ಬ್ರೇಕಿಂಗ್ ನ್ಯೂಸ್
21-03-21 06:27 pm Headline Karnataka News Network ದೇಶ - ವಿದೇಶ
ಮುಂಬೈ, ಮಾ.21: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಅನಿಲ್ ಅಂಬಾನಿಯ ಮನೆ ಹೊರಭಾಗದಲ್ಲಿ ಸ್ಫೋಟಕ ಪತ್ತೆ ಪ್ರಕರಣದ ತನಿಖೆಯ ಸಂದರ್ಭದಲ್ಲೇ ಮುಂಬೈ ಪೊಲೀಸ್ ಮುಖ್ಯಸ್ಥರಾಗಿದ್ದ ಪರಮ್ ಬೀರ್ ಸಿಂಗ್ ರಾಜಕೀಯದಲ್ಲಿ ಬೆಂಕಿ ಹೊತ್ತಿಸುವ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್, ಮುಂಬೈ ಪೊಲೀಸರಿಗೆ ತಿಂಗಳಿಗೆ 100 ಕೋಟಿ ಕಲೆಕ್ಷನ್ ಮಾಡುವಂತೆ ಟಾರ್ಗೆಟ್ ನೀಡಿದ್ದರು ಎಂದು ಹೇಳುವ ಮೂಲಕ ಸರಕಾರವನ್ನು ತೀವ್ರ ಮುಜುಗರಕ್ಕೆ ಈಡುಮಾಡಿದ್ದಾರೆ.
ಅಂಬಾನಿ ಮನೆಯ ಹೊರಭಾಗದಲ್ಲಿ ನಿಂತಿದ್ದ ಸ್ಕಾರ್ಪಿಯೋ ವಾಹನದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣದಲ್ಲಿ ಮುಂಬೈ ಕ್ರೈಮ್ ಬ್ರಾಂಚ್ ಮುಖ್ಯಸ್ಥನಾಗಿದ್ದ ಸಚಿನ್ ವಝೆಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಇದೇ ವೇಳೆ, ಪ್ರಕರಣದಲ್ಲಿ ಲೋಪ ಎಸಗಿದ್ದಾರೆಂಬ ಕಾರಣಕ್ಕೆ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರಕಾರ ವರ್ಗಾವಣೆ ಮಾಡಿತ್ತು. ವರ್ಗಾವಣೆ ಆದೇಶ ಹೊರಬಿದ್ದ ಮರುದಿನವೇ ಪರಮ್ ಬೀರ್ ಸಿಂಗ್, ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಬಿ.ಎಸ್ ಕೋಶಿಯಾರಿಗೆ ಇ-ಮೈಲ್ ಮೂಲಕ ಪರಮ್ ಬೀರ್ ಸಿಂಗ್ ಪತ್ರ ಬರೆದಿದ್ದು, ಗೃಹ ಸಚಿವ ದೇಶಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಫೆಬ್ರವರಿ ತಿಂಗಳ ಮಧ್ಯದಲ್ಲಿ ಗೃಹ ಸಚಿವರು ತಮ್ಮ ಕಚೇರಿಗೆ ಸಚಿನ್ ವಝೆಯನ್ನು ಕರೆದು 100 ಕೋಟಿ ಕಲೆಕ್ಷನ್ ಮಾಡುವಂತೆ ಟಾರ್ಗೆಟ್ ಕೊಟ್ಟಿದ್ದರು. ಮುಂಬೈ ನಗರದಲ್ಲಿರುವ 1750 ಬಾರ್, ರೆಸ್ಟೋರೆಂಟ್, ಇನ್ನಿತರ ಕಮರ್ಷಿಯಲ್ ಕಟ್ಟಡಗಳಿಂದ ಕಲೆಕ್ಷನ್ ಮಾಡಬೇಕು. ಪ್ರತಿ ತಿಂಗಳು ಇವರಿಂದ 2-3 ಲಕ್ಷ ಕಲೆಕ್ಷನ್ ಮಾಡಿದರೆ, 40-50 ಕೋಟಿ ಕಲೆಕ್ಷನ್ ಮಾಡಬಹುದು. ಉಳಿದುದನ್ನು ಇತರೇ ಮೂಲಗಳಿಂದ ಸಂಗ್ರಹಿಸಬೇಕು ಎಂದು ಸೂಚಿಸಿದ್ದರು. ಈ ವಿಚಾರವನ್ನು ಸಚಿನ್ ವಝೆ ಅದೇ ದಿನ ಕಚೇರಿಗೆ ತನಗೆ ಬಂದು ತಿಳಿಸಿದ್ದಾಗಿ ಪರಮ್ ಬೀರ್ ಸಿಂಗ್ ಆರೋಪ ಮಾಡಿದ್ದಾರೆ.
