ಬ್ರೇಕಿಂಗ್ ನ್ಯೂಸ್
07-05-26 03:50 pm HK News Staffer ದೇಶ - ವಿದೇಶ
ಬೆಂಗಳೂರು, ಮೇ 7: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದಲ್ಲಿ ಸ್ಪರ್ಧಿಸಿದ್ದ ತುಮಕೂರು ಮೂಲದ ಕನ್ನಡಿಗರೊಬ್ಬರು ಗೆದ್ದು ಶಾಸಕರಾಗಿದ್ದಾರೆ. ಮೆಟ್ಟುಪಾಳ್ಯಂ ಕ್ಷೇತ್ರದಿಂದ ಗೆದ್ದಿರುವ ಸುನಿಲ್ ಆನಂದ್ ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರಾಗಿದ್ದು, ಇಲ್ಲಿನ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.
ಸುನೀಲ್ ಅವರು ಮೊದಲು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದಲ್ಲಿದ್ದರು. ಆದರೆ, ವಿಜಯ್ ಚಟುವಟಿಕೆಗಳು, ಅವರ ವೇಗವನ್ನು ಗ್ರಹಿಸಿ, ಎರಡು ವರ್ಷಗಳ ಹಿಂದೆ ಟಿವಿಕೆ ಪಕ್ಷಕ್ಕೆ ಸೇರಿದ್ದರು. ಚುನಾವಣೆಯಲ್ಲಿ ಸುನೀಲ್ ಅವರು 75,664 ಮತಗಳನ್ನು ಪಡೆದು 7,768 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ಕವಿತಾ ಕಲ್ಯಾಣಸುಂದರಂ 67,896 ಮತಗಳನ್ನು ಪಡೆದಿದ್ದಾರೆ. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಗೆ ಸುನಿಲ್ ಪಾತ್ರರಾಗಿದ್ದಾರೆ.
ಕೃಷಿಕ ಮತ್ತು ಉದ್ಯಮಿಯಾಗಿರುವ ಸುನಿಲ್, ಮೂಲತಃ ತುರುವೇಕೆರೆ ತಾಲ್ಲೂಕಿನ ವಡಕೆಘಟ್ಟ ಗ್ರಾಮದ ಮೂಲದವರು. ಅದೇ ಗ್ರಾಮದ ಚಿಕ್ಕಪ್ಪ ಎಚ್.ಬಿ. ನಂಜೇಗೌಡ (ಮೂರ್ತಿ) ಜನತಾದಳದ ಮಾಜಿ ಶಾಸಕರಾಗಿದ್ದರು (1994). ಸುನಿಲ್ ಅವರ ತಾತ ಎಚ್.ಎಲ್. ಲಿಂಗೇಗೌಡ ಅವರು ಮೆಟ್ಟುಪಾಳಯಂನಲ್ಲಿ ಪುರಸಭೆ ಅಧ್ಯಕ್ಷರಾಗಿದ್ದರು. ತಂದೆ ನಾಗರಾಜು ಉದ್ಯಮಿಯಾಗಿದ್ದು, ಕೋವಿಡ್ ಸಂದರ್ಭದಲ್ಲಿ ನಿಧನರಾಗಿದ್ದರು. ಮೈಸೂರಿನಲ್ಲೂ ಅವರ ಕುಟುಂಬಕ್ಕೆ ವ್ಯಾಪಾರ ಸಂಬಂಧಗಳಿವೆ.
ಸುನಿಲ್ ಕುಟುಂಬ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ತುಮಕೂರಿಗೆ ಬರುತ್ತಿರುತ್ತಾರೆ. ಟಿವಿಕೆ ಪಕ್ಷದಲ್ಲಿ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿರುವ ಸುನೀಲ್, ಜನಪರ ವ್ಯಕ್ತಿತ್ವದಿಂದಲೇ ಮೆಟ್ಟುಪಾಳಯಂ ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸಿದ್ದಾರೆ ಎಂದು ಅವರ ಬಂಧುಗಳು ಹೇಳಿದ್ದಾರೆ.
ಚುನಾವಣಾ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಸುನಿಲ್, “ನಾನು ಹೆಮ್ಮೆಯ ಕನ್ನಡಿಗ. ವರ್ಷಕ್ಕೆ ನಾಲ್ಕೈದು ಬಾರಿ ನಮ್ಮ ಊರಿಗೆ ಬಂದು ಕುಟುಂಬದ ದೇವತೆ ಮಾಯಮ್ಮ ಮತ್ತು ಆದಿಚುಂಚನಗಿರಿ ಕಾಲಭೈರವೇಶ್ವರ ದೇವರ ದರ್ಶನ ಪಡೆಯುತ್ತೇನೆ” ಎಂದು ಹೇಳಿದ್ದಾರೆ.
21-06-26 02:18 pm
HK News Staffer
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
21-06-26 08:59 pm
HK News Staffer
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
20-06-26 09:13 pm
HK News Staffer
ಸೂಲಿಬೆಲೆಯಲ್ಲಿ ಭೀಕರ ಅಪಘಾತ ; ಬಿಎಂಟಿಸಿ ಬಸ್ ಡ್ರೈ...
20-06-26 04:43 pm
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm