ಬ್ರೇಕಿಂಗ್ ನ್ಯೂಸ್
21-04-21 02:24 pm Headline Karnataka News Network ದೇಶ - ವಿದೇಶ
ನವದೆಹಲಿ, ಎ.21: ಬಾನಾಡಿಯಾಗಿ ಹಾರಿಹೋಗುವ ಪಾರಿವಾಳದ ವಿರುದ್ಧ ಎಫ್ಐಆರ್ ಆಗಿರುವುದನ್ನು ಕೇಳಿದ್ದೀರಾ.. ಸಾಮಾನ್ಯವಾಗಿ ಮನುಷ್ಯರು ಅಪರಾಧ ಕೃತ್ಯ ಎಸಗಿದರೆ ಅವರನ್ನು ಶಿಕ್ಷಿಸಲು ಕೇಸ್, ಎಫ್ಐಆರ್ ಮಾಡಲಾಗುತ್ತದೆ. ಆದರೆ, ಇಲ್ಲೊಂದು ಸಾಮಾನ್ಯ ಪಾರಿವಾಳದ ವಿರುದ್ಧವೇ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.
ಹೌದು.. ಪಾಕಿಸ್ಥಾನದ ಗಡಿಭಾಗ ಪಂಜಾಬ್ ನಲ್ಲಿ ಪಾರಿವಾಳದ ವಿರುದ್ಧವೇ ಸ್ಥಳೀಯ ಪೊಲೀಸರು ಎಫ್ಐಆರ್ ರಿಜಿಸ್ಟರ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಗಡಿರೇಖೆಯಿಂದ 500 ಮೀಟರ್ ಒಳಭಾಗದಲ್ಲಿ ಹಾರಿಬಂದ ಪಾರಿವಾಳವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಅದರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಎ.17ರಂದು ಸಂಜೆ ಗಡಿಭಾಗದಲ್ಲಿ ಕರ್ತವ್ಯದಲ್ಲಿದ್ದ ನೀರಜ್ ಕುಮಾರ್ ಎಂಬ ಯೋಧನ ಹೆಗಲಲ್ಲಿ ಕುಳಿತ ಪಾರಿವಾಳವನ್ನು ಆತ ಕೂಡಲೇ ಹಿಡಿದುಕೊಂಡಿದ್ದರು. ಕಾಲಿನಲ್ಲಿ ಸಿಕ್ಕಿಸಿಕೊಂಡಿದ್ದ ಕಾಗದ ಚೂರಿನಲ್ಲಿ ಏನೋ ಗೂಢ ಸಂಖ್ಯೆ ಇರುವುದನ್ನು ಗಮನಿಸಿದ ಯೋಧ ಕೂಡಲೇ, ತಮ್ಮ ವಿಭಾಗದ ಕಮಾಂಡರಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಕಮಾಂಡರ್ ಓಂಪಾಲ್ ಸಿಂಗ್ ಸೂಚನೆಯಂತೆ, ಪಾರಿವಾಳವನ್ನು ವಶಕ್ಕೆ ಪಡೆದಿದ್ದು ಅದರಲ್ಲಿ ಕಾಲಿನಲ್ಲಿ ಸಿಕ್ಕಿಸಿಕೊಂಡಿದ್ದ ಕಾಗದದ ಚೂರನ್ನು ಗಮನಿಸಿದ್ದಾರೆ.
ಪಾರಿವಾಳದ ಕಾಲಿಗೆ ಗಮ್ ಟೇಪಲ್ಲಿ ಸುತ್ತಿಟ್ಟ ರೀತಿಯಲ್ಲಿ ಕಾಗದದ ಚೂರನ್ನು ಅಂಟಿಸಲಾಗಿತ್ತು. ಅದರಲ್ಲಿ ಏನೋ ಕೋಡ್ ನಂಬರ್ ಬರೆಯಲಾಗಿತ್ತು. ಹೀಗಾಗಿ ಇದೊಂದು ಗೂಢಚಾರಿಕೆ ಕೆಲಸಕ್ಕಾಗಿ ಹಾರಿಬಿಟ್ಟ ಪಾರಿವಾಳ ಎನ್ನುವುದನ್ನು ಅರಿತ ಕಮಾಂಡರ್ ಓಂಪಾಲ್ ಸಿಂಗ್, ಅದರ ವಿರುದ್ಧ ಸ್ಥಳೀಯ ಅಮೃತಸರ ಸಮೀಪದ ಕಹಾಗರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ಬಿಳಿ ಬಣ್ಣದ ದೇಹ ಮತ್ತು ಕಪ್ಪು ಬಣ್ಣದ ತಲೆ ಹೊಂದಿರುವ ಪಾರಿವಾಳ ಮತ್ತು ಬಿಳಿ ಬಣ್ಣದ ಪೇಪರ್ ವಶಕ್ಕೆ ಪಡೆದಿರುವುದಾಗಿ ಉಲ್ಲೇಖ ಮಾಡಲಾಗಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿಯೂ ಇದೇ ರೀತಿಯ ಗೂಢಚಾರಿಕೆ ವೃತ್ತಿಯ ಪಾರಿವಾಳ ಒಂದನ್ನು ಜಮ್ಮು ಗಡಿಭಾಗದಲ್ಲಿ ಯೋಧರು ಪತ್ತೆ ಮಾಡಿದ್ದರು. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಗಡಿಭಾಗದಲ್ಲಿ ಗೂಢಚಾರಿಕೆಯ ತರಬೇತಾಗಿದ್ದ ಪಾರಿವಾಳವನ್ನು ವಶಕ್ಕೆ ಪಡೆಯಲಾಗಿತ್ತು. ಸೇನಾ ಮೂಲಗಳ ಪ್ರಕಾರ, ಪಾರಿವಾಳದ ಮೂಲಕ ಕೋಡೆಡ್ ಸಂದೇಶವನ್ನು ಕಳಿಸುತ್ತಿದ್ದು ಅದೆಲ್ಲೋ ದಾರಿತಪ್ಪಿ ಯೋಧರ ಕೈಗೆ ಸಿಕ್ಕಿದೆಯಂತೆ.
The auspicious pigeon was caught near the International Border at Punjab when the bird came flying near a constable who was on duty at BOP Roranwala. An FIR has been lodged against the pigeon which was carrying a piece of paper tied to its legs.
21-10-25 03:40 pm
HK News Desk
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 03:07 pm
Mangalore Correspondent
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
21-10-25 05:12 pm
Mangalore Correspondent
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm