ಬ್ರೇಕಿಂಗ್ ನ್ಯೂಸ್
28-03-26 04:06 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 28: ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದು ಇದೇ ವೇಳೆ ಟೋಲ್ ಬೂತ್ ಮೂಲಕ ಸುಂಕ ಕಟ್ಟಿ ಮುಂದೆ ಹೋಗುವಂತೆ ವ್ಯವಸ್ಥೆ ಮಾಡಿದೆ. ಸುಂಕ ಕಟ್ಟದೆ ಹಡಗುಗಳಿಗೆ ತೆರಳಲು ಅವಕಾಶ ನೀಡುತ್ತಿಲ್ಲ. ಇರಾನ್ ಈ ನಡೆಗೆ ಹಲವು ದೇಶಗಳ ನಾಯಕರಿಂದ ವಿರೋಧ ವ್ಯಕ್ತವಾಗಿದೆ.
ಐಆರ್ ಜಿಸಿ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲ ರೀತಿಯ ಹಡಗುಗಳಿಗೂ ಹೊಸತಾಗಿ ಸುಂಕವನ್ನು ವಿಧಿಸಿದ್ದು ಮಾರ್ಚ್ 27ರ ಸಂಜೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 138 ಹಡಗುಗಳು ಸುಂಕ ತೆತ್ತು ಪಾಸ್ ಆಗಿವೆ. ಲಾರಕ್ ಮತ್ತು ಜತಿನ್ ದುವಾ ದ್ವೀಪಗಳನ್ನು ಸುತ್ತು ಹಾಕಿ ಇರಾನ್ ಕರಾವಳಿಯಿಂದ ಹಡಗು ಚಲಿಸಲು ಅವಕಾಶ ನೀಡಲಾಗಿದೆ. ಯುದ್ಧ ಆರಂಭಗೊಂಡ ಮಾರ್ಚ್ 1ರಿಂದ 25ರ ವರೆಗಿನ ಮಾಹಿತಿ ಪ್ರಕಾರ, 142 ಹಡಗುಗಳು ಹರ್ಮುಜ್ ಸಂಧಿಯ ಮೂಲಕ ಪಾಸ್ ಆಗಿವೆ. ಆದರೆ 2025ರ ಮಾರ್ಚ್ ತಿಂಗಳ ಇದೇ ಅವಧಿಯಲ್ಲಿ 2652 ಹಡಗುಗಳು ಪಾಸ್ ಆಗಿದ್ದವು. ಹೀಗಾಗಿ ಬಹುತೇಕ ಹಡಗುಗಳು ಅಲ್ಲಿ ಸಿಕ್ಕಿಬಿದ್ದು ಮುಂದೆ ಹೋಗಲಾಗದ ಸ್ಥಿತಿಗೆ ಸಿಲುಕಿವೆ.
ಹಡಗಿನ ದಾಖಲೆಗಳು, ಮಾಲೀಕತ್ವದ ಕುರಿತ ಮಾಹಿತಿಗಳನ್ನು ಟೋಲ್ ಬೂತ್ ನಲ್ಲಿ ನೀಡಬೇಕಾಗುತ್ತದೆ. ಅಲ್ಲಿ ಐ ಆರ್ ಜಿಸಿ ಅಧಿಕಾರಿಗಳು ಹಡಗಿಗೆ ಪಾಸ್ ನೀಡುವುದೋ, ಬಿಡುವುದೋ ಎಂದು ನಿರ್ಧರಿಸುತ್ತಾರೆ. ಶುಕ್ರವಾರ ಎರಡು ಚೀನಾ ಮೂಲದ ಹಡಗುಗಳಿಗೆ ಪಾಸ್ ನಿರಾಕರಣೆ ಮಾಡಿದೆ.
ಇದೇ ವೇಳೆ, ಇರಾನ್ ಟೋಲ್ ಬೂತ್ ಮಾಡಿದ್ದನ್ನು ಜಿ-7 ರಾಷ್ಟ್ರಗಳು ವಿರೋಧಿಸಿ ಒಕ್ಕೂಟ ರೂಪಿಸಬೇಕೆಂದು ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ ಕರೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದ್ದು ಜಗತ್ತಿನ ಒಟ್ಟು ತೈಲ ಸಾಗಣೆಯ ಸುಮಾರು 20% ಇಲ್ಲಿಂದ ಸಾಗುತ್ತದೆ. ಆದ್ದರಿಂದ ಇಲ್ಲಿ ಯಾವುದೇ ಅಡಚಣೆ ಉಂಟಾದರೆ ಜಾಗತಿಕ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದೀಗ ಇರಾನ್ ಯುದ್ಧದ ಪರಿಸ್ಥಿತಿಯನ್ನು ಬಳಸಿಕೊಂಡು ಹಡಗುಗಳಿಗೆ “ಟೋಲ್” (ಶುಲ್ಕ) ವಿಧಿಸುವ ವ್ಯವಸ್ಥೆ ತರಲು ಯತ್ನಿಸುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ.
ಫ್ರಾನ್ಸ್‌ನಲ್ಲಿ ನಡೆದ ಜಿ7 ರಾಷ್ಟ್ರಗಳ ಮಹತ್ವದ ಸಭೆಯಲ್ಲಿ ಭಾಗವಹಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೋ, ಹಾರ್ಮುಜ್ ಜಲಸಂಧಿಯಿಂದ ಹಾದುಹೋಗುವ ಅಂತರಾಷ್ಟ್ರೀಯ ಹಡಗುಗಳ ಮೇಲೆ ಇರಾನ್ ಅಕ್ರಮವಾಗಿ ತೆರಿಗೆ ವಿಧಿಸಲು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದರು.
ರೂಬಿಯೊ ಅವರ ಪ್ರಕಾರ, ಇದು ಕೇವಲ ಕಾನೂನುಬಾಹಿರ ಮಾತ್ರವಲ್ಲ, ಜಗತ್ತಿನ ವ್ಯಾಪಾರ ಮತ್ತು ತೈಲ ಸರಬರಾಜಿಗೆ ದೊಡ್ಡ ಅಪಾಯ. ಆದ್ದರಿಂದ ಇದನ್ನು ತಡೆಯಲು ಅಮೆರಿಕಾ ಮಾತ್ರವಲ್ಲ, ಇತರೆ ಬಲಿಷ್ಠ ರಾಷ್ಟ್ರಗಳು, ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ಮತ್ತು ಜಿ7 ಮಿತ್ರರಾಷ್ಟ್ರಗಳು ಒಗ್ಗೂಡಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು. ಇದಕ್ಕಾಗಿ ರೂಬಿಯೋ, ಚೀನಾ ನೆರವನ್ನೂ ಪಡೆದಿದ್ದಾರೆ.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಏಪ್ರಿಲ್ 6ರ ವರೆಗೆ ಅಂತಿಮ ಗಡುವು ನೀಡಿದ್ದು, ಅಷ್ಟರೊಳಗೆ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್‌ನ ಪ್ರಮುಖ ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am