ಮಂಜೇಶ್ವರ ; ಬಿಜೆಪಿಯಿಂದ ಸುರೇಂದ್ರನ್ ಕಣಕ್ಕೆ ! ಘೋಷಣೆಯೊಂದೇ ಬಾಕಿ

13-03-21 06:07 pm       Headline Karnataka News Network   ದೇಶ - ವಿದೇಶ

ಕಾಸರಗೋಡಿನ ಮಂಜೇಶ್ವರ ಮತ್ತು ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ಕ್ಷೇತ್ರದಲ್ಲಿ ಸುರೇಂದ್ರನ್ ಅವರನ್ನು ಕಣಕ್ಕಿಳಿಸಲು ಒತ್ತಾಯ ಕೇಳಿಬಂದಿದೆ. 

ಕಾಸರಗೋಡು, ಮಾ.13: ಕೇರಳದಲ್ಲಿ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಬಗ್ಗೆ ಕುತೂಹಲ ಎದ್ದಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಕಾರ್ಯಕರ್ತರಲ್ಲಿ ಭಾರೀ ಕುತೂಹಲ ಕಾದಿತ್ತು. ಸ್ಥಳೀಯ ಕೆಲವು ಪುಢಾರಿಗಳು ತಾವೇ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಲಾಬಿ ನಡೆಸುವುದನ್ನೂ ಮಾಡಿದ್ದರು. ಈ ನಡುವೆ, ಹೆಚ್ಚಿನ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಅಥವಾ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅವರನ್ನು ಕಣಕ್ಕಿಳಿಸಲು ಒತ್ತಾಯ ಮಾಡಿದ್ದರು.

ಈಗ ಬಂದಿರುವ ಮಾಹಿತಿ ಪ್ರಕಾರ, ಸುರೇಂದ್ರನ್ ಅವರನ್ನೇ ಮಂಜೇಶ್ವರ ಕ್ಷೇತ್ರದಲ್ಲಿ ಕಣಕ್ಕಿಳಿಸಲು  ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿ ಚುನಾವಣಾ ಕಮಿಟಿಗೆ ರವಾನಿಸಲಾಗಿತ್ತು. ಕಾಸರಗೋಡಿನ ಮಂಜೇಶ್ವರ ಮತ್ತು ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ಕ್ಷೇತ್ರದಲ್ಲಿ ಸುರೇಂದ್ರನ್ ಅವರನ್ನು ಕಣಕ್ಕಿಳಿಸಲು ಒತ್ತಾಯ ಕೇಳಿಬಂದಿತ್ತು. ಪಟ್ಟಿ ಅಂತಿಮಗೊಳಿಸಿ ಸುರೇಂದ್ರನ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದರು.

ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯಲ್ಲಿ ಅಂತಿಮಗೊಳಿಸಲಾಗಿದ್ದು, ಭಾನುವಾರ ಅಧಿಕೃತವಾಗಿ ಮಾಧ್ಯಮಕ್ಕೆ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸುರೇಂದ್ರನ್ ಕಣಕ್ಕಿಳಿಯುತ್ತಾರೆಂಬ ಸುದ್ದಿ ಹೊರಬೀಳುತ್ತಲೇ ಕಾರ್ಯಕರ್ತರು ತಮ್ಮ ಸ್ಟೇಟಸ್ ನಲ್ಲಿ ಇದನ್ನು ಹಾಕ್ಕೊಂಡಿದ್ದಾರೆ. ಬಿಜೆಪಿ ವಾಟ್ಸಪ್ ಗ್ರೂಪ್ ಗಳಲ್ಲಿ ಸುರೇಂದ್ರನ್ ಫೋಟೋಗಳು ರಾರಾಜಿಸಲು ಆರಂಭಿಸಿದೆ. ಕಳೆದ 2016ರ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಒಡ್ಡಿದ್ದ ಸುರೇಂದ್ರನ್ ಮಂಜೇಶ್ವರ ಕ್ಷೇತ್ರದಲ್ಲಿ ಕೇವಲ 89 ಮತಗಳಿಂದ ಸೋಲು ಕಂಡಿದ್ದರು.

ಉಳಿದಂತೆ, ಸಿಪಿಎಂನಿಂದ ಕಾಞಂಗಾಡ್ ಮೂಲದ ಬಿ.ವಿ. ರಮೇಶ್ ಮತ್ತು ಲೀಗ್ ನಲ್ಲಿ ಎ.ಕೆ. ಅಶ್ರಫ್ ಅವರನ್ನು ಕಣಕ್ಕಿಳಿಸುವುದನ್ನು ಅಂತಿಮಗೊಳಿಸಲಾಗಿದೆ. ಸುರೇಂದ್ರನ್ ಮಂಜೇಶ್ವರದಲ್ಲಿ ಸ್ಪರ್ಧಿಸಿದರೆ, ಶ್ರೀಕಾಂತ್ ಕಾಸರಗೋಡು ಕ್ಷೇತ್ರದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. 

ಕೇರಳ ; ಬಿಜೆಪಿ ಲಿಸ್ಟ್ ಫೈನಲ್, ಸುರೇಂದ್ರನ್ ದೆಹಲಿಗೆ, ಕೊನ್ನಿಯಲ್ಲೇ ಕಣಕ್ಕೆ ರಾಜ್ಯಾಧ್ಯಕ್ಷ ?

The BJP, which is leaving no stone unturned to garner votes in Kerala, has deployed more than three dozen party leaders from Dakshina Kannada, Udupi and Kodagu districts in Karnataka to look after the management of its election campaign.