ಬಾಂಗ್ಲಾದಲ್ಲಿ ಭಾರೀ ಬೆಂಕಿ ; 400 ಮಂದಿ ನಾಪತ್ತೆ ,10 ಸಾವಿರ ಮನೆಗಳು ಭಸ್ಮ !

23-03-21 05:53 pm       Headline Karnataka News Network   ದೇಶ - ವಿದೇಶ

ಬಾಂಗ್ಲಾ ದೇಶದ ಗಡಿಭಾಗದಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸವಿದ್ದ ರೋಹಿಂಗ್ಯಾ ಮುಸ್ಲಿಮರಿದ್ದ ಜಾಗಕ್ಕೆ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದಿದೆ.

ಢಾಕಾ, ಮಾ.23: ಬಾಂಗ್ಲಾ ದೇಶದ ಗಡಿಭಾಗದಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸವಿದ್ದ ರೋಹಿಂಗ್ಯಾ ಮುಸ್ಲಿಮರಿದ್ದ ಜಾಗಕ್ಕೆ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದಿದ್ದು, ನೂರಾರು ಜನ ಬೆಂಕಿಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. 400 ಮಂದಿಯಷ್ಟು ನಾಪತ್ತೆಯಾಗಿದ್ದಾರೆ. 15ಕ್ಕೂ ಹೆಚ್ಚು ಮಂದಿ ಸಾವು ಕಂಡಿದ್ದಾರೆ, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಬಾಂಗ್ಲಾದೇಶದ ಕಾಕ್ಸ್ ಬಾಝಾರಿನಲ್ಲಿರುವ ರೋಹಿಂಗ್ಯಾ ಮುಸ್ಲಿಮರ ಕ್ಯಾಂಪಿಗೆ ಬೆಂಕಿ ಬಿದ್ದಿದೆ. ನೂರಾರು ಎಕ್ರೆ ಭಾಗದಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಹೇಳಲಾಗುತ್ತಿದ್ದು, 10 ಸಾವಿರ ಗುಡಿಸಲು ಭಸ್ಮವಾಗಿದೆ. ಸುಮಾರು 45 ಸಾವಿರ ಜನರು ಬೀದಿಗೆ ಬಿದ್ದಿದ್ದಾರೆ.

ಈ ರೀತಿಯ ಬೆಂಕಿಯನ್ನು ಇಲ್ಲಿ ನಾವೆಂದೂ ನೋಡಿಲ್ಲ. ಅತ್ಯಂತ ಘೋರವಾಗಿದ್ದು ಭಾರೀ ಪ್ರಮಾಣದಲ್ಲಿ ಬೆಂಕಿ ಹರಡುತ್ತಿದೆ ಎಂದು ವಿಶ್ವಸಂಸ್ಥೆಯ ಬಾಂಗ್ಲಾದೇಶದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. 

A huge fire swept through a Rohingya refugee camp in southern Bangladesh on Monday, destroying thousands of homes and killing several people, officials and witnesses said, in the worst blaze to hit the settlement in recent years.