ಕೋವಿಡ್ ಎರಡನೇ ಅಲೆಗೆ ದೇಶದಲ್ಲಿ 244 ವೈದ್ಯರು ಬಲಿ ! ಒಂದೇ ದಿನ 50 ವೈದ್ಯರ ಸಾವು !

17-05-21 11:41 pm       Headline Karnataka News Network   ದೇಶ - ವಿದೇಶ

ಕೋವಿಡ್ ಎರಡನೇ ಅಲೆಗೆ ದೇಶದಲ್ಲಿ ಈ ಬಾರಿ 244 ಮಂದಿ ವೈದ್ಯರು ಪ್ರಾಣ ಕಳಕೊಂಡಿದ್ದಾರೆ.

ನವದೆಹಲಿ, ಮೇ 17: ಕೋವಿಡ್ ಎರಡನೇ ಅಲೆಗೆ ದೇಶದಲ್ಲಿ ಈ ಬಾರಿ 244 ಮಂದಿ ವೈದ್ಯರು ಪ್ರಾಣ ಕಳಕೊಂಡಿದ್ದಾರೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಅಂಕಿ ಅಂಶಗಳು ವೈದ್ಯರ ಸಾವನ್ನು ದೃಢಪಡಿಸಿವೆ. ಈ ಪೈಕಿ 50 ಮಂದಿ ಭಾನುವಾರ ಒಂದೇ ದಿನ ಸಾವು ಕಂಡಿದ್ದಾರೆಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 

ಬಿಹಾರದಲ್ಲಿ ಅತಿ ಹೆಚ್ಚು ಅಂದರೆ 69 ಮಂದಿ ವೈದ್ಯರು ಮೃತಪಟ್ಟಿದ್ದರೆ, ಉತ್ತರ ಪ್ರದೇಶದಲ್ಲಿ 34 ಮತ್ತು ದೆಹಲಿಯಲ್ಲಿ 27 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪಿದವರಲ್ಲಿ ಕೊರೊನಾ ಡೋಸ್ ಪಡೆದಿರುವುದು ಕೇವಲ ಮೂರು ಶೇಕಡಾ ಮಾತ್ರ ಎನ್ನುವ ಮಾಹಿತಿಯನ್ನು ಐಎಂಎ ನೀಡಿದೆ. 

ದೆಹಲಿಯ 25 ವರ್ಷದ ಡಾ.ಅನಾಸ್ ಮುಜಾಹಿದ್ ಕೊರೊನಾದಿಂದ ಮೃತಪಟ್ಟ ಅತಿ ಕಿರಿಯ ವಯಸ್ಸಿನ ವೈದ್ಯರಾಗಿದ್ದರೆ, ವಿಶಾಖಪಟ್ಟಣದ 90 ವರ್ಷದ ಇಎನ್ ಟಿ ತಜ್ಞ ಡಾ.ಸತ್ಯಮೂರ್ತಿ ಕೋವಿಡ್ ನಿಂದ ಮೃತಪಟ್ಟ ಅತಿ ಹಿರಿಯ ವೈದ್ಯರು. ಮುಜಾಹಿದ್ ಕೋವಿಡ್ ಪಾಸಿಟಿವ್ ಆಗಿ ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು. 

ಕಳೆದ ಬಾರಿ ಮೊದಲ ಅಲೆಯಲ್ಲಿ ದೇಶದಲ್ಲಿ 730 ವೈದ್ಯರು ಕೊರೊನಾಗೆ ಬಲಿಯಾಗಿದ್ದರು. ಈ ಬಾರಿ ಕಡಿಮೆ ಅವಧಿಯಲ್ಲಿ 244 ಮಂದಿ ವೈದ್ಯರು ಪ್ರಾಣ ಕಳಕೊಂಡಿದ್ದು ಆಘಾತ ಮೂಡಿಸಿದೆ. ಇದಕ್ಕಾಗಿ ಆದಷ್ಟು ಕೊರೊನಾ ವ್ಯಾಕ್ಸಿನ್ ಪಡೆಯುವಂತೆ ಕೇಂದ್ರ ಸರಕಾರ ಉತ್ತೇಜನ ನೀಡಿದೆ. ಹೆಚ್ಚಿನ ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಕಾರ್ಯಕರ್ತರು ಮೊದಲ ಪ್ರಾಶಸ್ತ್ಯದಲ್ಲಿ ಲಸಿಕೆ ಪಡೆದಿದ್ದ ಕಾರಣ ಈ ಬಾರಿ ದೊಡ್ಡ ಪರಿಣಾಮ ಬೀರಿಲ್ಲ ಎನ್ನುವ ಮಾತನ್ನು ಐಎಂಎ ಹೇಳಿಕೊಂಡಿದೆ. 

Anas Mujahid, 26, a junior Resident Doctor at Delhi's Guru Teg Bahadur Hospital a dedicated Covid specialty died within hours of testing positive due to Covid. He is the youngest of 244 doctors who have lost their lives to Covid this year in India's second wave. Last year, 736 doctors had lost their lives during the first wave. A total of nearly 1,000 doctors across India have lost their lives due to Covid so far.