ಎಸಿಪಿ, ಡಿಸಿಪಿಯನ್ನೂ ಕರೆದು ಟಾರ್ಗೆಟ್
ತನ್ನ ಆರೋಪಕ್ಕೆ ಪೂರಕವಾಗಿ ಮಾ.16, 17ರಂದು ಎಸಿಪಿ ಸಂಜಯ್ ಪಾಟೀಲ್ ತನ್ನ ಜೊತೆಗೆ ಮಾಡಿರುವ ವಾಟ್ಸಪ್ ಚಾಟ್ ಮೇಸೇಜ್ ಗಳನ್ನು ಒದಗಿಸಿದ್ದಾರೆ. ಸಚಿನ್ ವಝೆಯನ್ನು ಕರೆದು ಮಾತನಾಡಿದ ಬಳಿಕ ಎಸಿಪಿ ಸಂಜಯ್ ಪಾಟೀಲ್ ಮತ್ತು ಡಿಸಿಪಿ ಭುಜಬಲ್ ಅವರನ್ನೂ ಗೃಹ ಸಚಿವರು ಕರೆದು ಇದೇ ಟಾರ್ಗೆಟ್ ಕೊಟ್ಟಿದ್ದರು. ಹುಕ್ಕಾ ಪಾರ್ಲರ್ ಗಳ ಬಗ್ಗೆ ಮಾತುಕತೆಗೆ ಕರೆದು, ಬಾರ್, ರೆಸ್ಟೋರೆಂಟ್ ಗಳಿಂದ ತಿಂಗಳಿಗೆ 100 ಕೋಟಿ ಕಲೆಕ್ಷನ್ ಮಾಡುವಂತೆ ಸೂಚಿಸಿದ್ದರು. ಈ ಮಾತುಕತೆ ಮಾರ್ಚ್ 4ರಂದು ನಡೆದಿತ್ತು. ಪೊಲೀಸ್ ಅಧಿಕಾರಿಗಳ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಸಂಜಯ್ ಪಾಲಂದೆ ಸಾಕ್ಷಿಯಾಗಿದ್ದರು ಎಂದು ಪರಮ್ ಬೀರ್ ಸಿಂಗ್ ಹೇಳಿದ್ದಾರೆ.
ಇದಲ್ಲದೆ, ಫೆಬ್ರವರಿ ತಿಂಗಳ ಬಳಿಕ ಸರಣಿಯಾಗಿ ಪೊಲೀಸ್ ಅಧಿಕಾರಿಗಳ ಕಚೇರಿಗಳಿಗೆ ಫೋನ್ ಮಾಡಿ, ಕಲೆಕ್ಷನ್ ಟಾರ್ಗೆಟ್ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡುತ್ತಿದ್ದರು. ತಮ್ಮ ಕರ್ತವ್ಯದ ಮಧ್ಯೆಯೇ ಕಲೆಕ್ಷನ್ ಕೆಲಸ ಮಾಡುವಂತೆ ಹೇಳುತ್ತಿದ್ದರು. ಅಲ್ಲದೆ, ಕಲೆಕ್ಷನ್ ಸ್ಕೀಮ್ ಬಗ್ಗೆ ವಿವರಣೆ ನೀಡುತ್ತಿದ್ದರು. ಗೃಹ ಸಚಿವರು ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುತ್ತಿದ್ದ ವಿಚಾರವನ್ನು ಪೊಲೀಸ್ ಅಧಿಕಾರಿಗಳೇ ತನ್ನಲ್ಲಿ ಹೇಳಿಕೊಳ್ಳುತ್ತಿದ್ದರು ಎಂದಿದ್ದಾರೆ ಪರಮ್ ಬೀರ್.
