ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳಿ ; 350 ಕೋಟಿ ತೆರಿಗೆ ವಂಚನೆ ಪತ್ತೆ

05-03-21 09:37 am       Headline Karnataka News Network   ದೇಶ - ವಿದೇಶ

ಬಾಲಿವುಡ್​ನ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸುಮಾರು ₹ 350 ಕೋಟಿ ಮೊತ್ತದ ಅವ್ಯವಹಾರ ಪತ್ತೆ ಮಾಡಿದ್ದಾರೆ. 

ದೆಹಲಿ, ಮಾ 5: ಬಾಲಿವುಡ್​ನ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ಮನೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸುಮಾರು ₹ 350 ಕೋಟಿ ಮೊತ್ತದ ಅವ್ಯವಹಾರ ಪತ್ತೆ ಮಾಡಿದ್ದಾರೆ. 

ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಬಾಲಿವುಡ್​ನ ಗಣ್ಯರು ಮೌನ ಮುರಿಯದಿರುವುದು ಟ್ವಿಟರ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ. #TaxChor #ITaxfraud ಹ್ಯಾಷ್​ಟ್ಯಾಗ್​ಗಳು ಟ್ವಿಟರ್​ ಇಂಡಿಯಾದಲ್ಲಿ ಟಾಪ್ ಟ್ರೆಂಡ್ ಆಗಿವೆ. ಸಾಕಷ್ಟು ಜನರು ತೆರಿಗೆ ವಂಚನೆಯನ್ನು ಟೀಕಿಸಿದ್ದಾರೆ.

ಸಿನಿಮಾಗಳ ಬಾಕ್ಸ್​ ಆಫೀಸ್​ ಸಂಗ್ರಹದ ಕೇವಲ ಶೇ 2ರಷ್ಟು ಮೊತ್ತವನ್ನು ಮಾತ್ರವೇ ಆದಾಯವಾಗಿ ಘೋಷಿಸಿದ್ದಾರೆ. ₹ 20 ಕೋಟಿ ಮೊತ್ತದಷ್ಟು ಬೋಗಸ್ ಖರ್ಚಿನ ದಾಖಲೆಗಳು ಪತ್ತೆಯಾಗಿವೆ. ಇಬ್ಬರನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು.

ಫಾಂಟಾಮ್ ಫಿಲ್ಸ್ಮ್​ ಕಂಪನಿಯ ಷೇರು ವಹಿವಾಟಿನ ಮಾಹಿತಿಯನ್ನು ತಿದ್ದಿರುವ, ಮೌಲ್ಯವನ್ನು ತಪ್ಪಾಗಿ ದಾಖಲಿಸಿರುವ ದಾಖಲೆಗಳು ಪತ್ತೆಯಾಗಿವೆ. ₹ 350 ಕೋಟಿ ಮೊತ್ತದಷ್ಟು ತೆರಿಗೆ ಬಾಧ್ಯತೆ ಇವರ ಮೇಲಿದೆ. ತಪ್ಸಿ ಪನ್ನು ಅವರು ₹ 5 ಕೋಟಿಯಷ್ಟು ತೆರಿಗೆ ಬಾಧ್ಯತೆ ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫಾಂಟಾಮ್ ಫಿಲ್ಮ್ಸ್​ನ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸಲು ಮುಂಬೈ ಮತ್ತು ಪುಣೆಯ 28 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ರಿಲಯನ್ಸ್​ ಎಂಟರ್​ಟೈನ್​ಮೆಂಟ್​ ಸಮೂಹದ ಸಿಇಒ ಶಿಬಶೀಷ್ ಸರ್ಕಾರ್ ಮತ್ತು KWAN, ಎಕ್ಸೀಡ್ ಟ್ಯಾಲೆಂಟ್ ಮ್ಯಾನೇಜ್​ಮೆಂಟ್​ ಕಂಪನಿಗಳ ಮೇಲೆಯೂ ದಾಳಿ ನಡೆದಿತ್ತು. ದಾಳಿಯ ವೇಳೆ ಪತ್ತೆಯಾದ 7 ಬ್ಯಾಂಕ್​ ಲಾಕರ್​ಗಳ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

The Income Tax Department has detected financial irregularities of over Rs 650 crore after it raided two film production companies, two talent management companies and a leading actress, the Central Board of Direct Taxes claimed on Thursday but did not take any names.