ದಾದ್ರಾ-ನಗರ್ ಹವೇಲಿ ಸಂಸದ ಮೋಹನ್ ದೇಲ್ಕರ್ ಆತ್ಮಹತ್ಯೆ

22-02-21 04:42 pm       Headline Karnataka News Network   ದೇಶ - ವಿದೇಶ

ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಕ್ಷೇತ್ರದ ಸದಸ್ಯ ಮೋಹನ್ ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ

ಮುಂಬೈ, ಫೆ.22: ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಕ್ಷೇತ್ರದ ಸದಸ್ಯ, ಪಕ್ಷೇತರ ಸಂಸದ ಮೋಹನ್ ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ದಕ್ಷಿಣ ಮುಂಬೈನ ಸೀ ಗ್ರೀನ್ ಎನ್ನುವ ಹೊಟೇಲಿನ ಕೊಠಡಿಯೊಳಗೆ ಸಂಸದರ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೇಲ್ಕರ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಹನ್ ದೇಲ್ಕರ್ ಶವವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಸ್ಥಳದಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಪತ್ರ ಲಭ್ಯವಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸಂಸದರಾಗಿದ್ದ ಮೋಹನ್ ದೇಲ್ಕರ್, 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಸ್ವತಂತ್ರವಾಗಿ ಸ್ಪರ್ಧಿಸಿ, ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರದಿಂದ ಸಂಸದರಾಗಿದ್ದರು.