ದೆಹಲಿ ಇಸ್ರೇಲ್ ರಾಯಭಾರ ಕಚೇರಿ ಬಳಿ ಬಾಂಬ್ ಸ್ಫೋಟ ; ಸಿಸಿಟಿವಿಯಲ್ಲಿ ಇಬ್ಬರು ಸೆರೆ

30-01-21 10:23 am       Headline Karnataka News Network   ದೇಶ - ವಿದೇಶ

ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ ಸಂಬಂಧ ಇದೀಗ ಸಿಸಿಟಿವಿ ದೃಶ್ಯಾವಳಿ ದೆಹಲಿ ಪೊಲೀಸರಿಗೆ ಸಿಕ್ಕಿದೆ.

ನವದೆಹಲಿ,ಜ.30 : ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ ಸಂಬಂಧ ಇದೀಗ ಸಿಸಿಟಿವಿ ದೃಶ್ಯಾವಳಿ ದೆಹಲಿ ಪೊಲೀಸರಿಗೆ ಸಿಕ್ಕಿದೆ. ಕ್ಯಾಬ್​ನಲ್ಲಿ ಇಬ್ಬರು ವ್ಯಕ್ತಿಗಳು ಕಚೇರಿ ಮುಂದೆ ಬಂದಿಳಿದು, ಸ್ಫೋಟ ನಡೆದಿರುವ ಸ್ಥಳದೆಡೆಗೆ ನಡೆದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಫೋಟಕ್ಕೂ ಈ ವ್ಯಕ್ತಿಗಳಿಗೂ ಸಂಬಂಧವಿದೆಯಾ ಎನ್ನುವುದನ್ನು ದೆಹಲಿ ವಿಶೇಷ ಪೊಲೀಸ್ ಘಟಕ ಪತ್ತೆ ಹಚ್ಚುತ್ತಿದೆ. ಕ್ಯಾಬ್ ಚಾಲಕನನ್ನು ಸಂಪರ್ಕಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕ್ಯಾಬ್ ಚಾಲಕ ನೀಡಿದ ಮಾಹಿತಿ ಮೇರೆಗೆ ಆ ಇಬ್ಬರು ವ್ಯಕ್ತಿಗಳ ರೇಖಾಚಿತ್ರ ಬಿಡಿಸಲಾಗುತ್ತಿದೆ. ರೇಖಾಚಿತ್ರದ ಆಧಾರದ ಮೇಲೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.

ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್​ ಬಳಸಲಾಗಿದೆ ಎಂದು ವಿಧಿವಿಜ್ಞಾನ ತಂಡ ಸ್ಪಷ್ಟಪಡಿಸಿದೆ. ಅಲ್ಲದೇ ಘಟನಾ ಸ್ಥಳದಲ್ಲಿರುವ ಮರದ ಹಿಂದೆ ಒಂದು ಕ್ಯಾಮರಾ ಕೂಡ ಸಿಕ್ಕಿದೆ.

ನಿನ್ನೆ ಸಂಜೆ ದೆಹಲಿಯ ಔರಂಗಾಜೇಬ್​ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ಸಂಭವಿಸಿದೆ. 4 ರಿಂದ 5 ಕಾರುಗಳಿಗೆ ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

Read: ದೆಹಲಿ ; ಇಸ್ರೇಲ್ ರಾಯಭಾರ ಕಚೇರಿ ಆವರಣದಲ್ಲಿ ಬಾಂಬ್ ಸ್ಫೋಟ !! 

A low-intensity blast took place near the Israel embassy in New Delhi around 5 pm on Friday, coinciding with the anniversary of India and Israel establishing full diplomatic relations on January 29, 1992.