ಬ್ರೇಕಿಂಗ್ ನ್ಯೂಸ್
24-10-26 12:22 pm HK News Staffer ಕರ್ನಾಟಕ
ಗದಗ, ಅ.24 : ಡೆತ್ ನೋಟ್ ಬರೆದಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದ ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (KRIDL) ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (AEE) ಪರ್ವೀಜ್ ಧಾರವಾಡ ಅವರು ಸುಮಾರು 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಮಹಾರಾಷ್ಟ್ರದ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದು, ಇಂದು ಗದಗಕ್ಕೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.
ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದ ಪರ್ವೀಜ್ಗಾಗಿ ಗದಗ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ವಿವಿಧ ಸ್ಥಳಗಳಲ್ಲಿ ಸುಳಿವುಗಳು ದೊರೆತಿದ್ದರೂ ಅವರ ಪತ್ತೆ ಸಾಧ್ಯವಾಗಿರಲಿಲ್ಲ. ಗದಗ ಪೊಲೀಸರ ನಿರಂತರ ಕಾರ್ಯಾಚರಣೆ ಮೂಲಕ ಪರ್ವೇಜ್ ಅವರನ್ನು ಪತ್ತೆಹಚ್ಚಿದ್ದಾರೆ. ಪರ್ವೇಜ್ ಈ ಅವಧಿಯಲ್ಲಿ ಎಲ್ಲಿದ್ದರು, ಯಾವ ಕಾರಣಕ್ಕೆ ಸಂಪರ್ಕದಿಂದ ದೂರ ಉಳಿದಿದ್ದರು ಎಂಬ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆಯಿಂದ ಉತ್ತರ ಸಿಗಬೇಕಿದೆ.
ಪರ್ವೀಜ್ ಕಚೇರಿಯ ಡೆಸ್ಕ್ ಮೇಲೆ ಬರೆದಿಟ್ಟು ಹೋಗಿದ್ದ ಪತ್ರದಲ್ಲಿ ಸರ್ಕಾರಿ ಅನುದಾನದ ಕೊರತೆ ಮತ್ತು ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಆಗದಿರುವುದರಿಂದ ತೊಂದರೆ ಎದುರಿಸುತ್ತಿರುವುದಾಗಿ ಉಲ್ಲೇಖಿಸಿದ್ದರು. ಉಪ ಗುತ್ತಿಗೆದಾರರು ಮನೆ ಮತ್ತು ಕಚೇರಿಗೆ ಬಂದು ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಅಂಶವೂ ಪತ್ರದಲ್ಲಿತ್ತು. ಆದರೆ, ಪತ್ರದಲ್ಲಿನ ಆರೋಪಗಳ ಸತ್ಯಾಸತ್ಯತೆ ಮತ್ತು ನಾಪತ್ತೆಯಾಗಿದ್ದ ಹಿಂದಿನ ನೈಜ ಕಾರಣ ಇನ್ನೂ ದೃಢಪಟ್ಟಿಲ್ಲ.
ಪರ್ವೀಜ್ ನಾಪತ್ತೆಯಾದ ಬಳಿಕ ಪೊಲೀಸರು ಅವರ ಚಲನವಲನ ಪತ್ತೆಹಚ್ಚಲು ವಿವಿಧ ಸುಳಿವುಗಳನ್ನು ಪರಿಶೀಲಿಸಿದ್ದರು. ಅವರ ಮೊಬೈಲ್ ನೆಟ್ವರ್ಕ್ಗೆ ಸಂಬಂಧಿಸಿದ ಕೊನೆಯ ಸುಳಿವು ಆಂಧ್ರಪ್ರದೇಶದ ವಿಜಯವಾಡದಲ್ಲಿ ದೊರೆತಿತ್ತು. ಬಳಿಕ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು. ನಂತರ ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಪರ್ವೀಜ್ ಕಾಣಿಸಿಕೊಂಡಿದ್ದರು. ಪೊಲೀಸರು ಅಲ್ಲಿ ಪರಿಶೀಲನೆ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ನಿರಂತರ ಕಾರ್ಯಾಚರಣೆಯ ಬಳಿಕ ಕೊನೆಗೂ ಮುಂಬೈನಲ್ಲಿ ಅವರ ಸುಳಿವು ಸಿಕ್ಕಿದೆ.
ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿದ್ದ ಪರ್ವೀಜ್ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಅವರ ಕುಟುಂಬಸ್ಥರು ಸೆಪ್ಟೆಂಬರ್ 16ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗಿತ್ತು. ಇದೀಗ ಪರ್ವೀಜ್ ಪತ್ತೆಯಾಗಿರುವುದು ಕುಟುಂಬದ ಆತಂಕವನ್ನು ದೂರಮಾಡಿದೆ.
25-11-26 07:48 pm
HK News Staffer
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ;...
23-11-26 09:23 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
25-11-26 06:58 pm
HK News Staffer
ಸೌಜನ್ಯಾ ಪ್ರಕರಣ ಅತ್ಯಂತ ಸೂಕ್ಷ್ಮ ; ವೈಜ್ಞಾನಿಕ ಆಧಾ...
25-11-26 06:29 pm
ತಣ್ಣೀರುಬಾವಿ ಬೀಚ್ ನಲ್ಲಿ ದೇಶದ ಮೊದಲ ಡೇಟಾ ಸೆಂಟರ್...
25-11-26 05:49 pm
ಜಿಲ್ಲಾ ಕೇಂದ್ರಗಳಲ್ಲಿ ಡೇ ಕೇರ್ ಸೆಂಟರ್, ಎಲ್ಲ ಜಿಲ್...
24-11-26 06:46 pm
ಕದ್ರಿ ಯುದ್ಧ ಸ್ಮಾರಕದ ಬಳಿಯ ಯುದ್ಧ ಟ್ಯಾಂಕ್ ಮೇಲೆ ಹ...
24-11-26 10:51 am
25-11-26 01:30 pm
HK News Staffer
ಕಾಪು ಬೀಚ್ ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿದ ದಾವಣ...
23-11-26 02:24 pm
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm