ಹೋಟೆಲ್​ಗೆ ನುಗ್ಗಿದ ಟ್ರಕ್​ ; ಮಾಲೀಕ ಸೇರಿ 8 ಜನರ ಸಾವು, 18 ಮಂದಿ ಗಾಯ

31-03-21 05:51 pm       Headline Karnataka News Network   ದೇಶ - ವಿದೇಶ

ನಿಯಂತ್ರಣ ತಪ್ಪಿದ ಟ್ರಕ್​ವೊಂದು ಹೋಟೆಲ್​ವೊಂದಕ್ಕೆ ನುಗ್ಗಿ ಎಂಟು ಜನರ ಬಲಿ ಪಡೆದಿರುವ ಘಟನೆ ನಡೆದಿದೆ.

ನಳಂದಾ,ಮಾ.31: ನಿಯಂತ್ರಣ ತಪ್ಪಿದ ಟ್ರಕ್​ವೊಂದು ಹೋಟೆಲ್​ವೊಂದಕ್ಕೆ ನುಗ್ಗಿ ಎಂಟು ಜನರ ಬಲಿ ಪಡೆದಿರುವ ಘಟನೆ ನಗರದ ತೆಲ್ಹಾಡಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರವಿವಾರ ಸಂಜೆ ಜೆಹನಾಬಾದ್​ ಜಿಲ್ಲೆಯಿಂದ ಬರುತ್ತಿದ್ದ ಟ್ರಕ್​ ತೆಲ್ಹಾಡಾ ತಾಡ್​ ಬಳಿಯ ಹೋಟೆಲ್​ವೊಂದಕ್ಕೆ ನುಗ್ಗಿದೆ. ನುಗ್ಗಿದ ರಭಸಕ್ಕೆ ಸ್ಥಳದಲ್ಲೇ ಹೋಟೆಲ್​ ಮಾಲೀಕ ಸೇರಿ ಆರು ಜನ ಮೃತಪಟ್ಟಿದ್ದು, ಸುಮಾರು 18 ಜನಕ್ಕೆ ಗಾಯವಾಗಿತ್ತು. ಕೂಡಲೇ ರಕ್ಷಣಾ ಕಾರ್ಯ ಕೈಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಘಟನೆ ನಡೆದ ಬಳಿಕ ಟ್ರಕ್​ ಚಾಲಕ ಪರಾರಿಯಾಗಿದ್ದಾನೆ.

ಪೊಲೀಸರು ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸುತ್ತಿರುವಾಗ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಟ್ರಕ್​ಗೆ ಬೆಂಕಿ ಹಚ್ಚಿದ್ದಾರೆ. ಇದಲ್ಲದೆ ಪೊಲೀಸರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿ, ಪೊಲೀಸ್​ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಬಿಹಾರ್​ ಸಿಎಂ ನಿತೀಶ್​ ಕುಮಾರ್​ ಆಘಾತಕ್ಕೆ ಒಳಗಾಗಿದ್ದು, ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ವರದಿ ನೀಡುವಂತೆ ಪೊಲೀಸ್​ ಅಧಿಕಾರಿಗೆ ಸಿಎಂ ಸೂಚಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಈ ಘಟನೆ ಕುರಿತು ತೆಲ್ಹಾಡಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

In a tragic incident, eight people were killed after a truck lost control and entered a hotel injuring 18 people in Nalanda.