂತಾರಾಷ್ಟ್ರೀಯ ನಿರ್ಬಂಧಗಳು, ನಾಗರಿಕ ಪರಮಾಣು ಸಹಕಾರ, ಇರಾನ್ ನ್ಯೂಕ್ಲಿಯರ್ ಅಸ್ತ್ರಗಳ ಪರಿಶೀಲನೆ, ಅಂತಾರಾಷ್ಟ್ರೀಯ ಅಟಾಮಿಕ್ ಎನರ್ಜಿ ಏಜನ್ಸಿಯಿಂದ ತಪಾಸಣೆ, ಮಿಸೈಲ್ ನಿರ್ಬಂಧ ಹಾಗೂ ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರ ಇತ್ಯಾದಿ ಅಂಶಗಳನ್ನು ಒಳಗೊಂಡ ಪ್ರಸ್ತಾಪವನ್ನು ಅಮೆರಿಕದ ಪರವಾಗಿ ಪಾಕಿಸ್ತಾನಿ ಅಧಿಕಾರಿಗಳು ತಯಾರಿಸಿದ್ದು, ಅದಕ್ಕೆ ಇರಾನ್ ನಾಯಕರನ್ನು ಒಪ್ಪಿಸಲು ಪಾಕ್ ಮುಂದಾಗಿದೆ.
ಒಂದೆಡೆ ಅಮೆರಿಕ ಶಾಂತಿ ಒಪ್ಪಂದಕ್ಕೆ ಮಾತುಕತೆ ಎನ್ನುತ್ತಿದ್ದರೆ, ಮತ್ತೊಂದೆಡೆ ಹೆಚ್ಚುವರಿ ಮಿಲಿಟರಿ ಪಡೆಗಳನ್ನು ಇರಾನ್ ಸುತ್ತಲಿನ ಸಮುದ್ರದಲ್ಲಿ ನಿಯೋಜನೆ ಮಾಡುತ್ತಿದೆ. ಶಾಂತಿ ಮಾತುಕತೆಯ ವಿಚಾರವನ್ನು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾಡಲಾಗುತ್ತಿದ್ದರೂ, ಅದರ ಹಿಂದೆ ಯಾರಿದ್ದಾರೆ, ಏನೆಲ್ಲ ಶರತ್ತುಗಳಿವೆ ಎನ್ನುವ ಬಗ್ಗೆ ಅಧಿಕೃತವಾಗಿ ಹೇಳಲು ಮುಂದಾಗಿಲ್ಲವಾದರೂ, ಈ ರೀತಿಯ ಪ್ರಸ್ತಾಪವನ್ನು ಸಲ್ಲಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆಗೆ ತಿಳಿಸಿದ್ದಾರೆ.
ಇಸ್ರೇಲ್ ದಾಳಿ ಮುಂದುವರಿಕೆ:
ಇದೇ ವೇಳೆ, ಇಸ್ರೇಲ್ ಕಡೆಯಿಂದ ಇರಾನ್ ಮೇಲೆ ಬಾಂಬ್ ದಾಳಿ ಮುಂದುವರಿದಿದ್ದು ದಕ್ಷಿಣ ಇರಾನ್ ಮೇಲಿನ ದಾಳಿಯಲ್ಲಿ 12 ಮಂದಿ ಸತ್ತಿದ್ದು 28 ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಇದಲ್ಲದೆ, ಲೆಬನಾನ್ ಮತ್ತು ಗಾಜಾ ಪಟ್ಟಿ ಮೇಲೆಯೂ ಇಸ್ರೇಲ್ ಬಾಂಬ್ ದಾಳಿ ಮಾಡಿದೆ. ಇದೇ ಸಂದರ್ಭದಲ್ಲಿ ಕುವೈತ್ ಅಂತಾರಾಷ್ಟ್ರೀಯ ಏರ್ಪೋರ್ಟ್ ಬಳಿ ನಿಲ್ಲಿಸಿದ್ದ ಇಂಧನ ಹೊತ್ತಿದ್ದ ಟ್ಯಾಂಕ್ ಡ್ರೋಣ್ ದಾಳಿಗೆ ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿದೆ. ಕುವೈತ್ ಸೇನೆಯ ಪ್ರಕಾರ, ನಿರಂತರ ದಾಳಿಗೆ ಪ್ರತಿಯಾಗಿ ಇಲ್ಲಿಗೆ ಡ್ರೋಣ್ ದಾಳಿಯಾಗಿದೆ ಎಂದಿದೆ.
