ಬ್ರೇಕಿಂಗ್ ನ್ಯೂಸ್
11-07-21 08:12 pm Headline Karnataka News Network ದೇಶ - ವಿದೇಶ
ಲಕ್ನೋ, ಜುಲೈ 11: ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಶಂಕಿತ ಅಲ್ ಖೈದಾ ಉಗ್ರರಿಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಶಂಕೆಯ ಮೇರೆಗೆ ಪೊಲೀಸರು ಮನೆಯೊಂದಕ್ಕೆ ದಾಳಿ ನಡೆಸಿ ಸಜೀವ ಬಾಂಬ್ ಸೇರಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಮನೆಯೊಂದರ ಮೇಲೆ ನಿಗಾ ಇಟ್ಟಿದ್ದ ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು ಸರಣಿ ಆತ್ಮಹತ್ಯಾ ದಾಳಿಗೆ ಮುಂದಾಗಿದ್ದ ಉಗ್ರ ಪಡೆಯ ಜಾಲವನ್ನು ಪತ್ತೆ ಮಾಡಿದ್ದಾರೆ.
ಲಕ್ನೋದ ಜನನಿಬಿಡ ಪ್ರದೇಶಗಳಲ್ಲಿ ಆತ್ಮಾಹುತಿ ದಾಳಿ ನಡೆಸಲು ಅಲ್ ಖೈದಾ ಸಂಘಟನೆ ಸದಸ್ಯರು ಸಜ್ಜಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಎಟಿಎಸ್ ಸಿಬ್ಬಂದಿ ಲಕ್ನೋದ ನಿವಾಸದ ಮೇಲೆ ದಾಳಿ ನಡೆಸಿ, ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಿನಾಜ್ ಅಹ್ಮದ್ ಹಾಗೂ ನಾಸಿರುದ್ದೀನ್ ಅಕಾ ಮುಶೀರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಲಕ್ನೋದ ಕಕೋರಿ ಪ್ರದೇಶದ ನಿವಾಸಿಗಳಾಗಿದ್ದಾರೆ. ಇವರು ಅಲ್ ಖೈದಾ ಪ್ರೇರಿತ ಅನ್ಸಾರ್ ಖಜ್ವಾತ್ ಉಲ್ ಹಿಂದ್ ಸಂಘಟನೆಯ ಆತ್ಮಾಹುತಿ ದಾಳಿಯ ಸದಸ್ಯರು ಎನ್ನುವ ಮಾಹಿತಿ ಸಿಕ್ಕಿದೆ. ಈ ವೇಳೆ ನಾಲ್ವರು ಪರಾರಿಯಾಗಿದ್ದು ಅವರನ್ನು ಹಿಡಿಯಲು ಬಲೆ ಬೀಸಲಾಗಿದೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಆಗಸ್ಟ್ 15ರ ಒಳಗೆ ಲಕ್ನೋ ಸೇರಿ ಉತ್ತರ ಪ್ರದೇಶದ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ಹೂಡಲಾಗಿತ್ತು. ಘಟನೆ ಬೆನ್ನಲ್ಲೇ ಲಕ್ನೋ ಸೇರಿದಂತೆ ಉತ್ತರ ಪ್ರದೇಶದ ಪ್ರಮುಖ ಪಟ್ಟಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹರ್ದೋಯಿ, ಸೀತಾಪುರ್, ಬಾರಾಬಂಕಿ, ಉನ್ನಾವೋ ಹಾಗೂ ರಾಯ್ ಬರೇಲಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಖಚಿತ ಮಾಹಿತಿ ಪಡೆದು ಎಟಿಎಸ್ ಕಮಾಂಡೋಗಳು ಮನೆಯನ್ನು ಸುತ್ತುವರಿದಿದ್ದರು. ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಲಾಗಿತ್ತು. ಐಜಿ ಜಿ.ಕೆ.ಗೋಸ್ವಾಮಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಮನೆಯಲ್ಲಿ ಪಿಸ್ತೂಲ್, ಎರಡು ಪ್ರೆಷರ್ ಕುಕ್ಕರ್ ಬಾಂಬ್, ಟೈಂ ಬಾಂಬ್, ಡಿಟೋನೇಟರ್, 6 ರಿಂದ 7 ಕಿಲೋ ಸ್ಫೋಟಕ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಸಜೀವ ಬಾಂಬ್ ಪತ್ತೆ ಹಚ್ಚಲಾಗಿದ್ದು ನಿಷ್ಕ್ರಿಯ ಮಾಡಲಾಗಿದೆ.
ಈ ಮನೆ ಶಾಹಿದ್ ಎಂಬಾತನಿಗೆ ಸೇರಿದ್ದಾಗಿದ್ದು ಇಲ್ಲಿನ ಚಟುವಟಿಕೆ ಬಗ್ಗೆ ಎಟಿಎಸ್ ಅಧಿಕಾರಿಗಳು ಹಲವು ದಿನಗಳಿಂದ ನಿಗಾ ಇಟ್ಟಿದ್ದರು. ಮನೆಗೆ ಸಂಶಯಿತ ವ್ಯಕ್ತಿಗಳು ಬಂದು ಹೋಗುತ್ತಿದ್ದರು. ಸಂಶಯಾಸ್ಪದ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ಅನುಮಾನಗಳಿದ್ದವು.
ಈ ಉಗ್ರರು ಕಾಶ್ಮೀರ ಮೂಲದ ಉಗ್ರರ ಜೊತೆ ನಿರಂತರ ಸಂಪರ್ಕ ಹೊಂದಿದ್ದರು, ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಉತ್ತರ ಪ್ರದೇಶದ ವಿವಿಧೆಡೆ ಜನನಿಬಿಡ ಮತ್ತು ದೇವಸ್ಥಾನ ಪರಿಸರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ಹಾಕಿಕೊಂಡಿದ್ದರು.
ಕಾಕೋರಿ ಪ್ರದೇಶದಲ್ಲಿ ಆಸುಪಾಸಿನ ಮನೆಗಳನ್ನು ತೆರವು ಮಾಡಲಾಗಿದ್ದು ಪೊಲೀಸರು ಸುತ್ತುವರಿದಿದ್ದಾರೆ. ಈ ಮನೆಗೆ ಮೂರ್ನಾಲ್ಕು ಸಂಶಯಾಸ್ಪದ ವ್ಯಕ್ತಿಗಳು ಭೇಟಿ ನೀಡುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಟೆಲಿಗ್ರಾಂ ಏಪ್ ನಲ್ಲಿ ಉಗ್ರರು ವ್ಯವಹರಿಸಿಕೊಂಡಿದ್ದನ್ನು ಭದ್ರತಾ ಅಧಿಕಾರಿಗಳು ಪತ್ತೆ ಮಾಡಿ, ಕೃತ್ಯದ ಸುಳಿವು ಪಡೆದಿದ್ದರು. ಲಕ್ನೋ ಮತ್ತು ಕಾನ್ಪುರ ನಗರದಲ್ಲಿ ಉಗ್ರರಿಗೆ ಸ್ಥಳೀಯರ ನೆರವು ಲಭಿಸಿದ್ದನ್ನು ಪತ್ತೆ ಮಾಡಿದ್ದರು.
In a major operation, the Uttar Pradesh Anti-Terrorist Squad (ATS) has detained two terrorists linked to terrorist organisation Al-Qaeda from Kakori on the outskirts of Lucknow. Commandos of the UP ATS conducted a raid at several locations in Lucknow on Sunday after receiving intel reports about the presence of terrorists in the area. Officials told news agency ANI that the terrorists were in touch with people across the border. A search operation is still underway.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm