ಕಾರು-ಬಸ್ ಡಿಕ್ಕಿ ; ಸ್ಥಳದಲ್ಲೇ ಐವರ ಸಾವು

22-02-21 11:24 am       Headline Karnataka News Network   ದೇಶ - ವಿದೇಶ

ಕಾರು ಮತ್ತು ಸಾರಿಗೆ ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ, ಫೆ.22 : ಕಾರು ಮತ್ತು ಸಾರಿಗೆ ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ನೆವಾಸ ತಾಲೂಕಿನ ಔರಂಗಾಬಾದ್-ಅಹ್ಮದ್‌ನಗರ ಹೆದ್ದಾರಿಯ ದೇವ್‌ಗಡ್ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.

ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮೃತರನ್ನು ಜಾಲ್ನಾ ಜಿಲ್ಲೆಯವರೆಂದು ಗುರುತಿಸಲಾಗಿದೆ.

ಮೃತರನ್ನು ಶಾಂತನು ನಾರಾಯಣ್ ಕಾಕ್ಡೆ (35), ಕೈಲಾಸ್ ನ್ಯೂರೆ (35), ವಿಷ್ಣು ಚವಾಣ್ (31), ರಮೇಶ್ ದಶರಥ್ ಘುಗೆ (40) ಮತ್ತು ಕಾರು ಚಾಲಕ ನಾರಾಯಣ್ ವರ್ಕಡ್ (23) ಎಂದು ಗುರುತಿಸಲಾಗಿದೆ

ಅಪಘಾತ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನೆವಾಸಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Five occupants of a car were killed when their vehicle collided with a bus in Maharashtra''s Ahmednagar district in the wee hours of Monday, police said.