ಬ್ರೇಕಿಂಗ್ ನ್ಯೂಸ್
23-10-26 05:47 pm HK News Staffer ಕರ್ನಾಟಕ
ಬೆಂಗಳೂರು, ಅ.23: ಸಿದ್ದರಾಮಯ್ಯರನ್ನು ಬಿಟ್ಟರೆ ಮತ ಸೆಳೆಯೋ ನಾಯಕರು ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ? ಈಗ ಅಂಥವರ ವರ್ಚಸ್ಸು ಹಾಳು ಮಾಡಲು ಡಿಕೆಶಿ ಯತ್ನಿಸುತ್ತಿದ್ದಾರೆ. ಸ್ಟಿಂಗ್ ಮಾಡಿದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಬಗ್ಗೆ ಮಮತೆ ಯಾಕೆ ಬಂತು ಎಂಬ ಹೇಳಿಕೆಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು. ಸ್ಟಿಂಗ್ ಆಪರೇಷನ್ ಜೆಡಿಎಸ್ ರೂಪಿಸಿದ ಸಂಚಲ್ಲ. ಕಾಂಗ್ರೆಸ್‌ನವರೇ ಸಿದ್ದರಾಮಯ್ಯ ವಿರುದ್ಧ ಸಂಚು ಹೂಡಿ ಈಗ ಅವರನ್ನು ಮನೆಯಲ್ಲಿ ಕೂರುವಂತೆ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಶಕ್ತಿ ವಿರುದ್ಧ ನಮ್ಮ ಹೋರಾಟ ಇತ್ತು. ಅಂತಹ ವ್ಯಕ್ತಿಯ ವರ್ಚಸ್ಸನ್ನು ನಾವು ಹಾಳು ಮಾಡಿಲ್ಲ, ಬದಲಾಗಿ ನೀವು ಹಾಳು ಮಾಡುತ್ತಿರುವುದು. ಸಿದ್ದರಾಮಯ್ಯ ಅವರ ವರ್ಚಸ್ಸು ಮುಗಿಸಲು ಯತ್ನಿಸುತ್ತಿರುವರು ನೀವು ಎಂದು ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.
ಕರ್ನಾಟಕಕ್ಕೆ ಉದ್ಯಮಿಗಳು ಬರಲು ಭಯ ಬೀಳ್ತೊದ್ದಾರೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಆರೋಪಿಸಿದರು. ಕೇಂದ್ರ ಕೈಗಾರಿಕೆ ಸಚಿವರಾಗಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿ ಎನ್ನುತ್ತಾರೆ ಸಿಎಂ. ಆದರೆ, ಉದ್ಯಮಿಗಳಿಗೆ ಕರ್ನಾಟಕಕ್ಕೆ ಹೋಗಿ ಎಂದರೆ ಕೈಮುಗಿಯುತ್ತಾರೆ. ಹಿಂದೆ ಕರ್ನಾಟಕಕ್ಕೆ ಉದ್ಯಮಿಗಳು ಬರುತ್ತಿದ್ದರು, ಆದರೆ ಇವಾಗ ಯಾರೂ ಬರುತ್ತಿಲ್ಲ. ಕರ್ನಾಟಕ ಎಂದರೆ ಉದ್ಯಮಿಗಳು ಭಯ ಬೀಳುತ್ತಾರೆ. ಕರ್ನಾಟಕದಲ್ಲಿ 974 ಅರ್ಜಿಗಳಿಗೆ ಇನ್ನೂ ಕ್ಲಿಯರೆನ್ಸ್ ನೀಡಿಲ್ಲ ಎಂದು ಆರೋಪಿಸಿದರು. ಹಾಗಿರುವಾಗ ಯಾಕಾಗಿ ಕರ್ನಾಟಕಕ್ಕೆ ಉದ್ಯಮಿಗಳು ಬರುತ್ತಾರೆ? ಎಂದು ಪ್ರಶ್ನಿಸಿದರು.
