ಬ್ರೇಕಿಂಗ್ ನ್ಯೂಸ್
09-04-26 11:03 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 9: ಎರಡು ವಾರದ ಕದನ ವಿರಾಮ ಘೋಷಣೆಯಾಗಿ 24 ಗಂಟೆ ಕಳೆಯುವ ಮೊದಲೇ ಇಸ್ರೇಲ್, ಲೆಬನಾನ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಸುಮಾರು 50 ವಿಮಾನಗಳಿಂದ 160 ಬಾಂಬ್ ಗಳನ್ನು ಏಕಕಾಲದಲ್ಲಿ ಲೆಬನಾನ್ ವಸತಿ ಪ್ರದೇಶದ ಮೇಲೆ ಹಾಕಿದ್ದು ಭಾರೀ ವಿನಾಶ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇರಾನ್ ಕೆರಳಿದ್ದು, ಮತ್ತೆ ಹರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಲೆಬನಾನ್ 200 ಜನ ಸಾವು ಎಂದು ಹೇಳುತ್ತಿದ್ದರೂ ಒಂದೇ ದಿನ ಸಾವಿರಾರು ಜನ ಸಾವಿಗೀಡಾದ ಮಾಹಿತಿ ಇದೆ.
ಎಪ್ರಿಲ್ 9ರ ಬೆಳಗ್ಗೆ ಅಮೆರಿಕ ಮತ್ತು ಇರಾನ್ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ್ದವು. ಇದರ ಭಾಗವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡಿತ್ತು. ಆದರೆ, ಇಸ್ರೇಲ್ ಮಾತ್ರ ಲೆಬನಾನ್ ಮೇಲೆ ದಾಳಿ ನಿಲ್ಲಿಸುವುದಿಲ್ಲ ಎಂದು ಹೇಳಿತ್ತು. ಇಸ್ರೇಲ್ ನಡೆಯನ್ನು ಫ್ರಾನ್ಸ್, ರಷ್ಯಾ, ಚೀನಾಗಳು ಖಂಡಿಸಿದ್ದು ಮತ್ತೆ ಯುದ್ಧ ಬಿಸಿಯೇರುವ ಸಾಧ್ಯತೆ ಕಂಡುಬಂದಿದೆ.




ಇಸ್ರೇಲ್ ನಡೆಯನ್ನು ಖಂಡಿಸಿರುವ ಇರಾನ್, ಯುದ್ಧ ವಿರಾಮ ಉಲ್ಲಂಘನೆಯಾಗಿದೆ ಎಂದು ಹೇಳಿ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಅಲ್ಲದೆ, ಅಮೆರಿಕದ ಜೊತೆಗಿನ ಕದನ ವಿರಾಮವನ್ನು ಹಿಂಪಡೆಯುವ ಎಚ್ಚರಿಕೆಯನ್ನೂ ನೀಡಿದೆ. ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ, ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮವು ರದ್ದಾಗುವ ಸಾಧ್ಯತೆಯಿದೆ.
ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದರೂ, ಈ ಒಪ್ಪಂದ ಲೆಬನಾನ್ ಅನ್ನು ಒಳಗೊಂಡಿಲ್ಲ ಎಂದು ಹೇಳಿದ್ದಾರೆ. ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಮೆರಿಕದ ನಿರ್ಧಾರವನ್ನು ಇಸ್ರೇಲ್ ಬೆಂಬಲಿಸುತ್ತದೆ. ಇದಕ್ಕೆ ಇರಾನ್ ಜಲಸಂಧಿಯನ್ನು ತಕ್ಷಣವೇ ತೆರೆಯಬೇಕು ಎಂದು ನೆತನ್ಯಾಹು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಮರುದಿನವೇ ಲೆಬನಾನ್ ಮೇಲೆ ಘೋರ ದಾಳಿ ನಡೆಸಿರುವುದು ಗಲ್ಫ್ ನಲ್ಲಿ ಯುದ್ಧ ಉಲ್ಬಣಗೊಳ್ಳುವ ಆತಂಕ ಉಂಟಾಗಿದೆ. ಲೆಬನಾನ್ ಕಡೆಯಿಂದ ಹೆಜ್ಬುಲ್ಲಾ ಬಂಡುಕೋರರು ನಿರಂತರವಾಗಿ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವುದರಿಂದ ಇದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸಿದೆ. ಕದನ ವಿಧಾನದಲ್ಲಿ ಲೆಬನಾನ್ ಒಳಗೊಂಡಿಲ್ಲ ಎಂದೂ ಹೇಳುತ್ತಿದೆ. ಆದರೆ ಇರಾನ್, ಲೆಬನಾನ್ ಪರವಾಗಿ ನಿಂತಿದ್ದು ದಾಳಿ ನಿಲ್ಲಿಸದಿದ್ದರೆ ನಾವು ದಾಳಿ ನಡೆಸುತ್ತೇವೆ ಎಂದಿದೆ.
Within 24 hours of announcing a two-week ceasefire, Israel carried out heavy airstrikes on Lebanon, escalating tensions in the region. Reports indicate that around 50 aircraft dropped nearly 160 bombs simultaneously on residential areas, causing widespread destruction.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am