ಬಜೆಟ್ 2021; ಬಂದರು ಯೋಜನೆಗಳಿಗೆ ಖಾಸಗಿ ಸಹಭಾಗಿತ್ವ

01-02-21 05:54 pm       Headline Karnataka News Network   ದೇಶ - ವಿದೇಶ

2,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 7 ಪ್ರಮುಖ ಬಂದರುಗಳ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನೀಡಲಾಗುತ್ತಿದೆ

ನವದೆಹಲಿ, ಫೆ.1: ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಹಲವು ಯೋಜನೆಗಳಿಗೆ ಅನುದಾನ ಹೆಚ್ಚಿಸಲಾಗಿದೆ. 2021-22ರ ಹಣಕಾಸು ವರ್ಷದಲ್ಲಿ 2,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 7 ಪ್ರಮುಖ ಬಂದರುಗಳ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ಮಂಡಿಸಿದ್ದಾರೆ.

ಪ್ರಮುಖ ಬಂದರುಗಳು ತಮ್ಮ ಕಾರ್ಯಾಚರಣೆಯ ಸೇವೆಗಳನ್ನು ಸ್ವಯಂ ನಿರ್ವಹಿಸುವ ಬದಲು ಖಾಸಗಿ ಪಾಲುದಾರರು ಅದನ್ನು ನಿರ್ವಹಿಸುವ ಮಾದರಿಯತ್ತ ಸಾಗಲಿದ್ದಾರೆ ಎಂದಿದ್ದಾರೆ. ಭಾರತದಲ್ಲಿ ವ್ಯಾಪಾರಿ ಹಡಗುಗಳ ಪ್ಲಾಗಿಂಗ್ ಉತ್ತೇಜಿಸಲು ಭಾರತೀಯ ಹಡಗು ಕಂಪನಿಗಳಿಗೆ ಸಚಿವಾಲಯಗಳು ಮತ್ತು ಸಿಪಿಎಸ್​​​​ಇ ಆರಂಭಿಸುವ ಜಾಗತಿಕ ಟೆಂಡರ್​​​ಗಳಲ್ಲಿ 5 ವರ್ಷಗಳ ಕಾಲ 1,624 ಕೋಟಿ ರೂ. ಸಬ್ಸಿಡಿ ಬೆಂಬಲ ಯೋಜನೆಯನ್ನು ತಮ್ಮ ಬಜೆಟ್ ಭಾಷಣದಲ್ಲಿ ಸೀತಾರಾಮನ್​ ಪ್ರಕಟಿಸಿದರು.

ಈ ಉಪಕ್ರಮವು ಭಾರತೀಯ ಹಡಗು ಸಿಬ್ಬಂದಿಗೆ ದೊಡ್ಡ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಜೊತೆಗೆ ಜಾಗತಿಕ ಹಡಗು ಕ್ಷೇತ್ರದಲ್ಲಿ ಭಾರತೀಯ ಕಂಪನಿಗಳ ಪಾಲನ್ನು ಹೆಚ್ಚಿಸುತ್ತದೆ.

2024ರ ವೇಳೆಗೆ ಹಡಗಿನ ಮರುಬಳಕೆ ಸಾಮರ್ಥ್ಯವನ್ನು ಸುಮಾರು 4.5 ದಶಲಕ್ಷ ಲೈಟ್ ಡಿಸ್ಪ್ಲೇಸ್‌ಮೆಂಟ್ ಟೋನ್ (ಎಲ್‌.ಡಿ.ಟಿ)ಗೆ ದ್ವಿಗುಣಗೊಳಿಸಲು ಪ್ರಸ್ತಾಪಿಸಿದರು. ಗುಜರಾತ್​​​​​​ನ ಅಲಾಂಗ್​​​ನಲ್ಲಿ ಸುಮಾರು 90 ಹಡಗು ಮರುಬಳಕೆ ಯಾರ್ಡ್​​ಗಳು ಈಗಾಗಲೇ ಎಚ್​​ಕೆಸಿ (ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಸಮಾವೇಶ) ಅನುಸರಣೆ ಪ್ರಮಾಣಪತ್ರಗಳನ್ನು ಸಾಧಿಸಿರುವುದರಿಂದ ಯುರೋಪ್ ಮತ್ತು ಜಪಾನ್​​ನಿಂದ ಭಾರತಕ್ಕೆ ಹೆಚ್ಚಿನ ಹಡಗುಗಳನ್ನು ತರಲು ಪ್ರಯತ್ನಿಸಲಾಗುವುದು ಎಂದಿದ್ದಾರೆ. ಇದರಿಂದ ದೇಶದ ಯುವಕರಿಗೆ ಹೆಚ್ಚುವರಿಯಾಗಿ 1.5 ಲಕ್ಷ ಉದ್ಯೋಗಗಳು ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

Finance Minister Nirmala Sitharaman announced seven port projects worth more than Rs 2,000 crore investment. These projects would be undertaken through public-private partnership (PPP) mode, Sitharaman said in her Budget 2021 speech.