ಮತ್ತೊಂದೆಡೆ ಅಮೆರಿಕದ ಬೃಹತ್ ಯುದ್ಧ ನೌಕೆಗಳು, ಎಫ್-35 ವಿಮಾನಗಳು ಗಲ್ಫ್ ದೇಶಗಳತ್ತ ಬಂದಿದ್ದು ಇವೆಲ್ಲದನ್ನು ನಾವು ಗಮನಿಸುತ್ತಿದ್ದೇವೆ, ಆದರೆ ಅಮೆರಿಕದ ಬೃಹತ್ ಯುದ್ದ ಹಡಗು ಅಬ್ರಹಾಂ ಲಿಂಕನ್ ನಮ್ಮ ವ್ಯಾಪ್ತಿಗೆ ಅದನ್ನು ಹೊಡೆಯುತ್ತೇವೆ ಎಂದು ಇರಾನ್ ಸೇನಾಧಿಕಾರಿಯೊಬ್ಬರು ಅಲ್ಲಿನ ಮಾಧ್ಯಮಕ್ಕೆ ತಿಳಿಸಿದ್ದಾರೆ. ಯುದ್ಧ ಆರಂಭಗೊಂಡ ಬಳಿಕದ ಒಂದು ತಿಂಗಳಲ್ಲಿ ನಾವು 15 ಸಾವಿರ ಬಾಂಬ್ ಗಳನ್ನು ಇರಾನ್ ಮೇಲೆ ಸುರಿದಿದ್ದಾಗಿ ಇಸ್ರೇಲ್ ಹೇಳಿಕೊಂಡಿದ್ದು, ಇದರಿಂದಾಗಿ ದೊಡ್ಡ ಮಟ್ಟದ ನಷ್ಟ ಉಂಟಾಗಿರುವುದಾಗಿ ಹೇಳಿದೆ.
ಪಾಕಿಸ್ತಾನಕ್ಕೆ ಯಾಕೆ ಯುದ್ಧ ನಿಲ್ಲಲೇಬೇಕು !
ಗಲ್ಫ್ ಯುದ್ಧದಿಂದ ಭಾರತ ಸೇರಿದಂತೆ ಏಷ್ಯನ್ ದೇಶಗಳಿಗೆ ಎಷ್ಟು ನಷ್ಟ ಆಗಿದೆಯೋ ಅದಕ್ಕಿಂತ ಹೆಚ್ಚಿನ ನಷ್ಟ ಪಾಕಿಸ್ತಾನ ಮೇಲಾಗಿದೆ. ತೈಲ ದರ ಏರಿಕೆಯಿಂದಾಗಿ ಅಲ್ಲಿನ ಆರ್ಥಿಕತೆಯೇ ಬುಡಮೇಲಾಗಿದೆ. ಇದಲ್ಲದೆ, ಅಮೆರಿಕ ಆರ್ಥಿಕ ನೆರವು ನೀಡುವ ಮಿತ್ರರಾಷ್ಟ್ರ ಎನ್ನುವುದು ಒಂದೆಡೆಯಾದರೆ ಇರಾನ್ ಬಹುಕಾಲದ ಆಪ್ತಮಿತ್ರ. ಎರಡು ಕಡೆಯೂ ಬಿಡಲಾಗದ ಸ್ಥಿತಿ ಪಾಕಿಸ್ತಾನದ್ದು. ಇದರ ನಡುವೆ ಸೌದಿ ಅರೇಬಿಯಾ ಯುದ್ಧಕ್ಕೆ ಎಂಟ್ರಿಯಾದರೆ ಪಾಕಿಸ್ತಾನ ಅವರ ಜೊತೆ ನಿಲ್ಲಬೇಕಾಗುತ್ತದೆ. ಯಾಕಂದ್ರೆ ಆಪತ್ಕಾಲದ ಮಿತ್ರನಾಗಿ ಸೌದಿ ಇದೆ. ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಅಮೆರಿಕ ಮತ್ತು ಇರಾನ್ ಮನವೊಲಿಸಿ ಯುದ್ಧ ನಿಲ್ಲಿಸುವುದಕ್ಕೆ ಪಾಕ್ ಮುಂದಾಗಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am