ಬ್ರೇಕಿಂಗ್ ನ್ಯೂಸ್
06-04-26 06:09 pm HK News Staffer ದೇಶ - ವಿದೇಶ
ನವದೆಹಲಿ, ಎಪ್ರಿಲ್ 6: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮೇ 31 ರವರೆಗೆ ಇಸ್ರೇಲ್ಗೆ ತನ್ನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದೆ. ನವದೆಹಲಿ- ಟೆಲ್ ಅವೀವ್ ಮಾರ್ಗದಲ್ಲಿ ಮೇ 31ರ ವರೆಗೂ ವಿಮಾನ ಯಾನವನ್ನು ಸ್ಥಗಿತಗೊಳಿಸಿದೆ.
ಎಲ್ ಅಲ್ ಇಸ್ರಾಏರ್, ಅರ್ಕಿಯಾ ಮತ್ತು ಏರ್ ಹೈಫಾದಂತಹ ಇಸ್ರೇಲಿ ವಿಮಾನಗಳು ಮಾತ್ರ ತೀವ್ರ ನಿರ್ಬಂಧಗಳ ನಡುವೆಯೂ ಕಾರ್ಯ ನಿರ್ವಹಿಸುತ್ತವೆ. ಆದರೆ ಹೆಚ್ಚಿನ ಪ್ರಮುಖ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ಭಾರತಕ್ಕೆ ಬರಲು ಬಯಸುತ್ತಿರುವ ಇಸ್ರೇಲ್ನಲ್ಲಿ ವಾಸಿಸುವ 40,000 ಕ್ಕೂ ಹೆಚ್ಚು ಭಾರತೀಯರಲ್ಲಿ ವಿಮಾನ ಸಂಚಾರ ಸ್ಥಗಿತ ಚಿಂತೆಗೀಡು ಮಾಡಿದೆ. ಇಸ್ರೇಲ್ ತೊರೆಯಲು ಬಯಸುವ ಭಾರತೀಯರು ಜೋರ್ಡಾನ್ ಅಥವಾ ಈಜಿಪ್ಟ್ ಮೂಲಕ ಎರಡು ದೇಶಗಳ ಭೂ ಗಡಿ ದಾಟುವ ಮೂಲಕ ಪ್ರವೇಶಿಸಬೇಕು. ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವಿವಿಧ ಮಾರ್ಗಗಳ ಮೂಲಕ ಭಾರತಕ್ಕೆ ತೆರಳಲು ನೆರವು ನೀಡುತ್ತಿದೆ. ಇದೇ ವೇಳೆ, ರಾಯಭಾರ ಕಚೇರಿ ಭಾರತೀಯ ಸಮುದಾಯದೊಂದಿಗೆ ನಿಯಮಿತ ಸಂಪರ್ಕವನ್ನು ಹೊಂದಿದ್ದು, 24x7 ತುರ್ತು ಸಹಾಯವಾಣಿ ತೆರೆದಿದೆ ಮತ್ತು ಬೃಹತ್ ನೋಂದಣಿ ಕಾರ್ಯವನ್ನು ಸಹ ಪ್ರಾರಂಭಿಸಿದೆ.
ಇದೇ ವೇಳೆ, ಭಾರತದ ಇಸ್ರೇಲ್ ರಾಯಭಾರಿ ಜೆಪಿ ಸಿಂಗ್ ಮತ್ತು ಸಿಬಂದಿ ಇಸ್ರೇಲ್ನಲ್ಲಿರುವ ಭಾರತೀಯರ ಸಮಸ್ಯೆ ಆಲಿಸಲು ವರ್ಚುವಲ್ ಚರ್ಚೆಯನ್ನು ನಡೆಸಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು ಅದರಾಚೆಗೂ ಅವರಿಗೆ ನಿರಂತರ ಬೆಂಬಲದ ಭರವಸೆ ನೀಡಿದೆ ಎಂದು ಮಿಷನ್ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ತಿಳಿಸಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am