ಕೋವಿಡ್ ಇಳಿಕೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಗಳೂ ಓಪನ್ !

01-03-21 02:22 pm       Headline Karnataka News Network   ದೇಶ - ವಿದೇಶ

ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಮಾ.1ರಿಂದಲೇ ಶಾಲೆ ಆರಂಭಿಸಲು ರಾಜ್ಯ ಸರಕಾರ ಆದೇಶ ಮಾಡಿದೆ.

ಲಕ್ನೋ, ಮಾ.1: ಕೋವಿಡ್ ಪ್ರಕರಣ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಮಾ.1ರಿಂದಲೇ ಶಾಲೆ ಆರಂಭಿಸಲು ರಾಜ್ಯ ಸರಕಾರ ಆದೇಶ ಮಾಡಿದೆ.

ಇದರಂತೆ, ಒಂದನೇ ತರಗತಿಯಿಂದಲೇ ತರಗತಿಗಳು ಆರಂಭಗೊಂಡಿವೆ. ನಿರ್ದಿಷ್ಟ ಅಂತರ, ಫೇಸ್ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಅಲ್ಲದೆ, ತರಗತಿಯಲ್ಲಿ 50 ಶೇ. ಮಾತ್ರ ಹಾಜರಾತಿ ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ಕಳೆದ ಫೆಬ್ರವರಿಯಲ್ಲೇ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿತ್ತು.

ಪೋಷಕರು ಮತ್ತು ಶಿಕ್ಷಕರ ಅಭಿಪ್ರಾಯಗಳನ್ನು ಪಡೆದೇ ಶಾಲೆ ಆರಂಭಿಸಲಾಗುತ್ತಿದೆ. ಬಹುತೇಕ ಪೋಷಕರು ಶಾಲೆ ಆರಂಭಿಸಲು ಸಮ್ಮತಿ ಸೂಚಿಸಿದ್ದರು. ಶಾಲೆಗಳಿಲ್ಲದೆ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯುವ ಹೆದರಿಕೆ ಇದ್ದುದರಿಂದ 50 ಶೇ. ಹಾಜರಾತಿ ಇಟ್ಟುಕೊಂಡು ಒಂದು ವರ್ಷದ ಬಳಿಕ ತರಗತಿ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ನೂರು ಶೇ. ಹಾಜರಾತಿ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಜನವರಿ, ಫೆಬ್ರವರಿಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸಲಾಗಿತ್ತು. ಈಗ ಪ್ರಾಥಮಿಕ ಶಾಲೆಯನ್ನು ತೆರೆಯುತ್ತಿದ್ದಂತೆ ಮತ್ತೆ ಯಥಾಸ್ಥಿತಿ ಕಂಡುಬಂದಿದೆ.

The Uttar Pradesh government on Friday announced that the schools in the state will reopen for classes from 6th to 8th from February 10, while for students of classes 1st to 5th, the schools will reopen from March 1. On Tuesday, CM Yogi Adityanath had reviewed the COVID-19 unlock system.