ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್ದಾರೆ, ಇದನ್ನು ಧರ್ಮ ಅನ್ನಲ್ಲ, ಪೈಶಾಚಿಕ ಧರ್ಮ ಅನ್ನಬೇಕು, ಮದ್ರಸಾದಲ್ಲಿ ಒಳ್ಳೆದು ಹೇಳಿಕೊಟ್ಟಿದ್ದರೆ ಭಯೋತ್ಪಾದಕರು ಹುಟ್ಟುತ್ತಿರಲಿಲ್ಲ..! 

04-12-25 05:36 pm       HK News Desk   ಕರ್ನಾಟಕ

ಇಸ್ಲಾಂ ಹೆಸರಲ್ಲಿ ಅನ್ಯ ಧಾರ್ಮಿಕ ಕ್ಷೇತ್ರ ಕಬಳಿಸೋದು ಅನಾಗರಿಕ ಮತ್ತು ಅಧರ್ಮ ಕೆಲಸ. ಇನ್ನೊಬ್ಬರನ್ನು ನಾಶ ಮಾಡೋದು ಧರ್ಮ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. 

ಚಿಕ್ಕಮಗಳೂರು, ಡಿ.4 : ಇಸ್ಲಾಂ ಹೆಸರಲ್ಲಿ ಅನ್ಯ ಧಾರ್ಮಿಕ ಕ್ಷೇತ್ರ ಕಬಳಿಸೋದು ಅನಾಗರಿಕ ಮತ್ತು ಅಧರ್ಮ ಕೆಲಸ. ಇನ್ನೊಬ್ಬರನ್ನು ನಾಶ ಮಾಡೋದು ಧರ್ಮ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. 

ದತ್ತ ಜಯಂತಿ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು, ಸನಾತನ ಧರ್ಮದಲ್ಲಿ ಸ್ತ್ರೀಯರನ್ನ ಗೌರವಿಸುವ ಸಂಸ್ಕೃತಿ ಇದೆ.‌ ಪರಸ್ತ್ರೀ ಮೇಲೆ ಅತ್ಯಾಚಾರ ಮಾಡು ಅನ್ನೋದು ಧರ್ಮ ಆಗಲು ಸಾಧ್ಯವಿಲ್ಲ.‌ ಇಸ್ಲಾಂ ಹೆಸರಲ್ಲಿ ಬಲತ್ಕಾರ, ಲೂಟಿ, ಮತಾಂತರ ಮಾಡಿದ್ದಾರೆ. ಇದನ್ನ ಭಾರತೀಯ ದರ್ಶನಗಳ ಪ್ರಕಾರ ಧರ್ಮ ಅನ್ನಲ್ಲ, ಪೈಶಾಚಿಕ ಮತ ಎನ್ನಬಹುದು.‌ 

ಪೈಶಾಚಿಕ ಪರಂಪರೆಯನ್ನ ಧರ್ಮ ಅಂತ ಹೇಳಲು ಆಗಲ್ಲ, ಪಿಶಾಚಿಗಳ ಧರ್ಮ, ರಾಕ್ಷಸರ ಧರ್ಮ ಅಂತ ಹೇಳಬಹುದು. ಇವರ ಪೈಶಾಚಿಕ ಧರ್ಮ ಈಗ ಭಯೋತ್ಪಾದನೆ ರೂಪದಲ್ಲಿ ಇದೆ. ಇಸ್ಲಾಮಿಗೋಸ್ಕರ ಭಯೋತ್ಪಾದನೆ ಎಂದು ಹೇಳುತ್ತಾರೆ. ಹಾಗಾದರೆ ಇವರ ಹೋರಾಟ ಧರ್ಮಕ್ಕಾಗಿ. ಇನ್ನೊಬ್ಬರನ್ನ ನಾಶ ಮಾಡಲು ಹೋಗಿ ನೀವು ನಾಶವಾಗ್ತೀರಾ, ನಾಶ ಮಾಡೋದೆ ಉದ್ದೇಶವಾದ್ರೆ ನಾವ್ಯಾರು ತಡೆಯಲು ಆಗಲ್ಲ. ಮೋಸ ಹೆಚ್ಚು ಕಾಲ ನಡೆಯಲ್ಲ, ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್..ಡ್ಯಾಶ್... ಅದು ಆಗೇ ಆಗ್ತೀರಾ.. ಮುಸ್ಲಿಮರು ಎಲ್ಲೂ ಈಶ್ವರ ಅಲ್ಲಾ ತೇರೇ ನಾಮ್ ಅಂತ ಹೇಳಿಲ್ಲ, ನಾನಂತೂ ಕೇಳಿಲ್ಲ. ಮಸೀದಿಯಲ್ಲೂ ಈ ಪದಗಳನ್ನು ಹೇಳಿಕೊಟ್ಟಿಲ್ಲ. ಮದ್ರಸಾಗಳಲ್ಲಿ ಈ ರೀತಿ ಹೇಳಿಕೊಟ್ಟಿದ್ರೆ ಭಯೋತ್ಪಾದಕರೇ ಆಗ್ತಿರಲಿಲ್ಲ. 

ರಾಮ್ ರಹೀಮ್ ಏಕ್ ಎಂದು ಹೇಳಿಕೊಟ್ಟಿದ್ದರೆ ಜಗಳವೇ ಆಗ್ತಿರಲಿಲ್ಲ. ಹಿಂದೂಗಳು ರಾಮ್ ರಹೀಮ್ ಏಕ್ ಹೇ ಎಂದು ಹೇಳ್ತಿದ್ದೀವಿ, ಮುಸ್ಲಿಮರು ಹೇಳ್ತಿಲ್ಲ.‌ ನಾವು ಅಲ್ಲಾ ದೇವ್ರು ಅನ್ನೋಕೆ ತೊಂದರೆ ಇಲ್ಲ. ನಮ್ಮ ಪರಂಪರೆ ಅದಕ್ಕೆ ಅವಕಾಶ ಕೊಡುತ್ತೆ.‌ ಸಂಕುಚಿತ ಮನೋಭಾವದವರು ಬದಲಾಗಬೇಕು, ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ಇಲ್ಲಾಂದ್ರೆ ಅವರಲ್ಲಿ ಸಾಮರಸ್ಯ ಹುಟ್ಟಲ್ಲ ಎಂದು ಕಿಡಿಕಾರಿದ್ದಾರೆ.‌

During a statement given on the occasion of Datta Jayanti in Chikkamagaluru, BJP MLA C.T. Ravi made highly controversial comments criticizing Islam, accusing it of promoting violence, forced conversions, and extremism. He contrasted these claims with what he described as the values of Sanatana Dharma, asserting that harming others cannot be considered religious.