ಬ್ರೇಕಿಂಗ್ ನ್ಯೂಸ್
31-03-26 10:43 am HK News Staffer ದೇಶ - ವಿದೇಶ
ವಾಷಿಂಗ್ಟನ್, ಮಾರ್ಚ್ 31: ಮಧ್ಯಪ್ರಾಚ್ಯ ಸಂಘರ್ಷ ಕೊನೆಗಾಣಿಸಲು, ಇರಾನ್ ಜತೆ ಸಮಾಧಾನದಿಂದ ಮಾತುಕತೆ ನಡೆಸುತ್ತಿದ್ದೇವೆ. ಸಂಧಾನ ವಿಫಲವಾದರೆ ಇರಾನ್ ತೈಲ ಬಾವಿಗಳು, ಇಂಧನ ಸ್ಥಾವರಗಳು, ಖಾರ್ಗ್ ದ್ವೀಪವನ್ನು ಸಂಪೂರ್ಣ ಧ್ವಂಸಗೊಳಿಸುವುದು ಖಚಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಆಡಳಿತಕ್ಕೆ ಮತ್ತೆ ಧಮಕಿ ಹಾಕಿದ್ದಾರೆ.
ಇರಾನ್ ಮೇಲಿನ ದಾಳಿಗೆ ಏ.6ರ ವರೆಗೆ ವಿರಾಮ ಘೋಷಿಸಿದ್ದ ಟ್ರಂಪ್, ಸೋಮವಾರ ತಮ್ಮ ವರಸೆ ಬದಲಿಸಿದ್ದಾರೆ. "ಯುದ್ಧ ಅಂತ್ಯಗೊಳಿಸುವ ಉದ್ದೇಶದೊಂದಿಗೆ ಇರಾನ್ ಆಡಳಿತದ ಜತೆ ಅಮೆರಿಕ ಗಂಭೀರ ಚರ್ಚೆ ನಡೆಸುತ್ತಿದೆ. ಸಂಧಾನ ಮಾತುಕತೆಗಳು ಪ್ರಗತಿಯಲ್ಲಿವೆ. ಅಮೆರಿಕ ಪ್ರಸ್ತಾಪಿಸಿರುವ ಷರತ್ತುಗಳನ್ನು ಒಪ್ಪದಿದ್ದರೆ ಇರಾನ್ ಸರ್ವನಾಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣ ಟ್ರುಥ್ನಲ್ಲಿ ಟ್ರಂಪ್ ಎಚ್ಚರಿಸಿದ್ದಾರೆ.



"ಶೀಘ್ರವೇ ಷರತ್ತುಗಳನ್ನು ಒಪ್ಪಿಕೊಂಡು ಒಪ್ಪಂದಕ್ಕೆ ಬರಬೇಕು. ಹರ್ಮುಜ್ ಜಲಮಾರ್ಗವನ್ನು ತೈಲ ಸಾಗಣೆಗೆ ಸಂಪೂರ್ಣ ಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ಇದುವರೆಗೂ ದಾಳಿಯಿಂದ ಸುರಕ್ಷಿತ ವಾಗಿದ್ದ ಪ್ರದೇಶಗಳು ನಮ್ಮ ಮುಂದಿನ ಗುರಿಯಾಗಲಿವೆ ಎಂದು ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ, ಪಾಕಿಸ್ತಾನ ಮಧ್ಯಸ್ಥಿಕೆ ತಿರಸ್ಕರಿಸಿರುವ ಇರಾನ್, ಅಮೆರಿಕ ಪ್ರಸ್ತಾವಿತ ಶಾಂತಿ ಸೂತ್ರದ ಬಗ್ಗೆ ಇನ್ನೂ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ. ಇರಾನ್ ಷರತ್ತುಗಳಿಗೆ ಅಮೆರಿಕ ಒಪ್ಪದ ಹೊರತು ಕದನ ವಿರಾಮ ಮಾತುಕತೆ ಸಾಧ್ಯವೇ ಇಲ್ಲ. ಆದರೆ, ರಾಜತಾಂತ್ರಿಕ ಸಂಧಾನ ಮಾರ್ಗಗಳು ಇನ್ನೂ ಮುಕ್ತವಾಗಿವೆ. ಸಂಧಾನ ಮಾತುಕತೆಗಳು ಸೂಕ್ತ ವೇದಿಕೆಯಲ್ಲಿ ನಡೆಯಬೇಕು. ಅಮೆರಿಕ ನಿಯಂತ್ರಿತ ಸಮಯ, ಸ್ಥಳದ ಬದಲಿಗೆ ತಟಸ್ಥ ದೇಶದ ಮಧ್ಯಸ್ಥಿಕೆಯಲ್ಲಿ ಸಂಧಾನ ಬಯಸುತ್ತಿದ್ದೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ಪಾಕ್ ಮಧ್ಯಸ್ಥಿಕೆ ತಿರಸ್ಕರಿಸಿದ ಇರಾನ್
ಇದೇ ವೇಳೆ, ಅಮೆರಿಕ ಜೊತೆಗಿನ ಸಂಘರ್ಷ ಕೊನೆಗಾಣಿಸಲು ಪಾಕಿಸ್ತಾನ ಮಧ್ಯಸ್ಥಿಕೆಯ ಸಂಧಾನ ಮಾತುಕತೆಯನ್ನು ಇರಾನ್ ತಿರಸ್ಕರಿಸಿದೆ. ಕೊಲ್ಲಿ ದೇಶಗಳ ವಿದೇಶಾಂಗ ಸಚಿವರ ಜತೆಗೂಡಿ ಸಂಧಾನ ಸೂತ್ರ ರೂಪಿಸಲು ಮುಂದಾಗಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು ಮುಖಭಂಗ ಅನುಭವಿಸಿದ್ದಾರೆ.
"ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನಡೆಯುವ ಯಾವುದೇ ಮಾತುಕತೆಗಳನ್ನು ಟೆಹ್ರಾನ್ ಒಪ್ಪುವುದಿಲ್ಲ. ಹಿಂಬಾಗಿಲ ಮೂಲಕ ಮಾತುಕತೆಗೆ ವೇದಿಕೆ ರೂಪಿಸಲು ಪ್ರಯತ್ನಿಸುತ್ತಿರುವ ಇಸ್ಲಾಮಾಬಾದ್ ಕ್ರಮಗಳಿಗೆ ಬೆಂಬಲವಿಲ್ಲ. ಕೆಲವು ದೇಶಗಳು ನಡೆಸುತ್ತಿರುವ ಪರೋಕ್ಷ ಮಾತುಕತೆಗಳಿಂದ ಅಂತರ ಕಾಯ್ದುಕೊಳ್ಳಲಾಗಿದೆ ಎಂದು ಮುಂಬೈನಲ್ಲಿರುವ ಇರಾನ್ ದೂತವಾಸ ಕಚೇರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಅಮೆರಿಕ- ಇರಾನ್ ನಡುವೆ ರಾಜತಾಂತ್ರಿಕ ಸಂಬಂಧ ಕುದುರಿಸಲು ಮುಂದಾಗಿದ್ದ ಪಾಕಿಸ್ತಾನ ಗಲ್ಫ್ ದೇಶಗಳ ವಿದೇಶಾಂಗ ಸಚಿವರ ಜೊತೆ ಮಾತುಕತೆಯನ್ನೂ ನಡೆಸಿತ್ತು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am