ದೇಶದಲ್ಲಿ ಒಂದೇ ದಿನ 57,117 ಜನರಿಗೆ ಸೋಂಕು; ಒಟ್ಟು ಸಂಖ್ಯೆ 16.9 ಲಕ್ಷಕ್ಕೆ ಏರಿಕೆ

01-08-20 06:37 am       Headline Karnataka News Network   ದೇಶ - ವಿದೇಶ

ಆಗಸ್ಟ್ 10ರೊಳಗೆ ದೇಶದಲ್ಲಿ ಕೊರೋನ ಪ್ರಕರಣ 20 ಲಕ್ಷ ದಾಟಲಿದೆ ಎಂದು ಹಿಂದೆ ರಾಹುಲ್ ಗಾಂಧಿ ನುಡಿದ ಭವಿಷ್ಯ ನಿಜವಾಗುವಂತಿದೆ. ಜುಲೈ ತಿಂಗಳಾಂತ್ಯಕ್ಕೆ ಒಟ್ಟು ಪ್ರಕರಣ 17 ಲಕ್ಷದ ಸಮೀಪಕ್ಕೆ ಬಂದಿದೆ.

ನವದೆಹಲಿ: ಆ. 01: ಇಂದಿನಿಂದ ಮೂರನೇ ಹಂತದ ಅನ್​​​​​ಲಾಕ್‌ ಜಾರಿ ಆಗುತ್ತಿದೆ. ಆದರೆ ಕೊರೊನಾ ಸೋಂಕು ಹರಡುವಿಕೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಕೊರೋನಾ ಕಡಿಮೆ ಇದ್ದಾಗ ಲಾಕ್​ಡೌನ್ ಮಾಡಿ ತೀವ್ರಗೊಂಡಾಗ‌ ಅನ್​ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ಕಳೆದ ಮೂರು ದಿನಗಳಿಂದ ಪ್ರತಿದಿನವೂ ಅರ್ಧ ಲಕ್ಷಕ್ಕೂ ಹೆಚ್ಚು ಸೋಂಕು ಪೀಡಿತರು ಕಾಣಿಸಿಕೊಳ್ಳುವ ಟ್ರೆಂಡ್ ಕೂಡ ಆರಂಭವಾಗಿದೆ.

ಹೀಗೆ ಮುಂದುವರಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನುಡಿದಿದ್ದ ಭವಿಷ್ಯದಂತೆ ಆಗಸ್ಟ್ ‌ 10ರೊಳಗೆ ದೇಶದ ಕೊರೊನಾ ಪೀಡಿತರ ಸಂಖ್ಯೆ 20 ಲಕ್ಷ ದಾಟಲಿದೆ. ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಾತ್ರ ದಾಖಲಾಗಿದ್ದವು. ನಂತರ ನೋಡನೋಡುತ್ತಿದ್ದಂತೆ ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದವು. ಅದಾದಮೇಲೆ ಜುಲೈ 20ರಿಂದ 37 ಸಾವಿರಕ್ಕೂ ಪ್ರಕರಣಗಳು ಪತ್ತೆಯಾದವು ಈಗ ಜುಲೈ 31ಕ್ಕೆ 57,117 ಪ್ರಕರಣಗಳು ಕಂಡುಬಂದಿದ್ದು  ದೇಶದ ಕೊರೊನಾ ಪೀಡಿತರ ಸಂಖ್ಯೆ 16,95,988ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಶುಕ್ರವಾರ 764 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 36 ಸಾವಿರದ ಗಡಿ‌ ದಾಟಿದ್ದು 36,511ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 10,94,374 ಜನ ಮಾತ್ರ. ದೇಶದಲ್ಲಿ ಇನ್ನೂ 5,65,103 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜುಲೈ 1ರಂದು 19,148, ಜುಲೈ 2ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248, ಜುಲೈ 6ರಂದು 22,252, ಜುಲೈ 7ರಂದು 22,752, ಜುಲೈ 8ರಂದು 24,879, ಜುಲೈ 9ರಂದು 26,506, ಜುಲೈ 10ರಂದು 27,114, ಜುಲೈ 11ರಂದು 28,637, ಜುಲೈ 12ರಂದು‌ 28,701, ಜುಲೈ 13ರಂದು 28,498, ಜುಲೈ 14ರಂದು 29,429, ಜುಲೈ 15ರಂದು 32,695, ಜುಲೈ 16ರಂದು‌ 34,956, ಜುಲೈ 17ರಂದು 34,884, ಜುಲೈ 18ರಂದು 38,902, ಜುಲೈ 19ರಂದು 40,425, ಜುಲೈ 20ರಂದು 37,148, ಜುಲೈ 21ರಂದು 37,724, ಜುಲೈ 22ರಂದು 45,720, ಜುಲೈ 23ರಂದು 49,310, ಜುಲೈ 24ರಂದು 48,916,‌ ಜುಲೈ 25ರಂದು 48,661, ಜುಲೈ 26ರಂದು 49,931, ಜುಲೈ 27ರಂದು 47,704, ಜುಲೈ 28ರಂದು 48,512 ಹಾಗೂ ಜುಲೈ 29ರಂದು 52,123, ಜುಲೈ 30ರಂದು 55,079 ಹಾಗೂ ಜುಲೈ‌ 31ರಂದು 57,117 ಹೊಸ ಪ್ರಕರಣಗಳು ಪತ್ತೆಯಾಗಿವೆ.