ಬ್ರೇಕಿಂಗ್ ನ್ಯೂಸ್
22-06-21 05:23 pm Headline Karnataka News Network ಕ್ರೈಂ
Photo credits : News Minute
ಕೊಲ್ಲಂ, ಜೂನ್ 22: ಆಕೆಯ ಹೆಸರು ವಿಸ್ಮಯ ಕುಮಾರಿ. 22 ವರ್ಷದ ಸುಂದರ ತರುಣಿ. ಕೊಲ್ಲಂ ಆಯುರ್ವೇದ ಕಾಲೇಜಿನಲ್ಲಿ ಸರ್ಜರಿ ಪದವಿ ಕಲಿಯುತ್ತಿದ್ದ ವಿದ್ಯಾರ್ಥಿನಿ. ಇನ್ನೂ ಸಮಾಜದ ಕಣ್ಣುಗಳನ್ನು ನೋಡಿರದೇ ಇದ್ದ ಯುವತಿಯನ್ನು ಒಳ್ಳೆ ಸಂಬಂಧ ಬಂತೆಂದು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅದ್ದೂರಿಯಾಗೇ ಮದುವೆ ಮಾಡಲಾಗಿತ್ತು. 100 ಪವನ್ ಬಂಗಾರ, ಟಯೋಟಾ ಯಾರಿಸ್ ಕಾರಿನ ಜೊತೆಗೆ ಒಂದು ಎಕ್ರೆ ಜಮೀನನ್ನು ವರದಕ್ಷಿಣೆಯ ರೂಪದಲ್ಲಿ ನೀಡಲಾಗಿತ್ತು. ಮದುಮಗ ಆರ್ಟಿಓ ಕೊಲ್ಲಂ ವಿಭಾಗದಲ್ಲಿ ಅಧಿಕಾರಿಯಾಗಿದ್ದ. ಹೆಸರು ಕಿರಣ್ ಕುಮಾರ್. ಯುವತಿಯಷ್ಟೇ ಸ್ಫುರದ್ರೂಪಿ ಹುಡುಗ. ಹೊಸ ಜೀವನಕ್ಕೆ ಕಾಲಿಟ್ಟಿದ್ದ ಆ ಜೋಡಿಯ ಪಾಲಿಗೆ ಸ್ವರ್ಗಕ್ಕೆ ಇನ್ನೊಂದೇ ಗೇಣು ಅನ್ನುವಂತಿತ್ತು.
ಆದರೆ, ಸ್ವರ್ಗ ಸದೃಶ ಬದುಕಿನ ಸುಖ ಆ ಜೋಡಿಯ ಪಾಲಿಗೆ ಹೆಚ್ಚು ಕಾಲ ಇರಲಿಲ್ಲ. ಹೋದ ನಾಲ್ಕು ತಿಂಗಳಲ್ಲೇ ಗಂಡನ ಪೈಶಾಚಿಕ ಕಿರುಕುಳ ನೀಡಲಾರಂಭಿಸಿದ್ದ. ವರದಕ್ಷಿಣೆಯ ಹೆಸರಲ್ಲಿ ಕಿರುಕುಳ ನೀಡುತ್ತಾ ಪೀಡಿಸುತ್ತಿದ್ದ ಕೃತ್ಯಗಳು ಯುವತಿಯ ತಾಯಿ ಮನೆಯವರಿಗೂ ತಿಳಿದುಬಂದಿತ್ತು. ಕಾರು ಯಾಕೆ ಕೊಟ್ಟಿದ್ದು, ನನಗೆ ಹಣವೇ ಬೇಕು. ಹೋಗಿ ಮನೆಯಿಂದ ಹಣ ತಂದುಕೊಡು ಎಂದು ಕಿರಣ್ ಕುಮಾರ್ ಕುಡಿದು ಬಂದು ನೀಡುತ್ತಿದ್ದ ಹಲ್ಲೆ ಮಾಡುತ್ತಿದ್ದ. ಈ ಬಗ್ಗೆ ತಾಯಿ ಮನೆಗೆ ತಿಳಿದಿದ್ದರೂ, ಅಳಿಯ ಆರ್ಟಿಓ ಅಧಿಕಾರಿಯಾಗಿದ್ದರಿಂದ ಪೊಲೀಸ್ ದೂರು ಕೊಟ್ಟಿರಲಿಲ್ಲ. ಆದರೆ, ಮದುವೆಯಾಗಿ ಒಂದು ವರ್ಷ ಪೂರೈಸುವಷ್ಟರಲ್ಲಿ ಇನ್ನೂ ಬಾಳಿ ಬದುಕಬೇಕಿದ್ದ ಸುಂದರಿ ತನಗೆ ಗಂಡ ನೀಡಿರುವ ಶಿಕ್ಷೆ, ಕಿರುಕುಳವನ್ನು ವಾಟ್ಸಪ್ ಮಾಡಿ ಆತನ ಮನೆಯಲ್ಲೇ ಸಾವಿಗೆ ಶರಣಾಗಿದ್ದಾಳೆ..
