ಬ್ರೇಕಿಂಗ್ ನ್ಯೂಸ್
24-03-21 04:20 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಮಾ.24: ಕೇರಳದಲ್ಲಿ ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಚಾಣಕ್ಯ ಅಮಿತ್ ಷಾ ರಂಗ ಪ್ರವೇಶ ಮಾಡಿದ್ದಾರೆ. ಮಂಗಳವಾರ ಅಧಿಕೃತವಾಗಿ ರಾಜ್ಯ ಬಿಜೆಪಿ ನಾಯಕರ ಜೊತೆ ಸೇರಿಕೊಂಡಿರುವ ಅಮಿತ್ ಷಾ, ಚುನಾವಣೆ ತಯಾರಿ ಬಗ್ಗೆ ಕೇರಳ ರಾಜ್ಯ ಉಸ್ತುವಾರಿ ಕರ್ನಾಟಕದ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.
ಕರ್ನಾಟಕದ ಗಡಿಭಾಗ ಕಾಸರಗೋಡಿನಿಂದ ತಿರುವನಂತಪುರದ ವರೆಗೆ ಬಿಜೆಪಿಗೆ ಇರುವ ಸವಾಲುಗಳು, ಸಾಧ್ಯತೆಗಳ ಬಗ್ಗೆ ಅಶ್ವತ್ಥ ನಾರಾಯಣ, ಅಮಿತ್ ಶಾಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿ ಮಧ್ಯರಾತ್ರಿ ವರೆಗೂ ರಾಜ್ಯ ಬಿಜೆಪಿ ನಾಯಕರು ಮತ್ತು ಉಸ್ತುವಾರಿಗಳ ಜೊತೆ ಅಮಿತ್ ಷಾ ಸಭೆ ನಡೆಸಿದ್ದಾರೆ. ಅಲ್ಲದೆ, ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.
ತ್ರಿಪುರಾ ಮಾದರಿ ಕೆಲಸ ಮಾಡಲು ಸೂಚನೆ
ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ವಿಚಾರವನ್ನು ನೆನಪಿಸಿದ ಅಮಿತ್ ಷಾ, ಅದೇ ರೀತಿಯ ಕಾರ್ಯತಂತ್ರಗಳನ್ನು ಹೆಣೆಯುವಂತೆ ನಾಯಕರಿಗೆ ಸೂಚನೆ ನೀಡಿದ್ದಾರೆ. ತ್ರಿಪುರಾದಲ್ಲಿ ಬಿಜೆಪಿಗೆ ವೋಟ್ ಶೇರಿಂಗ್ ಕೇವಲ 0.75 ಇತ್ತು. ಅಂಥ ಜಾಗದಲ್ಲಿ ಬಿಜೆಪಿಗೆ ಅಧಿಕಾರ ಹಿಡಿಯುವುದು ಸಾಧ್ಯವಾಗಿದ್ದರೆ, ಕೇರಳದಲ್ಲಿ ಯಾಕೆ ಸಾಧ್ಯವಿಲ್ಲ. ಕೇರಳದಲ್ಲಿ ಬಿಜೆಪಿಗೆ 16 ಶೇ. ಮತದಾರರ ಒಲವು ಇದೆ. ಒಂದು ಶೇಕಡಾವೂ ಇಲ್ಲದ ತ್ರಿಪುರಾದಲ್ಲಿ ಗೆಲುವು ಸಾಧ್ಯ ಆಗೋದಾದರೆ, ಕೇರಳದಲ್ಲಿ ಶಾಸಕ ಸ್ಥಾನಗಳನ್ನು ಕಷ್ಟದ ಮಾತೇ ಎನ್ನುವ ಪ್ರಶ್ನೆಯನ್ನು ಅಮಿತ್ ಷಾ ಮುಂದಿಟ್ಟಿದ್ದಾರೆ.
ಮನಸ್ಸಿದ್ದರೆ ಮಾರ್ಗವಿದೆ. ಚುನಾವಣೆ ಹೊತ್ತಲ್ಲಿ ಸಮಯ ಪೋಲು ಮಾಡಬೇಡಿ, ಪ್ರತಿ ಗಲ್ಲಿಗೂ ಹೋಗಿ ಜನರಿಗೆ ಮನ ಮುಟ್ಟುವಂತೆ ಎಡರಂಗದ ಹಗರಣಗಳ ಬಗ್ಗೆ ಹೇಳಿ. ಎಲ್ ಡಿಎಫ್ ಸರಕಾರದ ಅನೀತಿ ರಾಜಕೀಯದ ಬಗ್ಗೆ ಹೇಳಿ. ಅದಕ್ಕೂ ಹಿಂದೆ ಇದ್ದ ಯುಡಿಎಫ್ ಸರಕಾರದ ಹಗರಣಗಳು, ಅವರ ದುರಾಡಳಿತದ ಬಗ್ಗೆ ಮನವರಿಕೆ ಮಾಡಿ ಎಂದು ಅಮಿತ್ ಷಾ, ರಾಜ್ಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೇರಳದಲ್ಲಿ ಎಲ್ ಡಿಎಫ್ ಸರಕಾರವನ್ನು ಕಿತ್ತೊಗೆಯಲೇಬೇಕು, ಬಿಜೆಪಿಗೆ ಅಧಿಕಾರವನ್ನು ಪಡೆಯಲೇಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಮುಂದಡಿ ಇಟ್ಟಿದ್ದು, ಕಳೆದ ಎರಡು ತಿಂಗಳಿಂದ ಅವಿರತ ಶ್ರಮ ಹಾಕಿದೆ. ಅದಕ್ಕಾಗಿ ಕರ್ನಾಟಕದ ಪ್ರಭಾವಿ ಸಚಿವ, ಡಿಸಿಎಂ ಅಶ್ವತ್ಥ ನಾರಾಯಣ, ಪ್ರಹ್ಲಾದ ಜೋಷಿ ಅವರನ್ನು ಕೇರಳ ಉಸ್ತುವಾರಿಯನ್ನಾಗಿಸಿ ಕರ್ನಾಟಕದ ವಿವಿಧ ಹಂತದ ನಾಯಕರು, ಶಾಸಕರನ್ನು ಇಡೀ ರಾಜ್ಯದಲ್ಲಿ ಪ್ರಭಾರಿಯನ್ನಾಗಿಸಿ ಕೆಲಸಕ್ಕೆ ಕೈಹಾಕಿದೆ. ಏನೇ ತಿಪ್ಪರಲಾಗ ಹಾಕಿಯಾದ್ರೂ ಕೇರಳದಲ್ಲಿ ಈ ಬಾರಿ ಒಂದಷ್ಟು ಸ್ಥಾನಗಳನ್ನು ಪಡೆಯಲೇಬೇಕು ಎನ್ನುವ ಹಠ ತೊಟ್ಟಿರುವ ಬಿಜೆಪಿಗೆ ಅಮಿತ್ ಷಾ ಟೀಮ್ ಸೇರಿಕೊಂಡಿರುವುದು ದೊಡ್ಡ ಟಾನಿಕ್ ಸಿಕ್ಕಂತಾಗಿದೆ.
ಮುಂದಿನ ಹತ್ತು ದಿನಗಳಲ್ಲಿ ಬಿಜೆಪಿಯ ಕೇಂದ್ರ ನಾಯಕರು ಪೂರ್ತಿಯಾಗಿ ಕೇರಳದಲ್ಲಿ ಇರಲಿದ್ದು, ಸರಣಿಯಾಗಿ ರ್ಯಾಲಿಗಳನ್ನು ನಡೆಸಲಿದ್ದಾರೆ. ಮಾ.30ರಿಂದ ನಾಲ್ಕು ದಿನ ಪ್ರಧಾನಿ ಮೋದಿ ಆಗಮಿಸಲಿದ್ದು, ಜನರನ್ನು ಓಲೈಸುವ ಕಾರ್ಯದಲ್ಲಿ ತೊಡಗಲಿದ್ದಾರೆ. ಕಳೆದ ಬಾರಿ ಒಂದು ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ಎಷ್ಟು ಸ್ಥಾನಗಳನ್ನು ಬಾಚಿಕೊಳ್ಳಲಿದೆ ಎನ್ನುವ ಕುತೂಹಲ, ಇತರೇ ಪಕ್ಷಗಳ ಜೊತೆ ಮತದಾರರಲ್ಲೂ ಇದೆ.
Speaking at a public meeting in Chathannoor, Kerala. Watch Live! https://t.co/EI9i2zndbz
— Amit Shah (@AmitShah) March 24, 2021
Union Home Minister Amit Shah will be a part of four events in Kerala on Wednesday as the single-phase polls in the state draws closer.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm