ನಿರ್ಮಾಣಹಂತದ ಕಟ್ಟಡ ಪ್ರದೇಶದಲ್ಲಿ 11 ಅಡಿ ಉದ್ದದ ಮೊಸಳೆ ಪತ್ತೆ

01-03-21 11:01 am       Headline Karnataka News Network   ದೇಶ - ವಿದೇಶ

ಕಟ್ಟಡ ನಿರ್ಮಾಣ ಮಾಡುತ್ತಿರುವ ಪ್ರದೇಶದಲ್ಲಿ ಮೊಸಳೆ ಪತ್ತೆಯಾಗಿರುವ ಘಟನೆ ಗುಜರಾತ್‍ನ ವಡೋರಾದಲ್ಲಿ ನಡೆದಿದೆ.

ನವದೆಹಲಿ,  ಮಾ 01: ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪ್ರದೇಶದಲ್ಲಿ ಬೃಹದಾಕಾರದ ಮೊಸಳೆ ಪತ್ತೆಯಾಗಿರುವ ಘಟನೆ ಗುಜರಾತ್‍ನ ವಡೋರಾದಲ್ಲಿ ನಡೆದಿದೆ.

ಕಟ್ಟಡ ನಿರ್ಮಾಣ ಮಾಡುತ್ತಿರುವ ಪ್ರದೇಶದಲ್ಲಿ ಮೊಸಳೆಯನ್ನು ನೋಡಿ ಕಾರ್ಮಿಕರು ತಕ್ಷಣ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‍ಗೆ ತಿಳಿಸಿದ್ದಾರೆ. ಮೊಸಳೆ ಕಾಣಿಸಿಕೊಂಡಿರುವ ವೀಡಿಯೋ ಸಖತ್ ವೈರಲ್ ಆಗಿದೆ.

ಮೊಸಳೆ 10 ರಿಂದ 11 ಅಡಿಯಷ್ಟು ಉದ್ದವಿದ್ದು, ಕೇಲ್‍ಪುರ್ ಪ್ರದೇಶ ಪ್ರದೇಶದ ಚರಂಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಬಿಲ್ಡರ್ ನಮಗೆ ಕರೆಮಾಡಿ ಮೊಸಳೆ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಮೊಸಳೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ವನ್ಯಜೀವಿ ರಕ್ಷಣಾ ಟ್ರಸ್ಟ್‍ನ ಅಧ್ಯಕ್ಷ ಅರವಿಂದ್ ಪವಾರ್ ಹೇಳಿದ್ದಾರೆ.

A crocodile was rescued from a construction site in Gujarat's Vadodara on Saturday. The incident took place in the Kelanpur area, and according to news agency ANI, the reptile was 11-feet long.