ಇದೇನು ಮಲೆಯಾಳಂ ಸಿನಿಮಾ ಕತೆಯಲ್ಲ. ಕೇರಳದ ಕೊಲ್ಲಂನಲ್ಲಿ ನಡೆದಿರುವ ಪೈಶಾಚಿಕ ಘಟನೆ. ಕಿರಾತಕ ಯುವಕನ ಕಿರುಕುಳಕ್ಕೆ ಬೇಸತ್ತು 22 ವರ್ಷದ ಯುವತಿ ಸಾವಿಗೆ ಶರಣಾಗಿರುವ ಘಟನೆ ಕೇರಳದಲ್ಲೀಗ ಬಿರುಗಾಳಿಯನ್ನೇ ಎಬ್ಬಿಸಿದೆ. ಕೊಲ್ಲಂ ಜಿಲ್ಲೆಯ ಸಾಸ್ತಮ್ ನಾಡ ಗ್ರಾಮದ ಸಾಸ್ತಮ್ ಕೊಟ್ಟ ಎಂಬಲ್ಲಿ ಘಟನೆ ನಡೆದಿದ್ದು, ವರದಕ್ಷಿಣೆಯ ಕಿರುಕುಳಕ್ಕೆ ಬಲಿಯಾಗಿರುವ ಯುವತಿಯ ಪರವಾಗಿ ಕೇರಳ ಮಹಿಳಾ ಆಯೋಗವೂ ಕೇಸು ದಾಖಲಿಸಿಕೊಂಡಿದ್ದು, ಪೊಲೀಸರ ಮೇಲೆ ತನಿಖೆಗೆ ಒತ್ತಡ ಹೇರಿದೆ.
ವಿಸ್ಮಯ ಕುಮಾರಿ ಸೋಮವಾರ (ಜೂನ್ 21) ಬೆಳಗ್ಗೆ ಗಂಡನ ಮನೆಯ ಬಾತ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬೇರೇನೂ ಸಾಕ್ಷ್ಯ ಇರದೇ ಇರುತ್ತಿದ್ದರೆ, ವಿಸ್ಮಯಾಳ ಸಾವು ಮಾಮೂಲಿ ಆತ್ಮಹತ್ಯೆ ರೀತಿ ಆಗಿಹೋಗಿರುತ್ತಿತ್ತು. ಆದರೆ, ವಿಸ್ಮಯಾ ಸಾವಿಗೆ ಶರಣಾಗುವುದಕ್ಕಿಂತ ಮೊದಲು ತನ್ನ ತಂಗಿಗೆ ವಾಟ್ಸಪ್ ಮೆಸೇಜ್ ಮಾಡಿದ್ದು, ತನಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಳು. ಅಲ್ಲದೆ, ಗಂಡನಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಫೋಟೋಗಳನ್ನು ಕಳಿಸಿದ್ದಳು.
ವಿಸ್ಮಯಾಳ ಮೇಲೆ ತೀವ್ರ ರೀತಿಯ ಹಲ್ಲೆ ಆಗಿತ್ತು. ಜುಟ್ಟನ್ನು ಹಿಡಿದು ಮುಖವನ್ನು ಗೋಡೆಗೆ ಬಡಿದಿದ್ದಾಗಿ ಹೇಳಿಕೊಂಡಿದ್ದಳು. ಇದರ ಬಗ್ಗೆ ಬೇರೆ ಯಾರಲ್ಲೂ ಹೇಳಿಕೊಂಡಿಲ್ಲ ಎಂದಿದ್ದಳು. ಆಕೆಯ ಮೇಲೆ ಯಾವ ರೀತಿ ಹಲ್ಲೆಗಳಾಗಿದ್ದವು ಅನ್ನುವುದಕ್ಕೆ ಆಕೆ ಕಳಿಸಿದ್ದ ಫೋಟೋಗಳೇ ಸಾಕ್ಷಿ ಎಂದು ವಿಸ್ಮಯಾಳ ತಂಗಿ ತನಗೆ ಎರಡು ದಿನಗಳ ಹಿಂದೆ ವಾಟ್ಸಪ್ ಮಾಡಿದ್ದ ಮೆಸೇಜನ್ನು ಪೊಲೀಸರಿಗೆ ನೀಡಿದ್ದಾಳೆ. ಇದರ ಫೋಟೋಗಳು ಮತ್ತು ವಾಟ್ಸಪ್ ಸಂದೇಶಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಪೈಶಾಚಿಕ ಕೃತ್ಯ ಎಸಗಿದ್ದ ಯುವಕನ ವಿರುದ್ಧ ಆಕ್ರೋಶ ಕೇಳಿಬಂದಿದೆ.
ಯುವತಿಯ ತಂದೆ ತ್ರಿವಿಕ್ರಮನ್ ನಾಯರ್, ಮಗಳನ್ನು ಗಂಡನೇ ಕೊಲೆ ಮಾಡಿದ್ದಾಗಿ ಪೊಲೀಸ್ ದೂರು ನೀಡಿದ್ದಾರೆ. ಈ ನಡುವೆ, ಮಹಿಳಾ ಆಯೋಗ ಸ್ವಯಂ ಆಗಿ ಕೇಸು ದಾಖಲಿಸಿಕೊಂಡಿದ್ದು, ಇದು ವರದಕ್ಷಿಣೆಯ ಕಿರುಕುಳದಿಂದಲೇ ಕೃತ್ಯ ಆಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದೆ. ಮದುವೆಯಾಗಿ ಹತ್ತು ವರ್ಷಗಳ ಒಳಗೆ ಈ ರೀತಿಯ ಘಟನೆಗಳು ನಡೆದರೆ ಅವನ್ನು ವರದಕ್ಷಿಣೆ ಕಿರುಕುಳ ಎಂದೇ ಪರಿಗಣಿಸುತ್ತೇವೆ ಎಂದು ಹೇಳಿದೆ.
ಎರಡು ತಿಂಗಳ ಹಿಂದೆ ನಾನು ವಿಸ್ಮಯಾಳ ಮನೆಗೆ ಹೋಗಿದ್ದಾಗಲೂ ಆತ ಹೊಡೆದಿದ್ದ. ಪಾರ್ಟಿ ಮುಗಿಸಿ ಬಂದಿದ್ದ ಕಿರಣ್ ಕುಮಾರ್, ವಿಸ್ಮಯಾಳ ಮೇಲೆ ನನ್ನ ಮುಂದೆಯೇ ಹೊಡೆದಿದ್ದಾನೆ. ಆ ವೇಳೆಗೆ, ನನ್ನ ಮಗ ಅಡ್ಡ ಹೋಗಿದ್ದಕ್ಕೆ ಆತನ ಮೇಲೂ ಹಲ್ಲೆಗೈದಿದ್ದ. ಆನಂತರ ಮಗ ಪೊಲೀಸ್ ದೂರು ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಕಿರಣ್ ಕುಮಾರ್ ಆರ್ಟಿಓ ಅಧಿಕಾರಿಯಾಗಿದ್ದರಿಂದ ಪೊಲೀಸರಿಗೆ ಪ್ರಭಾವ ಬೀರಿದ್ದ. ಬಳಿಕ ಸರ್ಕಲ್ ಇನ್ ಸ್ಪೆಕ್ಟರ್ ಮಗನನ್ನು ಕರೆದು ಕಾಂಪ್ರಮೈಸ್ ಮಾಡಿಸಿ, ದೂರು ಹಿಂಪಡೆಯುವಂತೆ ಮಾಡಿದ್ದರು. ಆನಂತರ ಮಗಳು ವಿಸ್ಮಯಾ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದಳು. ಎರಡು ತಿಂಗಳ ಹಿಂದೆ ಆಕೆ ಬಿಎಂಎಸ್ ಪರೀಕ್ಷೆ ಬರೆಯುವುದಕ್ಕಾಗಿ ಪಂದಳಂ ಕಾಲೇಜಿಗೆ ತೆರಳಿದ್ದಳು. ಅಲ್ಲಿಂದ ಆಕೆಯನ್ನು ಕಿರಣ್ ಕುಮಾರ್ ತನ್ನ ಮನೆಗೆ ಒಯ್ದಿದ್ದು ಮರಳಿ ಬಂದಿರಲಿಲ್ಲ ಎಂದು ತಂದೆ ತ್ರಿವಿಕ್ರಮನ್ ನಾಯರ್ ಹೇಳಿದ್ದಾರೆ.
ಆನಂತರ ತಾಯಿ ಜೊತೆಗೆ ಮಾತ್ರ ಒಮ್ಮೆ ಕರೆ ಮಾಡಿ ಮಾತನಾಡಿದ್ದಳು. ಆಕೆಯ ಬಳಿಯೂ ಗಂಡ ಹೊಡೆಯುತ್ತಿರುವುದಾಗಿ ಹೇಳಿಕೊಂಡಿದ್ದಳು. ಆದರೆ, ಅದನ್ನು ಆಕೆ ಈಗ ನನ್ನ ಬಳಿ ಹೇಳುತ್ತಿದ್ದಾಳೆ. ಎಲ್ಲ ವಿಚಾರ ಈಗ ಹೊರಗೆ ಬರುತ್ತಿದೆ. ಎರಡು ದಿನಗಳ ಹಿಂದೆ ಆಕೆಯ ತಂಗಿಗೂ ಮೆಸೇಜ್ ಮಾಡಿ, ಕರ್ಕೊಂಡು ಹೋಗುವಂತೆ ತಿಳಿಸಿದ್ದಳಂತೆ. ಫೋಟೋವನ್ನೂ ಷೇರ್ ಮಾಡಿದ್ದಳಂತೆ. ಆದರೆ ಈಗ ಕಾಲ ಮಿಂಚಿ ಹೋಗಿದೆ. ಮಗಳೇ ಇಲ್ಲವಾಗಿದ್ದಾಳೆ. ಅವನನ್ನು ಪೊಲೀಸರು ಬಿಡಬಾರದು. ಶಿಕ್ಷೆಗೆ ಒಳಪಡಿಸಬೇಕು ಎಂದು ನಾಯರ್ ಕಣ್ಣೀರು ಹಾಕಿದ್ದಾರೆ.
Vismaya V Nair, a 22-year-old woman, was found dead on Monday morning at the house of her husband's family in Sasthamnada near Sasthamkotta in Kollam district. Her death came two days after she sent messages to her cousin telling him that her husband had brutally beaten her many times over a car that was given as part of her dowry.
25-03-25 08:37 pm
Bangalore Correspondent
BJP, Recognition, DK Shivakumar, Muslim Reser...
25-03-25 11:25 am
ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಟ್ಟಿದ...
24-03-25 11:04 pm
BJP, Phone Tapping, Karnataka, Ashok: ಹನಿಟ್ರ್...
24-03-25 10:42 pm
Big boss Vinay Gowda, Rajat Arrest, Bangalore...
24-03-25 09:24 pm
25-03-25 04:06 pm
HK News Desk
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
24-03-25 03:56 pm
Mangalore Correspondent
Mangalore, Swimming pool, Death, Madikeri: ಚಿ...
24-03-25 01:35 pm
Mangalore Jyotiraj, Kotiraj: ಕಾರಿಂಜೇಶ್ವರ ಬೆಟ...
23-03-25 10:44 pm
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
25-03-25 06:09 pm
Bangalore Correspondent
Bangalore Crime, Murder, Loknath Singh: ರಿಯಲ್...
25-03-25 04:40 pm
Gokak Society Fraud Case, Sadashiv Hiremath S...
23-03-25 03:56 pm
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm