ಒಂದು ವರ್ಷದೊಳಗೆ ಟೋಲ್ ಬೂತ್‌ಗಳ ಬದಲು ಜಿಪಿಎಸ್ ವ್ಯವಸ್ಥೆ ಜಾರಿಗೆ ಬರಲಿದೆ ; ನಿತಿನ್ ಗಡ್ಕರಿ

18-03-21 09:17 pm       Headline Karnataka News Network   ದೇಶ - ವಿದೇಶ

ಇನ್ನು ಒಂದು ವರ್ಷದೊಳಗೆ ದೇಶದ ಎಲ್ಲ ಹೆದ್ದಾರಿಗಳಲ್ಲಿನ ಟೋಲ್ ಬೂತ್‌ಗಳನ್ನು ತೆಗೆದುಹಾಕುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ನವದೆಹಲಿ, ಮಾರ್ಚ್ 18: ಇನ್ನು ಒಂದು ವರ್ಷದೊಳಗೆ ದೇಶದ ಎಲ್ಲ ಹೆದ್ದಾರಿಗಳಲ್ಲಿನ ಟೋಲ್ ಬೂತ್‌ಗಳನ್ನು ತೆಗೆದುಹಾಕುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಫಾಸ್ಟ್ಯಾಗ್ ಕಡ್ಡಾಯದ ಬೆನ್ನಲ್ಲೇ, ಏಪ್ರಿಲ್‌ನಿಂದ ಸುಂಕ ಏರಿಕೆ ಭೀತಿ ಎದುರಿಸುತ್ತಿರುವ ವಾಹನ ಸವಾರರು, ತಮಗಿನ್ನು ಹೆದ್ದಾರಿಗಳಲ್ಲಿ ಟೋಲ್ ಕಟ್ಟುವ ಸಮಸ್ಯೆ ಇಲ್ಲ ಎಂದು ನಿಟ್ಟುಸಿರುಬಿಡುವ ಅಗತ್ಯವಿಲ್ಲ. ಏಕೆಂದರೆ ಟೋಲ್ ಬೂತ್‌ಗಳ ಬದಲು ಜಿಪಿಎಸ್ ಆಧಾರಿತ ಸುಂಕ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ.

Opinion | Can Nitin Gadkari break the deadly 'chakra-view' of Indian roads?

ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಗಡ್ಕರಿ, ದೇಶದಲ್ಲಿ ಶೇ 93ರಷ್ಟು ವಾಹನಗಳು ಫಾಸ್ಟ್ಯಾಗ್ ಮೂಲಕ ಸುಂಕ ಪಾವತಿಸುತ್ತಿವೆ. ಆದರೆ ಫಾಸ್ಟ್ಯಾಗ್ ಇಲ್ಲದೆ ದುಪ್ಪಟ್ಟು ಟೋಲ್ ಕಟ್ಟಬೇಕಿದ್ದರೂ ಶೇ 7ರಷ್ಟು ವಾಹನಗಳು ಅದನ್ನು ಬಳಸುತ್ತಿಲ್ಲ ಎಂದಿದ್ದಾರೆ.

No Toll Booths In India In 2 Years Time, Says Nitin Gadkari: To Be Replaced  By New GPS-Based Toll Collection System - DriveSpark News

ಫಾಸ್ಟ್ಯಾಗ್ ಬಳಸದೆ ಟೋಲ್ ಕಟ್ಟದ ವಾಹನಗಳ ಬಗ್ಗೆ ಪೊಲೀಸ್ ತನಿಖೆಗೆ ಸೂಚನೆ ನೀಡಲಾಗಿದೆ. ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸದೆ ಇದ್ದರೆ ವಾಹನ ಮಾಲೀಕರ ಮೇಲೆ ತೆರಿಗೆ ಕಳ್ಳತನ ಮತ್ತು ಜಿಎಸ್‌ಟಿ ವಂಚನೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

'ದೇಶದಲ್ಲಿನ ಎಲ್ಲ ನಿರ್ಮಿತ ಟೋಲ್ ಬೂತ್‌ಗಳನ್ನು ಇನ್ನು ಒಂದು ವರ್ಷದೊಳಗೆ ತೆಗೆದುಹಾಕಲಾಗುವುದು ಎಂದು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಅದರ ಅರ್ಥ ಟೋಲ್ ಸಂಗ್ರಹವು ಜಿಪಿಎಸ್ ಮೂಲಕ ನಡೆಯಲಿದೆ. ವಾಹನಗಳಲ್ಲಿನ ಜಿಪಿಎಸ್ ಇಮೇಜಿಂಗ್ ಆಧಾರದಲ್ಲಿ ಹಣ ಸಂಗ್ರಹಿಸಲಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.

ಹೊಸ ವಾಹನಗಳು ಫಾಸ್ಟ್ಯಾಗ್‌ಗಳನ್ನು ಅಳವಡಿಸಿಕೊಂಡೇ ಲಭ್ಯವಾಗಲಿವೆ. ಹಳೆಯ ವಾಹನಗಳಿಗೆ ಸರ್ಕಾರ ಉಚಿತವಾಗಿ ಫಾಸ್ಟ್ಯಾಗ್ ನೀಡಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಈ ಹಿಂದೆಯೂ ಗಡ್ಕರಿ, ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿ ಜಿಪಿಎಸ್ ಸುಂಕ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದರು.

ವೆಚ್ಚ ಹೆಚ್ಚು, ಆದಾಯ ವೃದ್ಧಿ;

GPS-based tolling system to eliminate traffic jams on Indian highways -  Geospatial World

ಮುಂಬರುವ ಟೋಲ್ ಸಂಗ್ರಹವು ಜಿಪಿಎಸ್ ಆಧಾರಿತವಾಗಿರಲಿದೆ. ರಷ್ಯಾ ಸರ್ಕಾರದ ಸಹಕಾರದೊಂದಿಗೆ ಈ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಸಂಚಾರ ದಟ್ಟಣೆಯನ್ನು ತಡೆಯುವುದು ಮಾತ್ರವಲ್ಲದೆ, ದೇಶದೆಲ್ಲೆಡೆ ಅಂತಹ ಟೋಲ್ ಪ್ಲಾಜಾಗಳ ನಿರ್ವಹಣೆಗೆ ವ್ಯಯಿಸುವ ವೆಚ್ಚವನ್ನು ಕೂಡ ಉಳಿಸಲಿದೆ. ಜತೆಗೆ ಸರ್ಕಾರದ ಸುಂಕ ಸಂಗ್ರಹ ಆದಾಯವನ್ನು ಗಣನೀಯವಾಗಿ ಹೆಚ್ಚಿಸಲಿದೆ ಎಂದು ಗಡ್ಕರಿ ತಿಳಿಸಿದ್ದರು.

ಹಳೆಯ ವಾಹನಗಳಿಗೂ ಅಳವಡಿಕೆ ;

FASTag

ಇತ್ತೀಚೆಗೆ ತಯಾರಾಗುತ್ತಿರುವ ಎಲ್ಲಾ ವಾಣಿಜ್ಯ ವಾಹನಗಳು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಒಳಗೊಳ್ಳುತ್ತಿವೆ. ಈಗ ಎಲ್ಲ ಹಳೆಯ ವಾಹನಗಳಿಗೂ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಆಲೋಚಿಸುತ್ತಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದರು.

Union transport minister Nitin Gadkari on Thursday informed that all physical toll booths in the country will be removed and collections will happen via GPS-based system.