ಬ್ರೇಕಿಂಗ್ ನ್ಯೂಸ್
23-06-21 11:36 am Headline Karnataka News Network ದೇಶ - ವಿದೇಶ
ತಿರುವನಂತಪುರಂ, ಜೂನ್ 23: ವರದಕ್ಷಿಣೆಯ ಕಿರುಕುಳದಿಂದ ಬಲಿಯಾದ ವಿಸ್ಮಯಳ ಸಾವು ಈಗ ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಕೇರಳದ ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ವರದಕ್ಷಿಣೆ ಕಿರುಕುಳಕ್ಕೆ ಯುವ ಗೃಹಿಣಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಸರ್ಕಾರಿ ನೌಕರನಿಗೆ ತಕ್ಕಶಿಕ್ಷೆಯಾಗಬೇಕು ಎಂದು ಸಾರ್ವಜನಿಕರಿಂದ ಬಂದ ಆಕ್ರೋಶದ ಮನವಿಗೆ ಕೇರಳ ಸರ್ಕಾರ ಸ್ಪಂದಿಸಿದೆ. ವಿಸ್ಮಯ ಪತಿ ಕಿರಣ್ ಬಂಧನವಾಗಿದೆ, ತನಿಖೆ ಜಾರಿಯಲ್ಲಿದೆ. ಈ ಬಗ್ಗೆ ಇಂಥ ದುರಂತಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಸಿಎಂ ಕರೆ ನೀಡಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವರದಕ್ಷಿಣೆ ಕಿರುಕುಳ ಸಾವು ಪ್ರಕರಣಗಳ ಬಗ್ಗೆ ಮಾತನಾಡಿ, ''ಪಥನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠರಾದ ಆರ್ ನಿಶಾಂತಿನಿರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧಿಸಿದ ದೂರುಗಳನ್ನು ನೇರವಾಗಿ ಅವರೊಂದಿಗೆ ಹಂಚಿಕೊಳ್ಳಬಹುದು, 9497999955 ಸಂಖ್ಯೆ ಚಾಲನೆಗೊಳ್ಳಲಿದ್ದು, ಮಹಿಳಾ ಎಸ್ಐಯೊಬ್ಬರು ನಿಶಾಂತಿನಿಗೆ ನೆರವು ನೀಡಲಿದ್ದಾರೆ. ಯಾವುದೇ ವಯೋಮಾನದವರು ಕಿರುಕುಳ ಬಗ್ಗೆ ದೂರು ನೀಡಿದರೆ ತಕ್ಷಣವೇ ಆ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ'' ಎಂದರು.


ಮಹಿಳೆಯರ ಮೇಲೆ ದೌರ್ಜನ್ಯ ಮೆರೆಯುವುದೇ ಪುರುಷತ್ವದ ಲಕ್ಷಣ ಎಂಬಂತೆ ವರ್ತಿಸುವ ಸಮಾಜ ನಮ್ಮದಲ್ಲ, ಇಂಥ ಕ್ರೂರ ಘಟನೆಗಳು ಕಂಡು ಬಂದರೆ ತಕ್ಷಣವೇ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲಾ, ಕಾಲೇಜು ಪಠ್ಯಕ್ರಮಗಳನ್ನು ಈ ಬಗ್ಗೆ ಜಾಗೃತಿ ಮೂಡಿಸುವ ಪಾಠ, ಸಂದೇಶ ಸೇರಿಸಲು ಸರ್ಕಾರ ಮುಂದಾಗಿದೆ. ಮದುವೆ ಎನ್ನುವುದು ಸ್ಟೇಟಸ್, ಮಾರುಕಟ್ಟೆ ಮೌಲ್ಯ, ವ್ಯಾಪಾರದ ವಿಷಯ ವಸ್ತುವಲ್ಲ, ಕೌಟುಂಬಿಕ ಮೌಲ್ಯಕ್ಕೆ ಬೆಲೆ ಕೊಟ್ಟು ಸಂಸಾರ ನಡೆಸುವವರಿಗೆ ನಿಮ್ಮ ಮಕ್ಕಳನ್ನು ಮದುವೆ ಮಾಡಿಕೊಡಿ, ಸರಕುಗಳಂತೆ ವ್ಯಾಪಾರ ಮಾಡಬೇಡಿ,'' ಎಂದು ಸಿಎಂ ವಿಜಯನ್ ಎಚ್ಚರಿಕೆ ಮಾತಗಳನ್ನಾಡಿದ್ದಾರೆ.
ಪಂಡಾಲಂನ ಮನ್ನಂ ಆಯುರ್ವೇದ ಮೆಡಿಕಲ್ ಕಾಲೇಜಿನ ನಾಲ್ಕನೇ ವರ್ಷ ಬಿಎಎಂಎಸ್ ವಿದ್ಯಾರ್ಥಿನಿ ವಿಸ್ಮಯ(24) ತನ್ನ ಪತಿ ಕಿರಣ್ ನೀಡುತ್ತಿದ್ದ ವರದಕ್ಷಿಣೆಗಾಗಿ ಕಿರುಕುಳ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಂಧಿತ ಕಿರಣ್ ಕುಮಾರ್ ಎರಡು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಸಾಸ್ಥಂಕೊಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಕೊಟ್ಟರಕ್ಕರ ಸಬ್ ಜೈಲಿನಲ್ಲಿರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲಂ ಪೊಲೀಸರಲ್ಲದೆ, ರಾಜ್ಯ ಮಹಿಳಾ ಆಯೋಗ ಕೂಡಾ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ.
Read: 100 ಪವನ್ ಚಿನ್ನ, ಒಂದೆಕ್ರೆ ಭೂಮಿ, ಟಯೋಟಾ ಕಾರು ಕೊಟ್ಟರೂ ತೀರದ ದಾಹ ; ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ !
Chief Minister Pinarayi Vijayan on Tuesday announced a round-the-clock police helpline (9497999955) for women to report instances of dowry harassment, domestic violence, and other gender crime.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
25-07-26 07:34 pm
HK News Staffer
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
25-07-26 07:32 pm
HK News Staffer
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
Surathkal Brdige, Thokottu, Mangalore: ಸುರತ್ಕ...
23-07-26 10:27 pm
25-07-26 07:36 pm
HK News Staffer
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm
Astra Group Fraud, Lanchu Lal, Mangalore: ‘ಅಸ...
24-07-26 05:30 pm