ಬ್ರೇಕಿಂಗ್ ನ್ಯೂಸ್
28-05-21 03:23 pm Headline Karnataka News Network ದೇಶ - ವಿದೇಶ
ದುಬೈ, ಮೇ 28: ಸ್ಮಾರ್ಟ್ಫೋನ್ ಕೈಗೆ ಸಿಕ್ಕು, ತಂತ್ರಜ್ಞಾನ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾದ ನಂತರ ಗೌಪ್ಯತೆ ಎನ್ನುವುದೇ ಭ್ರಮೆ ಎನ್ನುವಂತಾಗಿದೆ. ನಿತ್ಯದ ವಹಿವಾಟುಗಳಿಂದ ಹಿಡಿದು, ಬದುಕಿನ ಪ್ರತಿ ಕ್ಷಣಗಳನ್ನೂ ಮೊಬೈಲಿನಲ್ಲಿ ದಾಖಲಿಸಿಡುವ ಹುಕಿಯಲ್ಲಿ ನಾವು ನಮ್ಮ ವೈಯಕ್ತಿಕ ವಿವರಗಳನ್ನೆಲ್ಲಾ ತಂತ್ರಜ್ಞಾನದ ಕೈಗೆ ಒಪ್ಪಿಸುತ್ತಿದ್ದೇವೆ. ಒಂದೊಮ್ಮೆ ಆ ಮೊಬೈಲ್ ಕಳೆದು ಹೋದರೆ ಅಥವಾ ಬೇರೆಯವರ ಕೈವಶವಾದರೆ ನಮ್ಮ ಜಾತಕ ಪೂರ್ತಿ ಬೀದಿಗೆ ಬಿದ್ದಂತೆಯೇ ಸರಿ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ನಡೆದ ಘಟನೆಯೊಂದರಲ್ಲಿ ಕದ್ದುಮುಚ್ಚಿ ಪತಿಯ ಮೊಬೈಲ್ ಪರಿಶೀಲಿಸಿದ ಪತ್ನಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಈ ಸುದ್ದಿ ಕೇಳಲು ವಿಚಿತ್ರವೆನಿಸಿದರೂ ಸತ್ಯವಾಗಿದೆ. ದುಬೈನ ರಾಸ್ ಅಲ್ ಖೈಮಾದಲ್ಲಿನ ಸಿವಿಲ್ ಕೋರ್ಟ್ ಇಂಥದ್ದೊಂದು ತೀರ್ಪು ನೀಡಿದೆ. ಅನುಮತಿ ಇಲ್ಲದೇ ಪತಿಯ ಮೊಬೈಲ್ ಪರಿಶೀಲಿಸಿ ಅದರಲ್ಲಿದ್ದ ಮೆಸೇಜ್ಗಳನ್ನು ನೋಡಿ, ಫೋಟೋ ಹಾಗೂ ಕೆಲ ರೆಕಾಂರ್ಡಿಂಗ್ಗಳನ್ನು ಬೇರೆಡೆಗೆ ಕಳುಹಿಸುವ ಮೂಲಕ ಆತನ ಗೌಪ್ಯತೆಗೆ ಭಂಗ ತಂದಿದ್ದಕ್ಕಾಗಿ ನ್ಯಾಯಾಲಯ ದಂಡ ವಿಧಿಸಿದೆ. ಈ ರೀತಿಯ ನಡೆವಳಿಕೆ ಪತಿಯ ವ್ಯಕ್ತಿತ್ವಕ್ಕೆ ಧಕ್ಕೆ ಉಂಟುಮಾಡುವುದಲ್ಲದೇ ಆತನ ಖಾಸಗಿ ಮಾಹಿತಿಗಳ ಸುರಕ್ಷತೆಗೂ ಹಾನಿ ಉಂಟುಮಾಡುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೆಂಡತಿಯ ವರ್ತನೆಯಿಂದ ಬೇಸತ್ತಿದ್ದ ಗಂಡ ತನಗೆ ನ್ಯಾಯ ಬೇಕೆಂದು ದೂರು ದಾಖಲಿಸಿದ್ದ. ತನ್ನ ಮೊಬೈಲಿನಲ್ಲಿರುವ ಫೋಟೋಗಳನ್ನು ಕುಟುಂಬದ ಇತರರಿಗೆ ಕಳುಹಿಸಿ ನನಗೆ ಅವಮಾನಿಸಿದ್ದಾಳೆಂದು ಆರೋಪಿಸಿದ್ದ. ಹೆಂಡತಿ ಹೀಗೆ ಮಾಡುತ್ತಿರುವುದು ತನಗೆ ಮಾನಸಿಕವಾಗಿ ನೋವುಂಟು ಮಾಡಿದ್ದು, ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದು ನನ್ನ ಸಂಬಂಳದಲ್ಲಿ ಕಡಿತವಾಗಲು ಕಾರಣವಾಗಿದೆ. ಅಲ್ಲದೇ ದಾವೆ ಹೂಡಲು ಕೂಡ ಖರ್ಚಾಗುತ್ತಿದ್ದು, ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಯಾಗಿ ಪತ್ನಿಯೂ ದೂರು ದಾಖಲಿಸಿದ್ದು, ಪತಿಯಿಂದ ನನಗೆ ಕಿರುಕುಳವಾಗುತ್ತಿದೆ. ಆತ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಾನೆ. ಅಲ್ಲದೇ ತನ್ನನ್ನೂ ತನ್ನ ಮಕ್ಕಳನ್ನೂ ಮನೆಯಿಂದ ಆಚೆಗಟ್ಟಿದ್ದಾನೆ ಎಂದು ಹೇಳಿದ್ದಳು. ಎರಡೂ ಕಡೆಯ ದೂರನ್ನು ಪರಿಶೀಲಿಸಿದ ನ್ಯಾಯಾಲಯ ಪತ್ನಿಯು ಪತಿಯ ಗೌಪ್ಯತೆಗೆ ಭಂಗ ಉಂಟು ಮಾಡಿರುವುದಕ್ಕೆ ಸಾಕ್ಷ್ಯಾಧಾರ ಲಭಿಸಿದೆ. ಹೀಗಾಗಿ ಆಕೆ ಪತಿಗೆ 1,07,585.02 ರೂಪಾಯಿ (Dh 5431) ಪರಿಹಾರ ನೀಡಬೇಕಿದೆ ಎಂದು ತಿಳಿಸಿದೆ. ಇದೇ ವೇಳೆ ಮಾನಸಿಕ ಹಿಂಸೆಯಿಂದಾಗಿ ಕೆಲಸ ಮಾಡಲಾಗದೇ ಸಂಬಳ ಕಡಿತವಾಗುತ್ತಿದೆ ಎನ್ನುವ ಆಕೆಯ ಪತಿಯ ಆರೋಪವನ್ನು ಪುರಸ್ಕರಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.
An Arab woman has been ordered to pay a fine of 5431 dirhams (Rs 1,07,329) for spying on her husband’s phones and violating his privacy. In a recent accusation, a civil court in Ras Al Khaimah, United Arab Emirates ruled that the wife transferred media from her husband’s phone and then circulated them among her family members to distort his image, according to a report by Khaleej Times.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm