ಪಶ್ಚಿಮ ಬಂಗಾಳದಲ್ಲಿ ಹೊಸ ವೈರಸ್ ದಾಳಿ ಶಂಕೆ ; 250ಕ್ಕೂ ಹೆಚ್ಚು ನಾಯಿಗಳ ಸಾವು

21-02-21 04:33 pm       Headline Karnataka News Network   ದೇಶ - ವಿದೇಶ

ಕೊಲ್ಕತ್ತಾ ನಗರದಲ್ಲಿ ಮೂರು ದಿನಗಳಲ್ಲಿ 250 ನಾಯಿಗಳು ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೊಲ್ಕತ್ತಾ, ಫೆ.21 : ಕೊಲ್ಕತ್ತಾ ನಗರದಲ್ಲಿ ಮೂರು ದಿನಗಳಲ್ಲಿ 250 ನಾಯಿಗಳು ಅಲ್ಲಲ್ಲಿ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಹೊಸ ವೈರಸ್ ದಾಳಿ ಇಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.

ನಾಯಿಗಳನ್ನು ಯಾರಾದರೂ ವಿಷವಿಟ್ಟು ಹತ್ಯೆ ಮಾಡಿದ್ದಾರೆ ಅನ್ನುವ ಅನುಮಾನ ವ್ಯಕ್ತವಾಗಿತ್ತು. ಆದರೆ, ಇದೀಗ ನಾಯಿಗಳ ಸಾವಿಗೆ ಹೊಸ ರೀತಿಯ ವೈರಸ್ ಕಾರಣ ಇರಬೇಕು ಎಂದು ಶಂಕೆ ಪಡಲಾಗಿದೆ. ಸಾಮಾನ್ಯವಾಗಿ ಬಂಗಾಳದಲ್ಲಿ ನಾಯಿಗಳಿಗೆ ಈ ಸಮಯದಲ್ಲಿ ಸೋಂಕು ಸಾಮಾನ್ಯ. ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ. ನಾಯಿಗಳಿಗೆ ಹರಡಿದ ಸೋಂಕು ಮನುಷ್ಯರಿಗೆ ಹರಡುವ ಸಾಧ್ಯತೆ ಇಲ್ಲ. ನಾಯಿಗಳ ದ್ರವವನ್ನು ಪಡೆದಿದ್ದೇವೆ. ಪರೀಕ್ಷೆ ಮಾಡುತ್ತಿದ್ದೇವೆ ಎಂದು ಸರ್ಕಾರಿ ಪಶುವೈದ್ಯರು ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ಶ್ವಾನಗಳು ಸಾವನ್ನಪ್ಪಿವೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ ಈ ಘಟನೆ ನಡೆದಿದ್ದು, ನಾಯಿಗಳ ದಿಢೀರ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಕಳೆದ ಮಂಗಳವಾರ 60, ಬುಧವಾರ 97, ಗುರುವಾರ 45 ಸೇರಿದಂತೆ ಮೂರು ದಿನಗಳಲ್ಲಿ ಸುಮಾರು 200 ನಾಯಿಗಳು ಸಾವನ್ನಪ್ಪಿವೆ.

More than 250 stray dogs most of the puppies were found dead in the past three days in Bishnupur, Bankura.