ನಿಮ್ಮನ್ನು ಮುಖ್ಯಮಂತ್ರಿ ಎಂದು ಒಪ್ಪಲ್ಲ ಎಂದು ಡಿಕೆಶಿಗೆ ಎಚ್‌ಡಿಕೆ ತಿರುಗೇಟು ನೀಡಿದರು. ನಿಮ್ಮ ಬಗ್ಗೆ ಬರೆದಿರುವ ಪುಸ್ತಕ ಓದಿದರೆ ನಿಮ್ಮನ್ನು ಸಿಎಂ ಎಂದು ಯಾರೂ ಒಪ್ಪಲ್ಲ ಎಂದ ಅವರು, ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ ವಿರುದ್ಧದ ಪುಸ್ತಕ ಪ್ರದರ್ಶನ ಮಾಡಿದರು. ಸಿಎಂಗೆ ಪತ್ರ ಬರೆದ ವಿಚಾರವಾಗಿ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು. ಪತ್ರಿಕೆಯಲ್ಲಿ ಮತ್ತೊಂದು ಮಾಹಿತಿ ನೋಡಿದೆ, ಖಾಸಗಿ ಮಾಧ್ಯಮದ ಮುಖ್ಯಸ್ಥನ ಜೊತೆ ಕೆಲಸ ಮಾಡುತ್ತಿದ್ದ ವಿಕ್ಕಿ ಎಂಬ ವ್ಯಕ್ತಿ ಅನುಮಾಸ್ಪದವಾಗಿ ಸತ್ತಿದ್ದಾನೆ. ಪೊಲೀಸರು ಯುಡಿಆರ್ ಮಾಡಿದ್ದು, ಅಸಹಜ ಸಾವು ಅಂತಿದ್ದಾರೆ. ಸುಮ್ಮನೆ ಜೆಡಿಎಸ್ ಹೆಸರು ಹೇಳೋದಲ್ಲ.12 ಸ್ಟಿಂಗ್ ವಿಡಿಯೋ ಇದ್ಯಂತೆ, ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಇದರ ಬಗ್ಗೆ ಹೇಳಿದ್ದಾರೆ. ಇಷ್ಟೆಲ್ಲ ಆರೋಪ ಇರೋ ವ್ಯಕ್ತಿಯನ್ನ ಸುಮ್ಮನೇ ಹೊರಗೆ ಬಿಟ್ಟಿದ್ದೀರಾ ಎಂದು ಕುಮಾರಸ್ವಾಮಿ ಗುಡುಗಿದರು.
ಸ್ಟಿಂಗ್ ಆಪರೇಷನ್‌ನಲ್ಲಿ ಕಾಣಿಸಿಕೊಂಡ ಕೃಪಾ ಆಳ್ವಾ ಕಾಂಗ್ರೆಸ್ ನವರು. 2011 ರಲ್ಲಿ ಆದ ಘಟನೆಯಂತೆ. ಯಾಕಪ್ಪ 2023ರಲ್ಲಿ ಆ ಹೆಣ್ಣುಮಗಳನ್ನ ಕೂರಿಸಿಕೊಂಡು ಸ್ಟಿಂಗ್ ಅಪರೇಷನ್ ಮಾಡಿದ್ರಿ? ಆದರೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ನೋಟಿಸ್ ಕೊಡ್ತಾರೆ. ಯಾಕೆ ಆ ಹೆಣ್ಣುಮಗಳನ್ನ ಕರೆದುಕೊಂಡು ಬಂದು ಹೇಳ್ತಿಯಾ ಹೇಳ್ತಿಯಾ ಅಂತ ಯಾಕೆ ಸ್ಟಿಂಗ್ ಮಾಡಿದ್ರು? ಇದರ ಸತ್ಯ ಹೊರಗೆ ತರ್ತಾರಾ ಹೋಮ್ ಮಿನಿಸ್ಟರ್? ಎಂದು ಪ್ರಶ್ನಿಸಿದರು. ಸ್ಟಿಂಗ್ ಆಪರೇಷನ್ ಜೆಡಿಎಸ್ ಸಂಚು ಅಂತಾರೆ, ಮಾನ ಮರ್ಯಾದೆ ಇದ್ಯಾ? ಇದು ನಮ್ಮ ಸಂಚಾ? ಯಾರು ಮಾಡಿದ್ದಾರೆ ಅಂತ ಅದರಲ್ಲೇ ಸಾಕ್ಷ್ಯ ಇದೆಯಲ್ವಾ.. ಎಂದು ಹೇಳಿದರು.
23-10-26 05:47 pm
HK News Staffer
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
ಬಿಲ್ ಬಾಕಿಯಿದ್ದರೂ ಮೃತದೇಹ ತಡೆಹಿಡಿಯುವಂತಿಲ್ಲ: ಖಾಸ...
23-10-26 02:53 pm
ಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲು ಓಡಿದ ಅಂಬಾರಿ ಹೊತ...
21-10-26 10:31 pm
ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,10...
20-10-26 06:06 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
23-10-26 05:48 pm
HK News Desk
19 ಗಂಟೆ 29 ನಿಮಿಷಗಳ ಸಾಧನೆ: 2,000 ಮೆಹಂದಿ ಕೋನ್ ತ...
23-10-26 02:56 pm
Builder Donald Pinto Fraud: ಮಾರ್ನಮಿಕಟ್ಟೆ ಸರ್ಕ...
22-10-26 09:37 pm
ರೆಸ್ಲರ್ ‘ಗ್ರೇಟ್ ಖಲಿ’ ನೋಡಲು ಹುಚ್ಚೆದ್ದು ಸೇರಿದ ಅ...
21-10-26 09:20 pm
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
23-10-26 05:48 pm
HK News Staffer
B Care Company, Madhumita Kaur: ಇನ್ಶೂರೆನ್ಸ್ ಪ...
22-10-26 03:21 pm
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm
Boliyaru Murder Case, Dakshina Kannada Crime...
22-10-26 10:32 am