ಡೆಲ್ಟಾ ಬೆನ್ನಲ್ಲೇ "ಝಿಕಾ ವೈರಸ್"​ ಆತಂಕ ; ಕೇರಳದಲ್ಲಿ ಹೈ ಅಲರ್ಟ್ !!

08-07-21 11:14 pm       Headline Karnataka News Network   ದೇಶ - ವಿದೇಶ

ಕೋವಿಡ್​ ಎರಡನೇ ಅಲೆಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಝಿಕಾ ವೈರಸ್​ ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.

ತಿರುವನಂತಪುರಂ, ಜುಲೈ 08:  ಕೋವಿಡ್​ ಎರಡನೇ ಅಲೆಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಝಿಕಾ ವೈರಸ್​ ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.

ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಗುರುವಾರ 13 ಜಿಕಾ ವೈರಸ್​ ಪ್ರಕರಣಗಳು ಕಂಡು ಬಂದಿದೆ. ಸೋಂಕು ಪತ್ತೆಯಾದವರ ಸ್ಯಾಂಪಲ್​ ಅನ್ನು ಪುಣೆಯ ವೈರಲಾಜಿ ವಿಭಾಗಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಇದು ಜಿಕಾ ವೈರಸ್​ ಸೋಂಕು ಹರಡಿರುವುದು ಸ್ಪಷ್ಟವಾಗಿದೆ. ಈ ಕುರಿತು ಮಾತನಾಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್​, 13 ಪ್ರಕರಣಗಳ ಬಗ್ಗೆ ಅನುಮಾನ ವ್ಯಕ್ತವಾಗಿ ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆಗೆ ಕಳುಹಿಸಿದ್ದೇವು. ಇದು ಜಿಕಾ ವೈರಸ್​ ಸೋಂಕು ಎಂದು ವರದಿ ಬಂದಿದೆ ಎಂದಿದ್ದಾರೆ. ಇನ್ನು ಪತ್ತೆಯಾದ ಎಲ್ಲಾ ಪ್ರಕರಣಗಳು ತಿರುವನಂತರಪುರದಿಂದಲೇ ದಾಖಲಾಗಿದೆ ಎನ್ನಲಾಗಿದೆ.



ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಿಕಾ ವೈರಸ್ ಸೋಂಕು ಏಡೆಸ್​ ಸೊಳ್ಳೆಯಿಂದ ಹಬ್ಬುತ್ತದೆ. ಬೆಳಗ್ಗಿನ ಹೊತ್ತು ಈ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಮೊದಲ ಜಿಕಾ ವೈರಸ್​ ಪ್ರಕರಣ 1947ರಲ್ಲಿ ಉಗಾಂಡಾದ ಕೋತಿಗಳಲ್ಲಿ ಕಂಡು ಬಂದಿತ್ತು. ಇದಾದ ಬಳಿಕ 1952 ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮನುಷ್ಯರಲ್ಲಿ ಕಂಡು ಬಂದಿತ್ತು. ಏಷ್ಯಾ, ಆಫ್ರಿಕಾ, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಜಿಕಾ ವೈರಸ್ ಹರಡಿರುವುದು ಪತ್ತೆಯಾಗಿದೆ.ಇನ್ನು ಈ ಜಿಕಾ ವೈಸ್​ ಸೋಂಕಿಗೆ ಒಳಗಾದವರಲ್ಲಿ ಸಾಮಾನ್ಯವಾಗಿ ಜ್ವರ, ದದ್ದು, ಸ್ನಾಯು ಸೆಳೆತ, ಕೀಲು ನೋವು, ಅಸ್ವಸ್ಥತೆ ಮತ್ತು ತಲೆ ನೋವಿನ ಲಕ್ಷಣಗಳು ಕಂಡು ಬರುತ್ತದೆ. ಈ ಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ ಏಳು ದಿನಗಳವರೆಗೆ ಕಾಡುತ್ತದೆ.

