ಧಾನ್ಯ ಸಂಗ್ರಹಿಸುವ ಕಂಟೇನರ್ ಗೆ ಬಿದ್ದು ಐವರು ಮಕ್ಕಳು ದುರಂತ ಸಾವು !

22-03-21 01:29 pm       Headline Karnataka News Network   ದೇಶ - ವಿದೇಶ

ಐವರು ಮಕ್ಕಳು ಧಾನ್ಯ ಸಂಗ್ರಹಣೆಗೆ ಬಳಸುತ್ತಿದ್ದ ಕಂಟೇನರ್ ಒಳಗೆ ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ನಡೆದಿದೆ. 

ಬಿಕಾನೇರ್, ಮಾ.22: ಮನೆಯಲ್ಲಿ ಆಟವಾಡುತ್ತಿದ್ದ ಐವರು ಮಕ್ಕಳು ಧಾನ್ಯ ಸಂಗ್ರಹಣೆಗೆ ಬಳಸುತ್ತಿದ್ದ ಕಂಟೇನರ್ ಒಳಗೆ ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ನಡೆದಿದೆ. 

ಪೊಲೀಸರ ಪ್ರಕಾರ, ಕಂಟೇನರ್ ಬಹುತೇಕ ಖಾಲಿಯಾಗಿತ್ತು. ಮಕ್ಕಳು ಆಟವಾಡುತ್ತಿದ್ದಾಗ ಒಬ್ಬರ ನಂತರ ಒಬ್ಬರಂತೆ ಕಬ್ಬಿಣದ ಕಂಟೈನರ್ ಒಳಗೆ ಜಿಗಿದಿದ್ದಾರೆ. ನಾಲ್ಕು ಬಾಲಕಿಯರು ಮತ್ತು ಒಬ್ಬ ಬಾಲಕ ಒಳಗೆ ಜಿಗಿದಿದ್ದು ಈ ವೇಳೆ ಕಂಟೈನರ್ ಮ ಮುಚ್ಚಳ ಆಕಸ್ಮಿಕವಾಗಿ ಮುಚ್ಚಲ್ಪಟ್ಟಿದೆ. ಮಕ್ಕಳು ಹೊರಗೆ ಬರಲಾಗದೆ ಒಳಗೆ ಸಿಲುಕಿಕೊಂಡಿದ್ದು ಉಸಿರು ಕಟ್ಟಿದ್ದಾರೆ. 

ಸೇವಾರಾಂ(4), ರವೀನಾ(7), ರಾಧಾ(5), ಪೂನಂ(8) ಮೃತ ಮಕ್ಕಳು. ಘಟನೆ ನಡೆಯುವಾಗ ಮನೆಯಲ್ಲಿ ಯಾರೂ ಇರಲಿಲ್ಲ. ಭಿಯಾರಾಮ್ ಮತ್ತು ಅವರ ಪತ್ನಿ ಮಧ್ಯಾಹ್ನ ಹೊಲದಿಂದ ಹಿಂತಿರುಗಿದಾಗ ಮನೆಯಲ್ಲಿ ಮಕ್ಕಳು ಕಾಣಿಸದೆ ಹುಡುಕಾಟ ನಡೆಸಿದ್ದಾರೆ. ಸಂಜೆ ವರೆಗೂ ಹುಡುಕಾಟ ನಡೆಸಿದ್ದು ಧಾನ್ಯ ಸಂಗ್ರಹಣೆ ಮಾಡುತ್ತಿದ್ದ ಕಂಟೇನರ್ ತೆರೆದು ನೋಡಿದಾಗ ಮಕ್ಕಳು ಮೂರ್ಛೆ ತಪ್ಪಿ ಬಿದ್ದಿರುವಂತೆ ಕಂಡುಬಂದಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ದಿದ್ದು ವೈದ್ಯರು ಮೃತರಾಗಿದ್ದಾಗಿ ತಿಳಿಸಿದ್ದಾರೆ. ಬಿಕಾನೇರ್ ಜಿಲ್ಲೆಯ ಹಿಮ್ಮರ್ಶಿ ಎನ್ನುವ ಗ್ರಾಮದಲ್ಲಿ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

In a tragic incident, five children suffocated to death after they jumped into a grain storage container while playing at Himmatasar village in Rajasthan’s Bikaner on Sunday, police said.