ಬ್ರೇಕಿಂಗ್ ನ್ಯೂಸ್
23-06-26 11:49 am HK News Staffer ಕರಾವಳಿ
ಮಂಗಳೂರು, ಜೂನ್ 23: ಮುಸ್ಲಿಮರಿಗೆ ಸಚಿವ ಸ್ಥಾನ ನೀಡುವಂತೆ ಮಂಗಳೂರಿನಲ್ಲಿ ಸಮಾನ ಮನಸ್ಕರ ಹೆಸರಲ್ಲಿ ಮುಸ್ಲಿಂ ನಾಯಕರು ಸುದ್ದಿಗೋಷ್ಟಿ ನಡೆಸಿರುವುದಕ್ಕೆ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡೋದು ಬೇಡ. ಬೇರೆ ಬೇರೆ ಹೆಸರು ಇಟ್ಟುಕೊಂಡು, ಸಮಾನ ಮನಸ್ಕರು ಅಂತ ಹೇಳಿಕೊಂಡು ಕಾಂಗ್ರೆಸಿಗೆ ಬುದ್ಧಿವಾದ ಹೇಳೋದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಪಕ್ಷಕ್ಕೆ ಓಟ್ ಹಾಕಿದವರು, ಪಕ್ಷಕ್ಕೆ ದುಡಿದವರು ಮಾತ್ರ ಪಕ್ಷದ ಬಗ್ಗೆ ಮಾತನಾಡಲಿ, ಸಮಾನ ಮನಸ್ಕರು ಅಂತ ಹೇಳಿಕೊಂಡು ಬರೋದು ಬೇಡ. ಕಾಂಗ್ರೆಸ್ ಗೆ ಇವರು ಬುದ್ದಿವಾದ ಹೇಳೋ ಅವಶ್ಯಕತೆ ಇಲ್ಲ, ಇವರ ಬುದ್ದಿವಾದ ಪಕ್ಷ ತೆಗೋಳಲ್ಲ. ಪಕ್ಷವನ್ನು ವಿರೋಧ ಮಾಡಿದವರು ಇವತ್ತು ಪಕ್ಷಕ್ಕೆ ನಿರ್ದೇಶನ ಕೊಡುವ ಅಗತ್ಯ ಇಲ್ಲ.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಮಾತ್ರ ಅಲ್ಲ, ಎಲ್ಲವೂ ಕೊಟ್ಟಿದೆ. ಜಮೀರ್ ಅಹ್ಮದ್, ನಾವು ಹಾಗೂ ಎಲ್ಲಾ ಮುಸ್ಲಿಮರು ಒಟ್ಟಿಗೆ ಇದ್ದಾರೆ. ಪಕ್ಷದ ಅಧ್ಯಕ್ಷರು, ಸಿಎಂ ಎಲ್ಲಾ ಸೇರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡ್ತಾರೆ. ರಾಜಕೀಯವಾಗಿ ಇನ್ನಷ್ಟು ಇದನ್ನು ಬಿಗಡಾಯಿಸುವ ಅಗತ್ಯ ಇಲ್ಲ. ಕಾಂಗ್ರೆಸ್ ಗೆ ಮತ ಹಾಕದವರನ್ನ ನಾವು ಗಣನೆಗೆ ತೆಗೆಯಲ್ಲ ಎಂದು ಸಚಿವ ಯು.ಟಿ ಖಾದರ್ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡದಿ ಟೌನ್ ಶಿಪ್ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ಮುಖ್ಯಮಂತ್ರಿ ಮತ್ತು ಕೇಂದ್ರದ ಸಚಿವರು ಮಾರ್ಗದ ಮಧ್ಯೆ ಚರ್ಚೆ ಮಾಡಲು ಆಗ್ತದಾ..? ವಿಧಾನಸೌಧ ಇರೋದು ರಾಜ್ಯದ ಜನರ ಬಗ್ಗೆ ಚರ್ಚೆ ಮಾಡಲು. ಟೌನ್ ಶಿಪ್ ಬಗ್ಗೆ ಮುಖ್ಯಮಂತ್ರಿ ಮತ್ತು ಕೇಂದ್ರದ ಸಚಿವರು ಮಾರ್ಗದ ಮಧ್ಯೆ ಚರ್ಚೆ ಮಾಡಲು ಆಗಲ್ಲ. ವಿಧಾನಸೌಧ ಅದಕ್ಕೆ ಸೂಕ್ತ ಜಾಗ, ಅದು ಜನರಿಗೆ ಎಲ್ಲರಿಗೂ ಅರ್ಥವಾಗುತ್ತದೆ. ಈ ಬಿಡದಿ ಟೌನ್ ಶಿಪ್ ನೋಟಿಫಿಕೇಶನ್ ಮಾಡಿದ್ದು ಯಾರು ಅಂತ ಜನರಿಗೆ ಮೊದಲು ತಿಳಿಸಲಿ.
ನೋಟಿಫಿಕೇಶನ್ ಮಾಡಿದ್ದು ಯಾರು ಅನ್ನೋ ಸತ್ಯ ವಿಚಾರ ಜೆಡಿಎಸ್ ಮುಖಂಡರು ಹೇಳಲಿ. ಅದು ಮಾಡಿದ್ದೇ ಇವರು, ಆ ಸತ್ಯ ಗೊತ್ತಾಗಲಿ. ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಇದ್ದದ್ದು, ಈ ದೇಶದ ರೈತರು ವಿಶ್ವಕ್ಕೆ ಮಾದರಿ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಎಂದಿಗೂ ರೈತರ ಪರ ಆಲೋಚನೆ ಮಾಡುತ್ತದೆ. ರೈತರಿಗೆ ತೊಂದರೆ ಆಗೋ ಯಾವುದೇ ಯೋಜನೆ ಮಾಡಲ್ಲ ಅಂತ ಸಿಎಂ ಹೇಳಿದ್ದಾರೆ. ರೈತರಿಗೆ, ಅವರ ಕುಟುಂಬಕ್ಕೆ ಈ ಯೋಜನೆ ಸಹಾಯವಾಗಲಿದೆ. ಕೆಲವರು ರಾಜಕೀಯ ಮಾತನಾಡ್ತಾರೆ, ರಾಜಕೀಯ ಬಿಟ್ಟು ಹೊರಗೆ ಬನ್ನಿ ಎಂದು ಸಚಿವ ಯು.ಟಿ ಖಾದರ್, ಎಚ್ಡಿಕೆ ಹೆಸರೆತ್ತದೆ ಟಾಂಗ್ ನೀಡಿದ್ದಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:00 pm
HK News Staffer
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
25-08-26 07:27 pm
HK News Staffer
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm