ಮೇಲಧಿಕಾರಿಯ ಕಿರುಕುಳ ; ಗುಂಡು ಹಾರಿಸಿಕೊಂಡು ವಲಯ ಅರಣ್ಯಾಧಿಕಾರಿ ಆತ್ಮಹತ್ಯೆ ! ಅಧಿಕಾರಿ ಬಂಧನ

27-03-21 12:34 pm       Headline Karnataka News Network   ದೇಶ - ವಿದೇಶ

ಆಂಧ್ರಪ್ರದೇಶದ ಅಮರಾವತಿ ಜಿಲ್ಲೆಯ ವಲಯ ಅರಣ್ಯಾಧಿಕಾರಿಯಾಗಿದ್ದ ದೀಪಾಲಿ ಚವಾಣ್ (34) ಎನ್ನುವವರು ಮೇಲಧಿಕಾರಿಯ ಕಿರುಕುಳದಿಂದ ತನ್ನ ಹರಿಸಾಲ್ ಗ್ರಾಮದ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿ ಅರಣ್ಯ ಸಂರಕ್ಷಣಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಅಮರಾವತಿ, ಮಾ.27 : ಆಂಧ್ರಪ್ರದೇಶದ ಅಮರಾವತಿ ಜಿಲ್ಲೆಯ ವಲಯ ಅರಣ್ಯಾಧಿಕಾರಿಯಾಗಿದ್ದ ದೀಪಾಲಿ ಚವಾಣ್ (34) ಎನ್ನುವವರು ಮೇಲಧಿಕಾರಿಯ ಕಿರುಕುಳದಿಂದ ತನ್ನ ಹರಿಸಾಲ್ ಗ್ರಾಮದ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿ ಅರಣ್ಯ ಸಂರಕ್ಷಣಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮೇಳಘಾಟ್ ಟೈಗರ್ ರಿಸರ್ವ್ (ಎಂಟಿಆರ್)ನ ಗೂಗಾಮಲ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ ಎಂಬಾತನನ್ನು ಪೊಲೀಸರು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಇಂದು ಬಂಧಿಸಿದ್ದಾರೆ.

ಚವಾಣ್ ಕುಟುಂಬದ ದೂರಿನ ಮೇರೆಗೆ ಶಿವಕುಮಾರರನ್ನು ಬಂಧಿಸಲಾಗಿದೆ ಎಂದು ಅಮರಾವತಿ ಎಸ್‌ಪಿ ಡಾ.ಹರಿ ಬಾಲಾಜಿ ಎನ್ ತಿಳಿಸಿದ್ದಾರೆ. 

Maharashtra: 'Lady Singham' Shoots Herself, Accuses Colleague In Suicide  Letter

ಘಟನೆ ಬಳಿಕ ಅಮರಾವತಿ ಜಿಲ್ಲಾಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದ ಮೃತ ಚವಾಣ್ ಅವರ ಸಂಬಂಧಿಕರು, ಎಂಟಿಆರ್ ಯೋಜನಾ ನಿರ್ದೇಶಕ ಎನ್. ಶ್ರೀನಿವಾಸ ರೆಡ್ಡಿಯನ್ನು ಬಂಧಿಸಲು ಆಗ್ರಹಿಸಿದ್ದಾರೆ. ಆರೋಪಿ ಶಿವಕುಮಾರ ಚವಾಣ್‌ಗೆ ಹಿಂಸೆ, ಕಿರುಕುಳ ನೀಡಿದ್ದ, ಅವಮಾನಿಸಿದ್ದ ಮತ್ತು ನಿಂದಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಶಿವಕುಮಾರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ್ಮಹತ್ಯಾ ಚೀಟಿಯಲ್ಲಿ ಚವಾಣ್ ಬರೆದುಕೊಂಡಿದ್ದರು.

A 28-year-old female Range Forest Officer posted in Maharashtra’s Amravati has committed suicide. The victim in a purported suicide note alleged sexual harassment and torture by an IFS officer, officials said on Friday.