ಇನ್ನು ಈ ಏಡಿಸ್​ ಸೊಳ್ಳೆಯಿಂದ ಈ ಜಿಕಾ ಸೋಂಕು ಕಂಡು ಬರುತ್ತದೆ. ಇದರಲ್ಲಿ ಏಡಿಸ್​ ಏಜಿಪ್ತಿ ಪ್ರಕಾರದ ಸೊಳ್ಳೆಗಳು ಡೆಂಗ್ಯೂ, ಚಿಕನ್​ ಗುನ್ಯಾ ಮತ್ತು ಹಳದಿ ಜ್ವರಕ್ಕೆ ಕೂಡ ಕಾರಣವಾಗುತ್ತದೆ.



ಈ ಸೋಂಕು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ, ಗರ್ಭಿಣಿ ಮಹಿಳೆಯರಲ್ಲಿ ಈ ಸೋಂಕು ಕಂಡು ಬಂದರೆ, ಅದು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಸಾಕಷ್ಟು ಹಾನಿ ಮಾಡುವ ಸಾಧ್ಯತೆ ಹೆಚ್ಚು. ಇದರಿಂದ ನವಜಾತ ಶಿಶುಗಳಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ.

ದೇಶದಲ್ಲಿಯೇ ಮೊದಲ ಕೋವಿಡ್​ ಪ್ರಕರಣ ಪತ್ತೆಯಾದ ಕೇರಳದಲ್ಲಿ ಸೋಂಕಿನ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕಿನ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿ ಕೇರಳ ನಿಂತಿದೆ. ಈ ನಡುವೆ ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಕೋವಿಡ್​ ಸಂಕು ಪ್ರಕರಣ ಹೆಚ್ಚುಗೊಂಡಿದೆ. ಜೂನ್​ 28ರಿಂದ ಕೋವಿಡ್​ ಪ್ರಕರಣಗಳ ಸಂಖ್ಯೆ ಎರಡರಷ್ಟು ಹೆಚ್ಚಿದ್ದು, ಡೆಲ್ಟಾ ಸೋಂಕಿ ಪ್ರಕರಣಗಳು ಕೂಡ ಕಂಡು ಬಂದಿದೆ.  ಇದು ಮೂರನೇ ಅಲೆ ಎಚ್ಚರಿಕೆ ಎನ್ನಲಾಗಿದೆ. ಈ ನಡುವೆ ರಾಜ್ಯದಲ್ಲಿ ಜಿಕಾ ವೈರಸ್​ ಪ್ರಕರಣ ಕಂಡು ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಏನಿದು ಝಿಕಾ ವೈರಸ್?

ಝಿಕಾ ಎಂಬುದು ಸೊಳ್ಳೆಗಳಿಂದ ಹರಡುವ ರೋಗ. ಜ್ವರ, ಕೆಂಪು ಕಲೆಗಳು, ಸ್ನಾಯು, ಕೀಲುಗಳಲ್ಲಿ ನೋವು, ತಲೆ ನೋವು ಈ ಸೋಂಕಿನ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು 2ರಿಂದ ಏಳು ದಿನಗಳವರೆಗೆ ಇರುತ್ತವೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ 1947ರಲ್ಲಿ ಉಗಾಂಡದಲ್ಲಿ ಮಂಗಗಳಲ್ಲಿ ಪತ್ತೆಹಚ್ಚಿತ್ತು. ಆಫ್ರಿಕಾ, ಅಮೆರಿಕ, ಏಷ್ಯಾ ಹಾಗೂ ಪೆಸಿಫಿಕ್‌ನಲ್ಲಿ ಕಂಡುಬಂದಿದ್ದು, ಇದೀಗ ಮೊದಲ ಬಾರಿ ಕೇರಳದಲ್ಲಿ ಪತ್ತೆಯಾಗಿದೆ.

A 24-year-old woman from Parassala in Thiruvananthapuram has been found infected with Zika virus, state health minister Veena George said on Thursday.