ದೇಲ್ಕರ್ ಆತ್ಮಹತ್ಯೆ ಕೇಸ್ ದಾಖಲಿಸಲು ಒತ್ತಡ
ಇತ್ತೀಚೆಗೆ ಹೊಟೇಲ್ ಒಂದರಲ್ಲಿ ಮೃತಪಟ್ಟಿದ್ದ ಕೇಂದ್ರಾಡಳಿತ ಪ್ರದೇಶ ದಾದರ್ ಮತ್ತು ನಗರ್ ಹವೇಲಿಯ ಸಂಸದ ಮೋಹನ್ ದೇಲ್ಕರ್ ಸಾವಿನ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಿಸುವಂತೆ ತನಗೆ ಗೃಹ ಸಚಿವ ಅನಿಲ್ ದೇಶಮುಖ್ ಒತ್ತಡ ಹೇರಿದ್ದರು. ಘಟನೆ ನಡೆದಿರುವ ವ್ಯಾಪ್ತಿ ನಮಗೆ ಬರಲ್ಲ ಎಂದರೂ, ಸುಸೈಡ್ ಕೇಸ್ ದಾಖಲಿಸುವಂತೆ ಸೂಚಿಸಿದ್ದರು. ಘಟನೆ ಬಗ್ಗೆ ನಗರ್ ಹವೇಲಿ ಠಾಣೆ ಪೊಲೀಸರು ತನಿಖೆ ನಡೆಸಬೇಕಿತ್ತು. ಆದರೆ, ಮುಂಬೈನಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಲ್ಲದೆ, ಆ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸುವಂತೆ ಒತ್ತಡ ಹೇರಿದ್ದರು ಎಂದು ಗೃಹ ಸಚಿವರ ಬಗ್ಗೆ ಮತ್ತೊಂದು ಆರೋಪ ಮಾಡಿದ್ದಾರೆ.
ಸುಳ್ಳು ಆರೋಪ, ಮಾನನಷ್ಟ ಕೇಸ್ ಹಾಕ್ತೀನಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅನಿಲ್ ದೇಶಮುಖ್, ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಪರಮ್ ಬೀರ್ ಸಿಂಗ್ ತನ್ನ ಮೇಲಿನ ಶಿಸ್ತುಕ್ರಮದಿಂದ ಪಾರಾಗಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಾನು ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ ಎಂದಿದ್ದಾರೆ.
ಸ್ಫೋಟಕ ಪತ್ತೆ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿರುವ ಆರೋಪದಲ್ಲಿ ಪರಮ್ ವೀರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ಹೋಮ್ ಗಾರ್ಡ್ಸ್ ಡಿಜಿ ಆಗಿ ಗೃಹ ಸಚಿವ ಅನಿಲ್ ದೇಶಮುಖ್ ವರ್ಗಾವಣೆ ಮಾಡಿದ್ದರು. ಈ ವರ್ಗಾವಣೆ ಆದೇಶ ಹೊರಬಿದ್ದ ಕೂಡಲೇ ಪರಮ್ ವೀರ್ ಸಿಂಗ್, ನೈಜ ತಪ್ಪಿತಸ್ಥರನ್ನು ಪಾರು ಮಾಡುವುದಕ್ಕಾಗಿ ನನ್ನನ್ನು ಬಲಿಪಶು ಮಾಡಿದ್ದಾರೆ ಎಂದಿದ್ದರು. ಇದೇ ದ್ವೇಷದಲ್ಲಿ ಗೃಹ ಸಚಿವರ ವಿರುದ್ಧವೇ ಪತ್ರ ಬರೆದು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. 100 ಕೋಟಿ ಕಲೆಕ್ಷನ್ ವಿಚಾರ ಹೊರಬೀಳುತ್ತಲೇ ಪ್ರತಿಪಕ್ಷ ಬಿಜೆಪಿಯ ನಾಯಕರು ಗೃಹ ಸಚಿವರ ವಿರುದ್ಧ ಮುಗಿಬಿದ್ದಿದ್ದಾರೆ.
Former Mumbai Police chief Param Bir Singh has accused Maharashtra Home Minister Anil Deshmukh of asking suspended police officer Sachin Vaze to collect Rs 100 crore every month for him.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm