ಬ್ರೇಕಿಂಗ್ ನ್ಯೂಸ್
07-02-21 04:35 pm Headline Karnataka News Network ದೇಶ - ವಿದೇಶ
ಚೆನ್ನೈ, ಫೆ.7: ನೇವಿಯಲ್ಲಿ ಅಧಿಕಾರಿ ಆಗಿದ್ದ ರಾಂಚಿ ಮೂಲದ ಯುವಕನ ಯುವಕನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ, ಕಾಡಿನ ಮಧ್ಯೆ ಕರೆದೊಯ್ದು ಪೆಟ್ರೋಲ್ ಸುರಿದು ಜೀವಂತ ಸುಟ್ಟು ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಛತ್ತೀಸ್ಗಢ ರಾಜ್ಯದ ರಾಂಚಿ ಮೂಲದ ನಿವಾಸಿಯಾಗಿರುವ ಸೂರಜ್ ಕುಮಾರ್ ದುಬೆ (26) ಶನಿವಾರ ಚೆನ್ನೈನಿಂದ 1500 ಕಿಮೀ ದೂರದ ಮಹಾರಾಷ್ಟ್ರದ ಪಾಲ್ಘಾರ್ ಎನ್ನುವ ಜಿಲ್ಲೆಯ ಕಾಡಿನ ಮಧ್ಯೆ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಐಎನ್ಎಸ್ ಅಗ್ರಣಿ ಎಂಬ ನೌಕೆಯಲ್ಲಿ ಸೀಮನ್ ಆಗಿದ್ದ ಸೂರಜ್ ದುಬೆ ರಜೆಯಲ್ಲಿ ತನ್ನೂರು ರಾಂಚಿಗೆ ತೆರಳಿದ್ದರು. ರಜೆ ಮುಗಿಸಿ, ಜ.30ರಂದು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ರಾತ್ರಿ 9 ಗಂಟೆಗೆ ಮೂರು ಮಂದಿ ಆಗಂತುಕರು ಪಿಸ್ತೂಲ್ ತೋರಿಸಿ, ಎಸ್ ಯುವಿ ಮಹೀಂದ್ರಾ ವಾಹನದಲ್ಲಿ ದುಬೆಯನ್ನು ಅಪಹರಿಸಿದ್ದಾರೆ. ಚೆನ್ನೈನಲ್ಲಿ ಮೂರು ದಿನ ಕೂಡಿಹಾಕಿದ್ದ ತಂಡ, 10 ಲಕ್ಷ ರೂ. ನೀಡುವಂತೆ ಡಿಮಾಂಡ್ ಮಾಡಿದ್ದಾರೆ. ಆದರೆ, ಫೆ.5ರಂದು ಸೂರಜ್ ದುಬೆಯನ್ನು ಪಾಲ್ಘಾರ್ ಜಿಲ್ಲೆಯ ಘೋಲ್ವಾಡ್ ಎಂಬಲ್ಲಿಗೆ ಕೊಂಡೊಯ್ದು ಕಾಡಿನ ಮಧ್ಯೆ ಒಯ್ದಿದ್ದಾರೆ. ಅಲ್ಲಿ 90 ಶೇ. ಸುಟ್ಟ ಸ್ಥಿತಿಯಲ್ಲಿ ಸೂರಜ್ ದೇಹ ಪತ್ತೆಯಾಗಿದೆ.

ಪಾಲ್ಘಾರ್ ಜಿಲ್ಲೆಯ ಎಸ್ಪಿ ದತ್ತಾ ಶಿಂಧೆ ಪ್ರಕಾರ, ಸೂರಜ್ ಪತ್ತೆಯಾದ ಸಂದರ್ಭದಲ್ಲಿ ಜೀವಂತ ಇದ್ದರು. ಸ್ವತಃ ಈ ಬಗ್ಗೆ ಹೇಳಿಕೆಯನ್ನೂ ದುಬೆ ನೀಡಿದ್ದರು. ಕಿಡ್ನಾಪ್ ಮಾಡಿ, ಪಾಲ್ಘಾರ್ ಜಿಲ್ಲೆಗೆ ತಂದಿದ್ದಲ್ಲದೆ, ಶುಕ್ರವಾರ ತನಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟಿದ್ದರ ಬಗ್ಗೆ ಹೇಳಿಕೆ ನೀಡಿದ್ದರು. ತಾನು ಕೊಯಂಬತ್ತೂರಿನ ನೌಕಾದಳದ ಟ್ರೇನಿಂಗ್ ಸ್ಕೂಲಿನಲ್ಲಿ ಸೀಮನ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಸೇನಾಧಿಕಾರಿ ಎಂದು ಗೊತ್ತಾದ ಬಳಿಕ ನೌಕಾ ಪಡೆಯ ಹಾಸ್ಪಿಟಲ್ ಗೆ ದಾಖಲಿಸಿದ್ದೆವು ಎಂದಿದ್ದಾರೆ.

ಇದೇ ವೇಳೆ, ನೌಕಾಪಡೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು ರಜೆಯಲ್ಲಿ ತೆರಳಿದ್ದ ದುಬೆಯನ್ನು ಫೆ.5ರಂದು ಪಾಲ್ಘಾರ್ ಜಿಲ್ಲೆಯಲ್ಲಿ 90 ಶೇ. ಸುಟ್ಟ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿತ್ತು. ಸೇನಾ ಆಸ್ಪತ್ರೆಗೆ ತರಲಾಗಿದ್ದು ಅಲ್ಲಿನ ವೈದ್ಯರು ಸೂರಜ್ ದುಬೆ ಮೃತರಾಗಿರುವ ಬಗ್ಗೆ ಘೋಷಿಸಿದ್ದಾರೆ ಎಂದಿದೆ.
ಚೆನ್ನೈ ಏರ್ಪೋರ್ಟ್ ನಲ್ಲಿ ಇಳಿದಿದ್ದ ದುಬೆಯನ್ನು ಅಪಹರಣಕಾರರು 1500 ಕಿಮೀ ದೂರದ ಮಹಾರಾಷ್ಟ್ರದ ಥಾಣೆ ಬಳಿಯ ಪಾಲ್ಘಾರ್ ಜಿಲ್ಲೆಗೆ ಒಯ್ಯಲಾಗಿತ್ತು. ಹತ್ತು ಲಕ್ಷ ನೀಡಲು ಒಪ್ಪದ ಕಾರಣಕ್ಕೆ ಕಾಡಿನ ಮಧ್ಯೆ ಒಯ್ದು ಜೀವಂತವಾಗಿ ಪೆಟ್ರೋಲ್ ಸುರಿದು ದಹಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ಸಂಬಂಧಿಸಿ ಕಿಡ್ನಾಪ್, ಕೊಲೆ, ದರೋಡೆ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ದುಬೆಯನ್ನು ಅಷ್ಟು ದೂರಕ್ಕೆ ಯಾಕೆ ಒಯ್ದಿದ್ದಾರೆ ಎನ್ನುವುದೇ ಪೊಲೀಸರ ಕುತೂಹಲಕ್ಕೆ ಕಾರಣವಾಗಿದೆ. ಚೆನ್ನೈನಿಂದ ಘೋಲ್ವಾಡ್ ವರೆಗಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಪಹರಣಕಾರರು ದುಬೆಗೆ ಮೊದಲೇ ಪರಿಚಿತರಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
A 26-year-old Navy sailor who had been abducted in Chennai on January 30 was set on fire by the kidnappers in jungles of Maharashtra's Palghar district. The Navy officer succumed to his burn injuries while he was rushed to a hospital, the police said on Saturday.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
24-08-26 01:13 pm
HK News Staffer
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
24-08-26 01:03 pm
HK News Staffer
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm