ಮೊಬೈಲ್ ಸೆಲ್ಫಿ ತಂದ ದುರಂತ ; ಕೆರೆಗೆ ಬಿದ್ದು ಮೂವರು ಬಾಲಕಿಯರ ದುರ್ಮರಣ

06-07-21 04:25 pm       Headline Karnataka News Network   ದೇಶ - ವಿದೇಶ

ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಬಾಲಕಿಯರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಿರ್ಮಲ್​ ಜಿಲ್ಲೆಯಲ್ಲಿ ನಡೆದಿದೆ. 

Photo credits : Shethepeople tv

ತೆಲಂಗಾಣ, ಜುಲೈ 06: ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಬಾಲಕಿಯರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಿರ್ಮಲ್​ ಜಿಲ್ಲೆಯಲ್ಲಿ ನಡೆದಿದೆ. 

ಎಲ್ಕೆ ದಾದರಾವ್​ ಮತ್ತು ಮಂಗಳಬಾಯಿ ದಂಪತಿ ನಿರ್ಮಲ್ ಜಿಲ್ಲೆಯ ನೂರು ವಲಯದ ಸಿಂಗಿಗಮ್​​ ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ ಸ್ಮಿತಾ, ವೈಶಾಲಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ತಮ್ಮ ತಾಯಿ ಜೊತೆ ಸೇರಿ ನಿನ್ನೆ ತೋಟಕ್ಕೆ ತೆರಳಿದ್ದಾರೆ. ಇವರೊಂದಿಗೆ ಸಂಬಂಧಿ ಅಂಜಲಿ ಕೂಡ ತೆರಳಿದ್ದಳು. ತೋಟದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಸುತ್ತಾಡಿರುವ ಮೂವರು ತದನಂತರ ಪಕ್ಕದ ಕೆರೆಗೆ ಹೋಗಿದ್ದಾರೆ.

ಮಕ್ಕಳು ಮನೆಗೆ ಬರುತ್ತಾರೆಂದು ತಾಯಿ ಅವರನ್ನ ಅಲ್ಲೇ ಬಿಟ್ಟು ತೆರಳಿದ್ದಾಳೆ. ಕೆರೆಯ ದಡದ ಮೇಲೆ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಏಕಾಏಕಿ ಕಾಲು ಜಾರಿ ಬಿದ್ದಿರುವ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಸ್ಮಿತಾ(17), ವೈಶಾಲಿ(14) ಹಾಗೂ ಅಂಜಲಿ(16) ದುರಂತ ಸಾವಿಗೀಡಾಗಿದ್ದಾರೆ. ಸಂಜೆಯಾದರು ಮಕ್ಕಳು ಮನೆಗೆ ಬರಲಿಲ್ಲ ಎಂದು ತಾಯಿ ಹುಡುಕಲು ತೆರಳಿದ್ದಾಗ ಅವರ ಮೃತದೇಹಗಳು ಕೆರೆಯಲ್ಲಿ ಕಾಣಿಸಿಕೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Three girls including two sisters drowned in a lake in the Nirmal district while allegedly trying to take selfies. The bodies of the three teenaged girls were found in the water body on the outskirts of Shingangam village after they went missing on Sunday evening, they said.